Saturday, July 27, 2024

ಗಂಭಿರ್‌ ಮಾನಸಿಕ ಚಿಕೆತ್ಸೆಯ ಅಗತ್ಯವಿದೆ: ಅಫ್ರಿದಿ

ನವದೆಹಲಿ: ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಶಾಹಿದ್‌ ಅಫ್ರಿದಿ ಹಾಗೂ ಭಾರತ ತಂಡದ ಮಾಜಿ ಆರಂಭಿಕ ಹಾಗೂ ಬಿಜೆಪಿ ಲೋಕಸಭಾ ಚುನಾವಣಾ ಅಭ್ಯರ್ಥಿ ಗೌತಮ್ ಗಂಭೀರ್‌ ಅವರ ಮಾತಿನ ಸಮರ ಏಕೋ ಮುಗಿಯುವಂತಿಲ್ಲ.

ಭಾನುವಾರವಷ್ಟೆ ಮನೋತಜ್ಞರ ಬಳಿ ಕರೆದುಕೊಂಡು ಹೋಗುತ್ತೇನೆ ಭಾರತಕ್ಕೆ ಬನ್ನಿ ಎಂದು ಹೇಳಿದ್ದ ಗಂಭೀರ್‌ ಮಾತಿಗೆ ಪ್ರತಿಕ್ರಿಯಿಸಿರುವ ಅಫ್ರಿದಿ ನಿಮಗೆ ಚಿಕಿತ್ಸೆ ಅಗತ್ಯವಿದೆ. ಹಾಗಾಗಿ, ಪಾಕಿಸ್ತಾನಕ್ಕೆ ಬನ್ನಿ ನಿಮಗೆ ಒಳ್ಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

ಶಾಹಿದ್‌ ಅಫ್ರಿದಿ ಅವರ ಆತ್ಮ ಚರಿತ್ರೆ “ಗೇಮ್ ಚೇಂಜರ್” ಪುಸ್ತಕ ಇತ್ತೀಚೆಗೆ ಬಿಡುಗಡೆಯಾಗಿದ್ದು, ಇದರಲ್ಲಿ ಗೌತಮ್ ಗಂಭಿರ್‌ ಅವರ ಭಾರತದ ಇತರೆ ಆಟಗಾರರಿಗಿಂತ ಉತ್ತಮ ಆಟಗಾರನಲ್ಲ. ಅವರಿದೆ ವರ್ತನೆಯಲ್ಲಿ ಸಮಸ್ಯೆಯಿದೆ ಎಂದು ವ್ಯಂಗ್ಯವಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಗಂಭೀರ್‌, ಅಪ್ರಿದಿ ಅವರು ಒಬ್ಬ ಹಾಸ್ಯಸ್ಪದ ವ್ಯಕ್ತಿ. ಅವರಿಗೆ ಭಾರತಕ್ಕೆ ಬರುಲು ವೀಸಾ ಕೊಡಿಸುತ್ತೇನೆ. ನಂತರ ಅವರನ್ನು ಮನೋತಜ್ಞರ ಬಳಿ ತಾನೇ ಖುದ್ದಾಗಿ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದರು.

ಇದಕ್ಕೆ ಇಂದು ಪ್ರತಿಕ್ರಿಯಿಸಿರುವ ಅಫ್ರಿದಿ ” ಭಾರತದಿಂದ ಪಾಕಿಸ್ತಾನಕ್ಕೆ ಗಂಭಿರ್‌ ಬರಲು ವೀಸಾ ವ್ಯವಸ್ಥೆ ಮಾಡುತ್ತೇನೆ. ಭಾರತ ಸರ್ಕಾರ ಪಾಕಿಸ್ತಾನದವರಿಗೆ ವೀಸಾ ನೀಡಲು ನಿರಾಕರಿಸುತ್ತದೆ. ಆದರೆ, ಭಾರತದಿಂದ ಪಾಕಿಸ್ತಾನಕ್ಕೆ ಬರಲು ನಾನೇ ಖುದ್ದಾಗಿ ನಿಂತು ವೀಸಾ ಕೊಡಿಸುತ್ತೇನೆ. ಗಂಭೀರ್‌ ಇಲ್ಲಿಗೆ ಆಗಮಿಸಿದರೆ ಅವರಿಗೆ ಒಳ್ಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತೇನೆ ಎಂದು ಅಫ್ರಿದಿ ತಿರುಗೇಟು ನೀಡಿದ್ದಾರೆ.

Related Articles