Friday, December 13, 2024

ಆಸ್ಟ್ರೇಲಿಯಾಕ್ಕೆ ಫಾಲೋ ದಿ ಲೀಡರ್

ಏಜೆನ್ಸೀಸ್ ಸಿಡ್ನಿ

ಆಸ್ಟ್ರೇಲಿಯಾ ನೆಲದಲ್ಲಿ ಸರಣಿ ಜಯ ಸಾಧಿಸುವ ಭಾರತದ ಕನಸು ನಾಲ್ಕನೇ ದಿನದಲ್ಲಿ ಇಡೇರಲಿಲ್ಲ. ಮಳೆ ಹಾಗೂ ಪ್ರತಿಕೂಲ ವಾತಾವರಣದ ಹಿನ್ನೆಲೆಯಲ್ಲಿ ದಿನದ ಪೂರ್ಣ ಆಟ ಆಡುವ ಅವಕಾಶ ಸಿಗಲಿಲ್ಲ. ಭಾರತವನ್ನು ಎರಡನೇ ಇನ್ನಿಂಗ್ಸ್‌ಗೆ ಆರಂಭಿಸಲು ಆಸ್ಟ್ರೇಲಿಯಾ ಇನ್ನೂ 316 ರನ್ ಗಳಿಸಬೇಕಾಗಿದೆ. ಇದು ಅಂತಿಮ ದಿನದಲ್ಲಿ ಕಷ್ಟ ಸಾಧ್ಯ.

ನಾಲ್ಕನೇ ದಿನದಲ್ಲಿ ಭಾರತ ನಾಲ್ಕು ವಿಕೆಟ್ ಗಳಿಸುವ ಮೂಲಕ ಆಸ್ಟ್ರೇಲಿಯಾ 300 ರನ್‌ಳಿಗೆ  ಸರ್ವ ಪತನ ಕಂಡಿತು. ಕುಲ್‌ದೀಪ್ ಯಾದವ್ 99 ರನ್‌ಗೆ 5 ವಿಕೆಟ್ ಗಳಿಸಿ ಆಸೀಸ್ ತಂಡವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
1988ರ ನಂತರ ಆಸ್ಟ್ರೇಲಿಯಾ ಇದೇ ಮೊದಲ ಬಾರಿಗೆ ಮನೆಯಂಗಣದಲ್ಲಿ ಫಾಲೋ ಆನ್‌ಗೆ ಸಿಲುಕಿತು. 31 ವರ್ಷಗಳಲ್ಲಿ 171 ಪಂದ್ಯಗಳನ್ನಾಡಿರುವ ಆಸ್ಟ್ರೇಲಿಯಾ ಮನೆಯಂಗಣದಲ್ಲಿ ಇದುವರೆಗೂ ಫಾಲೋ ಆನ್‌ಗೆ ಸಿಲುಕಿರಲಿಲ್ಲ. ಭಾರತ ಒಟ್ಟು ನಾಲ್ಕು ಬಾರಿ ಆಸ್ಟ್ರೇಲಿಯಾ ತಂಡವನ್ನು ಫಾಲೋ ಆನ್‌ಗೆ ಸಿಲುಕಿಸಿತ್ತು. ‘ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಪ್ರಥಮ ಇನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ (322)ಅಂತರದಲ್ಲಿ ಮುನ್ನಡೆ ಕಂಡಿರುವುದು ಇದು ಎರಡನೇ ಬಾರಿ. ಕೋಲ್ಕೊತಾ ಟೆಸ್ಟ್‌ನಲ್ಲಿ 400 ರನ್‌ಗಳ ಮುನ್ನಡೆ ಕಂಡಿತ್ತು.
 ನಾಲ್ಕನೇ ದಿನದಾಟ ಮುಕ್ತಾಯಗೊಂಡಾಗ ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೆ 6 ರನ್ ಗಳಿಸಿತ್ತು.

Related Articles