Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಬಿಗ್‌ ಬ್ಯಾಷ್‌ ಲೀಗ್‌ಗೆ ಬಿಗ್ ಲಾಸ್

ಮೆಲ್ಬೋರ್ನ್‌: ಕುಟುಂಬದ ಜತೆ ಹೆಚ್ಚು ಸಮಯ ಕಳೆಯುವ ಉದ್ದೇಶದಿಂದ ಬಿಗ್ ಬ್ಯಾಷ್‌ ಲೀಗ್‌ಗೆ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಶೇನ್‌ ವ್ಯಾಟ್ಸ್‌ನ್ ವಿದಾಯ ಘೋಷಿಸಿದ್ದಾರೆ.

“ಸಿಡ್ನಿ ಥಂಡರ್‌ ತಂಡದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ನನಗೆ ಸಹಕರಿಸಿದ ಎಲ್ಲ ಸಹ ಆಟಗಾರರಿಗೆ ಧನ್ಯವಾದಗಳು” ಈ ತಂಡದಲ್ಲಿ ಮರೆಯಲಾಗದ ನೆನಪುಗಳಿವೆ. 2016ರಲ್ಲಿನ ಜಯ ಎಂದೂ ಮರೆಯಲು ಸಾಧ್ಯವೇ ಇಲ್ಲ. ನಿಕ್ಕಿ ಕಮಿನ್ಸ್‌, ಪ್ಯಾಡಿ ಉಪ್ಟನ್‌. ಲೀ ಗೆರ್ಮೊನ್‌ ಹಾಗೂ ಶೇನ್‌ ಬಾಡ್‌ ಅವರಿಗೆ ವಿಶೇಷವಾಗಿ ಧನ್ಯವಾದ ಹೇಳಲು ಬಯಸುತ್ತೇನೆ.” ಎಂದು ಶೇನ್‌ ವ್ಯಾಟ್ಸ್‌ನ್‌ ತಿಳಿಸಿದ್ದಾರೆ.
37ರ ಪ್ರಾಯದ ವ್ಯಾಟ್ಸನ್‌ ಕಳೆದ ನಾಲ್ಕು ಆವೃತ್ತಿಗಳಲ್ಲಿ ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ಸಿಡ್ನಿ ಥಂಡರ್‌ ತಂಡದ ಪರವಾಗಿ ಆಡಿದ್ದು, ಕಳೆದ ಮೂರು ಚರಣಗಳಲ್ಲಿ ತಂಡವನ್ನು ಬಲಗೈ ಬ್ಯಾಟ್ಸ್‌ಮನ್‌ ಮುನ್ನಡೆಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಅವರು ಒಂದು ಶತಕ ಸೇರಿದಂತೆ ಒಟ್ಟು 1, 014 ರನ್‌ಗಳೊಂದಿಗೆ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರರಾಗಿ ಹೊರಹೊಮ್ಮಿದ್ದರು.

“ ತಂಡದಲ್ಲಿ ಯಶ ಸಾಧಿಸಿದಾಗ ಹಾಗೂ ವಿಫಲವಾದಾಗ ತಂಡದ ಮ್ಯಾನೇಜ್‌ಮೆಂಟ್‌ ಸಹಕರಿಸಿದೆ. ಇದು ತಂಡದಲ್ಲಿ ಆತ್ಮವಿಶ್ವಾಸ  ಮೂಡಿಸುತ್ತಿತ್ತು.ಇದು ಎಲ್ಲ ಆಟಗಾರರಿಗೂ ನೆರವಾಗಿದೆ. ಅದ್ಭುತ ಸಹ ಆಟಗಾರರೊಂದಿಗೆ ಸಮಯ ಕಳೆದಿದ್ದು, ಅವರು ಮುಂದಿನ ಆವೃತ್ತಿಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಲಿ” ಎಂದು ವ್ಯಾಟ್ಸನ್‌ ಅವರು ಆಶಿಸಿದರು.


administrator