Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಚೇತನ ಪ್ರೌಢ ಶಾಲೆಯಲ್ಲಿ ಮೈಸೂರು ವಿಭಾಗ ಕ್ರಿಕೆಟ್‌ ಟೂರ್ನಿ

ಉಡುಪಿ: ಬ್ರಹ್ಮಾವರ ತಾಲೂಕಿನ ಹಂಗಾರಕಟ್ಟೆಯಲ್ಲಿರುವ ಬಿ.ಡಿ. ಶೆಟ್ಟಿ ಮೈದಾನಲ್ಲಿ ಅಕ್ಟೋಬರ್‌ 18ರಿಂದ 20 ರವರೆಗೆ ಮೈಸೂರು ವಿಭಾಗ ಮಟ್ಟದ Mysore Division Cricket Tournament  14 ಮತ್ತು 17 ವರ್ಷ ವಯೋಮಿತಿಯ ಕ್ರಿಕೆಟ್‌ ಟೂರ್ನಿ ನಡೆಯಲಿದೆ.

ಹಂಗಾರ ಕಟ್ಟೆಯ ಬಿ.ಡಿ. ಶೆಟ್ಟಿ ಮೈದಾನ ಹಾಗೂ ಎಸ್‌ಎಂಎಸ್‌ ಕಾಲೇಜು ಮೈದಾನಲ್ಲಿ ನಡೆಯಲಿರುವ ಈ ಟೂರ್ನಿಯು ಉಡುಪಿ ಜಿಲ್ಲಾಡಳಿತ, ಮತ್ತು ಜಿಲ್ಲಾ ಪಂಚಾಯಿತಿ ಉಡುಪಿ,ಚೇತನ ಪ್ರೌಢ ಶಾಲೆ ಹಾಗೂ ಬ್ರಹ್ಮಾವರ ತಾಲೂಕ ಅಥ್ಲೆಟಿಕ್ಸ್‌ ಅಸೋಸಿಯೇಷನ್‌ ಶ್ರಯದಲ್ಲಿ ನಡೆಯಲಿದೆ.

ನಿಯಮಗಳು:

10 ಓವರ್‌ಗಳ ಪಂದ್ಯವಾಗಿದ್ದು  ನಾಕೌಟ್‌ ಮಾದರಿಯಲ್ಲಿ ನಡೆಯಲಿದೆ. MCC ಕ್ರಿಕೆಟ್‌ ನಿಯಮದಂತೆ ಪಂದ್ಯಗಳು ನಡೆಯಲಿವೆ. ಅಸಭ್ಯವಾಗಿ ವರ್ತಿಸಿದ ಯಾವುದೇ ಆಟಗಾರನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಹಾಗೂ ಆ ತಂಡವನ್ನು ಟೂರ್ನಿಯಿಂದ ಅಮಾನತುಗೊಳಿಸಲಾಗುವುದು.

ಪ್ರತಿಯೊಬ್ಬ ಬೌಲರ್‌ಗೆ ಗರಿಷ್ಠ ಎರಡು ಓವರ್‌‌ ಎಸೆಯಲು ಮಾತ್ರ ಅವಕಾಶ. ನೋ ಬಾಲ್‌ಗೆ ಫ್ರೀ ಹಿಟ್‌ ಅವಕಾಶವಿದೆ. 14 ವರ್ಷ ವಯೋಮಿತಿಯ ವಿಭಾಗದಲ್ಲಿ ಬೌಲರ್‌ಗಳು ಗೆರೆಯನ್ನು ದಾಟಿದರೆ ಮಾತ್ರ ನೋ ಬಾಲ್‌. ಈ ವಿಭಾಗದಲ್ಲಿ ಇತರ ಯಾವುದೇ ರೀತಿಯ ನೋ ಬಾಲ್‌ ಇರುವುದಿಲ್ಲ.

ಪ್ರತಿಯೊಂದು ಇನ್ನಿಂಗ್ಸ್‌ 45 ನಿಮಿಷಗಳದ್ದಾಗಿರುತ್ತದೆ. ತಂಡಗಳು ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ನೀರು ಕುಡಿಯಲು ಇನ್ನಿಂಗ್ಸ್‌ ಬ್ರೇಕ್‌‌ ಇರುವುದಿಲ್ಲ, ವಿಕೆಟ್‌ ಉರುಳಿದಾಗ ಮತ್ತು ಬೌಂಡರಿ ಲೇನ್‌ನಲ್ಲಿ ಇದ್ದಾಗ ನೀರು ಕುಡಿಯಬಹುದು.ಪ್ರತಿಯೊಬ್ಬ ಆಟಗಾರ ಬಿಳಿ ಉಡುಪಿನಲ್ಲಿ ಇರತಕ್ಕದ್ದು, ಪಂದ್ಯ ಆರಂಭವಾಗುವುದಕ್ಕೆ  30 ನಿಮಿಷ ಮುಂಚಿತವಾಗಿ ತಲುಪಿರಬೇಕು. ತಡವಾಗಿ ತಲುಪಿದ ತಂಡಗಳಿಗೆ ದಂಡ ವಿಧಿಸಲಾಗುವುದು.  4 ನಿಮಿಷ ತಡವಾಗಿ ಬಂದರೆ ಆ ತಂಡದ 1 ಓವರ್‌‌ ಕಡಿತಗೊಳಿಸಲಾಗುವುದು. ಎದುರಾಳಿ ತಂಡಕ್ಕೆ ಪೂರ್ತಿ ಓವರ್‌ ಆಡುವ ಅವಕಾಶವಿರುತ್ತದೆ. ಟಾಸ್‌ ಸಮಯ ಮುಗಿದು 15 ನಿಮಿಷ ಕಳೆದರೂ ತಂಡವೊಂದು ಆಗಮಿಸದಿದ್ದರೆ ಎದುರಾಳಿ ತಂಡವನ್ನು ವಿಜೇತ ತಂಡವೆಂದು ಘೋಷಿಸಲಾಗುವುದು.

ಮೊದಲ ಬಾರಿಗೆ ಟೂರ್ನಿ:

ಬ್ರಹ್ಮಾವರ ವಲಯದಲ್ಲಿ ಇದೇ ಮೊದಲ ಬಾರಿಗೆ ಮೈಸೂರು ವಲಯ ಮಟ್ಟದ ಟೂರ್ನಿ ನಡೆಯುತ್ತಿದೆ. 62ನೇ ವರ್ಷವನ್ನು ಪೂರ್ಣಗೊಳಿಸಿರುವ ಚೇತನ ಪ್ರೌಢ ಶಾಲೆಯ ಹಿರಿಮೆಗೆ ಮತ್ತೊಂದು ಗರಿ. ಸುಮಾರು 25 ಲಕ್ಷ ರೂ. ವ್ಯಯ ಮಾಡಿ ಕ್ರೀಡಾಂಗಣಕ್ಕೆ ಹೊಸ ರೂಪು ನೀಡಲಾಗಿದೆ. ಇದು ನಮ್ಮ ಶಾಲೆಗೆ ಸಿಕ್ಕ ಗೌರವ, ಉತ್ತಮ ರೀತಿಯಲ್ಲಿ ಟೂರ್ನಿಯನ್ನು ಆಯೋಜಿಸಲಿದ್ದೇವೆ ಎಂದು ಚೇತನ ಪ್ರೌಢ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಭರತ್‌ ಶೆಟ್ಟಿ ಅವರು ಹೇಳಿದ್ದಾರೆ.


administrator