Saturday, September 30, 2023

ಏಷ್ಯನ್‌ ಬಾಕ್ಸಿಂಗ್‌: ಅಮಿತ್‌ ಪಂಗಲ್‌ಗೆ ಚಿನ್ನದ ಪದಕ

ಬ್ಯಾಂಕಾಕ್‌:  ಏಷ್ಯನ್‌ ಕ್ರೀಡಾಕೂಟ ಚಾಂಪಿಯನ್‌ ಅಮಿತ್‌ ಪಂಗಲ್(52 ಕೆ.ಜಿ) ಅವರು ಇಂದು ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ.

ಕಳೆದ ವರ್ಷ ಅಮಿತ್‌ ಪಂಗಲ್‌ ಅವರು ಏಷ್ಯನ್‌ ಕ್ರೀಡಾಕೂಟದಲ್ಲಿ ಕೊರಿಯಾದ ಕಿಮ್‌ ಇಂಕ್ಯೂ ಅವರನ್ನು ಮಣಿಸಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರು. ಇದರೊಂದಿಗೆ ಅವರು ಆ ವರ್ಷದಲ್ಲಿ ಎರಡು ಚಿನ್ನದ ಪದಕ ಗೆದ್ದಿದ್ದರು.

23ರ ಪ್ರಾಯದ ಅಮಿತ್‌ ಪಂಗಲ್‌ ಅವರು 49 ಕೆ.ಜಿ ಸ್ಪರ್ಧೆಯಿಂದ ಇದೇ ಮೊದಲ ಬಾರಿಗೆ 52 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿ ಅಂದುಕೊಂಡಂತೆ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಇದಕ್ಕೂ ಮೊದಲು ಅವರು ಕಳೆದ ಫೆಬ್ರವರಿಯಲ್ಲಿ ಸ್ಟ್ರಾಂಡ್ಜಾ ಮೆಮೋರಿಯಲ್ ಟೂರ್ನಿಯಲ್ಲಿ ಚಿನ್ನದ ಪದಕ ಜಯಿಸಿದ್ದರು.
ಮತ್ತೊಂದು ಚಿನ್ನದ ಪದಕದ ನಿರೀಕ್ಷೆಯಲ್ಲಿದ್ದ 49 ಕೆ.ಜಿ ವಿಭಾಗದ ದೀಪಕ್‌ ಸಿಂಗ್‌ಗೆ ಶುಕ್ರವಾರ ಭಾರಿ ನಿರಾಸೆ ಉಂಟಾಯಿತು. ಫೈನಲ್‌ ಹಣಾಹಣಿಯಲ್ಲಿ ಉಜ್ಬೇಕಿಸ್ತಾನದ ನೋಡಿರ್ಜಾನ್  ಮಿರ್ಝಾಮೆಡೋವ್ ಅವರ ವಿರುದ್ಧ ಸೋಲು ಅನುಭವಿಸುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತರಾದರು.
ಭಾರತದ ಮತ್ತೊಬ್ಬ ಬಾಕ್ಸರ್‌ ಕವಿಂದರ್‌ ಸಿಂಗ್‌ ಬಿಷ್ಟ್‌ ಅವರು 56 ಕೆ.ಜಿ ವಿಭಾಗದ ಫೈನಲ್‌ ಪಂದ್ಯದಲ್ಲಿ ಉಜ್ಬೇಕಿಸ್ತಾನದ ಮಿರಾಜಿಜ್ಬೆಕ್ ಮಿರ್ಜಾಖಲಿಲೋವ್ ಅವರ ವಿರುದ್ಧ ಪರಾಭವಗೊಂಡರು. ಆ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.

Related Articles