Thursday, December 12, 2024

ಗೆಲ್ಲುವ ಪಂದ್ಯದಲ್ಲಿ ಡ್ರಾಗೆ ತೃಪ್ತಿಪಟ್ಟ ಕರ್ನಾಟಕ

ಸ್ಪೋರ್ಟ್ಸ್ ಮೇಲ್ ವರದಿ :

ಕರ್ನಾಟಕ ಹಾಗೂ ಮುಂಬೈ ನಡುವೆ ಕುಂದಾ ನಗರಿಯಲ್ಲಿ ನಡೆದ ರಣಜಿ ಟ್ರೋಫಿ ಎಲೈಟ್ ಗಂಪು(ಎ) ಮೂರನೇ ಸುತ್ತಿನ ಪಂದ್ಯ ಅಂತಿಮವಾಗಿ ಡ್ರಾನಲ್ಲಿ ಮುಕ್ತಾಯವಾಯಿತು. ಮೊದಲ ಇನಿಂಗ್ಸ್   ನಲ್ಲಿ 195 ರನ್ ಮುನ್ನಡೆ ಗಳಿಸಿದ ಕಾರಣ ಕರ್ನಾಟಕ ಮೂರು ಅಂಕಗಳನ್ನು ಪಡೆಯಿತು.

ಮುಂಬೈ ಒಂದು ಅಂಕಕ್ಕೆೆ ತೃಪ್ತಿ ಪಟ್ಟಿತು. ಕರ್ನಾಟಕಕ್ಕೆ ಈ ಪಂದ್ಯದಲ್ಲಿ ಗೆಲ್ಲುವ ಅವಕಾಶವಿದ್ದಿತ್ತು, ಆದರೆ ಯೋಜನೆ ಇಲ್ಲದೆ ಆಡಿದ ಕಾರಣ ಡ್ರಾಗೆ ತೃಪ್ತಿಪಡಬೇಕಾಯಿತು.
ಮೂರು ವಿಕೆಟ್ ಕಳೆದುಕೊಂಡು 81ರನ್ ಗಳಿಂದ ನಾಲ್ಕನೇ ದಿನ ಎರಡನೇ ಇನಿಂಗ್ಸ್ ಶುರು ಮಾಡಿದ ಕರ್ನಾಟಕ 51 ಓವರ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು 170 ರನ್ ದಾಖಲಿಸಿತು. ಇದರೊಂದಿಗೆ ಮುಂಬೈಗೆ 365 ರನ್ ಗುರಿ ನೀಡಿತು. ಪ್ರಥಮ ಇನಿಂಗ್ಸ್  ನಲ್ಲಿ ಆಕರ್ಷಕ ಶತಕ ಸಿಡಿಸಿದ್ದ ಕೃಷ್ಣಮೂರ್ತಿ ಸಿದ್ಧಾರ್ಥ್ ದ್ವಿತೀಯ ಇನಿಂಗ್ಸ್  ನಲ್ಲೂ ಅಮೋಘ ಬ್ಯಾಟಿಂಗ್ ಮಾಡುವಲ್ಲಿ ಯಶಸ್ವಿಯಾದರು. 125 ಎಸೆತಗಳಿಗೆ ಒಂದು ಸಿಕ್ಸ್  ಹಾಗೂ ಆರು ಬೌಂಡರಿ ಸಹಿತ ಒಟ್ಟು 71 ರನ್ ಗಳಿಸಿ ಅಜೇಯರಾಗಿ ಉಳಿದರು. ಇನ್ನುಳಿದಂತೆ, ಸ್ಟುವರ್ಟ್ ಬಿನ್ನಿ 30 ಹಾಗೂ ಕೌನೇನ್ ಅಬ್ಬಾಸ್ 25 ರನ್ ಗಳಿಸಿದರು. ಗುರಿ ಬೆನ್ನತ್ತಿದ ಮುಂಬೈ ತಂಡ ಆರಂಭಿಕ ಆಘಾತ ಅನುಭವಿಸಿತು. ಮೊದಲ ಇನಿಂಗ್ಸ್  ನಲ್ಲಿ ಅರ್ಧ ಶತಕ ಸಿಡಿಸಿದ್ದ ಆರಂಭಿಕ  ಜೇ ಗೋಕುಲ್ ಬಿಸ್ತಾ ಅವರು ಎರಡನೇ ಇನಿಂಗ್ಸ್  ನಲ್ಲಿ ಕೇವಲ ಎರಡು ರನ್ ಗಳಿಸಿ ಅಭಿಮನ್ಯು ಮಿಥುನ್ ಎಸೆತದಲ್ಲಿ ಶರತ್‌ಗೆ ಕ್ಯಾಚ್ ನೀಡಿ ಬಹುಬೇಗ ನಿರ್ಗಮಿಸಿದರು. ನಂತರ, ಜತೆಯಾದ ಅಖಿಲ್ ಹರ್ವಾಡೇಕರ್ ಹಾಗೂ ಆಶಯ್ ಸರ್ದೆಸಾಯಿ ಜೋಡಿ 71 ರನ್‌ಗಳ ಜತೆಯಟದೊಂದಿಗೆ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿತು.
