Wednesday, November 6, 2024

ಕ್ರಿಕೆಟ್ ಗುರುವಿಗೆ ಕಣ್ಣೀರ ವಿದಾಯ

ಸ್ಪೋರ್ಟ್ಸ್ ಮೇಲ್ ವರದಿ

ಸಚಿನ್ ತೆಂಡೂಲ್ಕರ್, ವಿನೋದ್ ಕಾಂಬ್ಳಿ, ಪ್ರವೀಣ್ ಆಮ್ರೆ, ಅಜಿತ್ ಅಗರ್ಕರ್, ಚಂದ್ರಕಾಂತ್ ಪಂಡಿತ್, ಬಲ್ವಿಂದರ್ ಸಿಂಗ್ ಸಂಧೂ, ಅಮೋಲ್ ಮಜುಂದಾರ್, ರಮೇಶ್ ಪೊವಾರ್, ಸಂಜಯ್ ಬಾಂಗಾರ್, ಪರಾಸ್ ಮಹಾಂಬ್ರೆ, ಲಾಲ್‌ಚಂದ್ ರಜಪೂತ್, ಸುಲಕ್ಷಣ್ ಕುಲಕರ್ಣಿ, ರಾಮನಾಥ್ ಪಾರ್ಕರ್, ದಿನೇಶ್ ಲಾಡ್ ಹೀಗೆ ಕ್ರಿಕೆಟ್ ಜಗತ್ತಿಗೆ ಅಪಾರ ಸಾ‘ಕರನ್ನು ನೀಡಿ ಬುಧವಾರ ರಾತ್ರಿ ಇಹಲೋಕವನ್ನು ತ್ಯಜಿಸಿದ ಕ್ರಿಕೆಟ್ ಗುರು ರಮಾಕಾಂಚ್ ಅಚ್ರೇಕರ್ ಅವರಿಗೆ ಗುರುವಾರ ಶಿವಾಜಿ ಪಾರ್ಕ್‌ನಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸೇರಿದಂತೆ ಅನೇಕ ಗಣ್ಯರು ಹಾಗೂ ರಮಾಕಂತ್ ಅಚ್ರೇಕರ್ ಅವರ ಶಿಷ್ಯರು ಗುರುವಿನ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡರು. ಅಚ್ರೇಕರ್ ಅವರಿಗೆ 87 ವರ್ಷ ವಯಸ್ಸಾಗಿತ್ತು. ದ್ರೋಣಾಚಾರ್ಯ ಹಾಗೂ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿರುವ ರಮಾಕಾಂಚ್ ಅಚ್ರೇಕರ್ ಅವರ ಅಂತಿಮ ಯಾತ್ರೆಯಲ್ಲಿ ಶಿವಾಜಿ ಪಾರ್ಕ್‌ನಲ್ಲಿ ನಿತ್ಯವೂ ಆಡುತ್ತಿದ್ದ ಯುವ ಕ್ರಿಕೆಟಿಗರು  ಪಾಲ್ಗೊಂಡರು. ಮಾಜಿ ಕ್ರಿಕೆಟಿಗರು, ಹಿರಿಯ ರಾಜಕಾರಣಿಗಳು ಕೂಡ ,ಜಗತ್ತು ಕಂಡ ಶ್ರೇಷ್ಠ ಗುರುವಿಗೆ ಅಂತಿಮ ನಮನ ಸಲ್ಲಿಸಿದರು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹಾಗೂ ದೇಶದ ಇತರ ಕ್ರಿಕೆಟ್ ಸಂಸ್ಥೆಗಳು ಮಹಾ ಚೇತನಕ್ಕೆ ನುಡಿ ನಮನ ಸಲ್ಲಿಸಿವೆ.

Related Articles