Thursday, October 10, 2024

ಪ್ರಚಾರ ದ್ರಾವಿಡ್ ಮಗನಿಗೆ ಸದ್ದಿಲ್ಲದೆ ಆಡಿದ್ದು ಕಾರ್ತಿಕೇಯ

ಇತ್ತೀಚಿಗೆ ಮುಕ್ತಾಯಗೊಂಡ ಮಾಹಾರಾಜ ಟ್ರೋಫಿಯಲ್ಲಿ ಮಿಂಚಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರ ಮಗ ಹೊಡೆದ ಒಂದೆರಡು ಸಿಕ್ಸರ್ ಗೆ ಕೊಟ್ಟ ಪ್ರಚಾರ ಮತ್ತು ಸಮಿತ್ ಆಸ್ಟ್ರೇಲಿಯಾ ವಿರುದ್ಧ ಆಡಲಿರುವ ಭಾರಯ U19 ತಂಡಕ್ಕೆ ಆಯ್ಕೆಯಾದಾಗ ಕೊಟ್ಟ ಪ್ರಚಾರವನ್ನು ಗಮನಿಸಿದಾದ ಅಚ್ಚರಿಯಾಗಿತ್ತು. Not Samit Dravid it is Kannadiga KP Karthikeya shows all round performance against Australia U19 team.
ಸಮಿತ್ ದ್ರಾವಿಡ್ ಆಡುವ 11 ಆಟಗಾರರಲ್ಲೇ ಸ್ಥಾನ ಪಡೆದಿಲ್ಲ. ಆದರೆ ನಮ್ಮ ಕರ್ನಾಟಕದ ಆಲ್ರೌಂಡರ್ ಕೆ.ಪಿ. ಕಾರ್ತಿಕೇಯ ಅಜೇಯ 85 ರನ್ ಗಳಿಸಿದ್ದು ಮಾತ್ರವಲ್ಲದೆ 30 ರನ್ ಗೆ 2 ವಿಕೆಟ್ ಗಳಿಸಿ ಭಾರತದ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಭಾರತ ಪ್ರವಾಸಿ ಆಸ್ಟ್ರೇಲಿಯಾವನ್ನು 184 ರನ್ ಗೆ ಕಟ್ಟಿ ಹಾಕಿತು.
50 ಓವರ್ ಗಳಲ್ಲಿ 185 ರನ್ ಗಳ ಸುಲಭ ಜಯದ ಗುರಿಹೊಥತ ಭಾರತದ ಪರ ನಾಯಕ ಮೊಹಮ್ಮದ್ ಅಮಾನ್ (58) ಹಾಗೂ ಕಾರ್ತಿಕೇಯ (85) ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ 36 ಓವರ್ ಗಳಲ್ಲೇ ಜಯ ತಂದಿತ್ತರು. ಕಾರ್ತಿಕೇಯ ಅವರು 99 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 2 ಸಿಕ್ಸರ್ ಅದ್ಭುತ ಆಟ ಪ್ರದರ್ಶಿಸಿದರು. ಭಾರತ 32 ರನ್ ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದಾಗ ನಾಯಕ ಮೊಹಮ್ಮದ್ ಅಮಾನ್ ಮತ್ತು ಕಾರ್ತಿಕೇಯ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು.‌

Related Articles