ಮೊದಲ ಇನಿಂಗ್ಸ್ ನಲ್ಲಿ ಕೇವಲ ಐದು ರನ್ ಗಳಿಸಿ ಔಟ್ ಆಗಿದ್ದ ಆರಂಭಿಕ ಬ್ಯಾಟ್ಸ್   ಮನ್ ಅಖಿಲ್ ಹರ್ವಾಡೇಕರ್ ದ್ವಿತೀಯ ಇನಿಂಗ್ಸ್  ನಲ್ಲಿ ಬ್ಯಾಟಿಂಗ್ ಲಯಕ್ಕೆೆ ಮರಳಿದರು. 74 ಎಸೆತಗಳಿಗೆ ಒಂಬತ್ತು ಬೌಂಡರಿಯೊಂದಿಗೆ 53 ರನ್ ಗಳಿಸಿದರು. ನಂತರ, ಅಭಿಮನ್ಯು ಮಿಥನ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಇವರನ್ನು ಬಿಟ್ಟರೆ, ಮಧ್ಯಮ ಕ್ರಮಾಂಕದಲ್ಲಿ ಜವಬ್ದಾರಿಯುತ ಬ್ಯಾಟಿಂಗ್ ಮಾಡಿದ ಸೂರ್ಯ ಕುಮಾರ್ ಯಾದವ್ ಮುಂಬೈಗೆ ತಡೆಗೋಡೆಯಾಗಿ ನಿಂತರು. ಕರ್ನಾಟಕ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಸೂರ್ಯಕುಮಾರ್, ಯಾವುದೆ ತಪ್ಪು ಹೊಡೆತಗಳಿಗೆ ಕೈ ಹಾಕಲಿಲ್ಲ. ಇದರೊಂದಿಗೆ ತಾಳ್ಮೆೆಯ ಇನಿಂಗ್ಸ್  ಕಟ್ಟಿದರು. 118 ಎಸೆತಗಳನ್ನು ಎದುರಿಸಿದ ಅವರು, ಎಂಟು ಬೌಂಡರಿಯೊಂದಿಗೆ ಒಟ್ಟು 53 ರನ್ ದಾಖಲಿಸಿ ಅಜೇಯರಾಗಿ ಉಳಿದರು. ತಂಡಕ್ಕೆೆ  ಸೋಲಿನ ಅಪಾಯ ಎದುರಾಗದಂತೆ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತರು. ಒಟ್ಟಾರೆ, ಮುಂಬೈ ನಾಲ್ಕನೇ ದಿನದ ಮುಕ್ತಾಯಕ್ಕೆೆ 64 ಓವರ್‌ಗಳಿಗೆ ನಾಲ್ಕು ವಿಕೆಟ್ ನಷ್ಟಕ್ಕೆೆ 173 ರನ್ ಗಳಿಸಿತು. ಇದರೊಂದಿಗೆ ಪಂದ್ಯ ಡ್ರಾಾನಲ್ಲಿ ಮುಕ್ತಾಯವಾಯಿತು.
ಕರ್ನಾಟಕ ಪರ ಅಮೋಘ ಬ್ಯಾಟಿಂಗ್ ಮಾಡಿದ  ಸಿದ್ಧಾರ್ಥ್ ಪಂದ್ಯದ ಲ್ಲಿ ಒಟ್ಟು  232 ರನ್ ಗಳಿಸುವ ಮೂಲಕ ಎಲ್ಲರ ಗಮನ ಸೆಳೆದರು.

Related Articles