Friday, June 14, 2024

ದೇಶ ಬಿಟ್ಟು ಹೋಗಿ ಅಂದಿದ್ದ ಕೊಹ್ಲಿಗೆ ವಿಶ್ವನಾಥನ್ ಆನಂದ್ ಹೇಳಿದ್ದೇನು?

ಕೊಲ್ಕತಾ:

ವಿದೇಶಿ ಆಟಗಾರರನ್ನು ಇಷ್ಟಪಟ್ಟು, ಸ್ವದೇಶಿ ಆಟಗಾರರನ್ನು ಇಷ್ಟ ಪಡದವರು ದೇಶ ಬಿಟ್ಟು ಹೋಗಿ ಎಂದಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾತಿಗೆ ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ, ಕೊಹ್ಲಿ ಸ್ವಲ್ಪ ಭಾವನಾತ್ಮಕವಾಗಿ ತಮ್ಮ ನಿಯಂತ್ರಣ ತಪ್ಪಿ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದರು.

ಮನಸ್ಸಿಗೆ ತೋಚಿದ್ದು, ಯೋಚನೆ ಮಾಡದೆ ವಿರಾಟ್ ಈ ರೀತಿಯಾಗಿ ಹೇಳಿರಬಹುದು. ಆದರೆ, ಯಾರ ಮನಸಿಗೂ ನೋವು ಕೊಡುವುದು ಅವರ ಉದ್ದೇಶವಲ್ಲ. ಒಬ್ಬ ಕ್ರೀಡಾಪಟು ಅಂದಮೇಲೆ ಜಿದ್ದು. ಕೋಪ, ತಾಪ ಇರುತ್ತದೆ. ಈ ರೀತಿಯಲ್ಲಿ ಮನಸ್ಸಿಗೆ ಅನಿಸಿದ್ದನ್ನು ಅವರು ಹೇಳಿದ್ದಾರೆ ಎಂದು ಹೇಳಿದರು

Related Articles