Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಜಪಾನ್‌ನಲ್ಲಿ ಇತಿಹಾಸ ಬರೆದ ಕನ್ನಡಿಗ ಚಿರಂತ್ ವಿಶ್ವನಾಥ್

ಬೆಂಗಳೂರು: ಬೆಂಗಳೂರಿನ ಯುವ ಮೋಟಾರ್‌ಸ್ಪೋರ್ಟ್ ಪ್ರತಿಭೆ ಚಿರಂತ್ ವಿಶ್ವನಾಥ್ ಜಪಾನ್‌ನ ಪ್ರತಿಷ್ಠಿತ ಮೊಬಿಲಿಟಿ ರಿಸಾರ್ಟ್ ಮೊಟೆಗಿ ರೇಸ್‌ಟ್ರ್ಯಾಕ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಎಫ್‌ಐಎಂ ಏಷ್ಯಾ ರೋಡ್ ರೇಸಿಂಗ್ ಚಾಂಪಿಯನ್‌ಶಿಪ್‌ನ ಟಿವಿಎಸ್ ಏಷ್ಯಾ ಚಾಂಪಿಯನ್‌ಶಿಪ್ ವಿಭಾಗದ ಮೂರನೇ ಸುತ್ತಿನಲ್ಲಿ ಅವರು ಒಂದು ರೇಸ್‌ನಲ್ಲಿ ಗೆಲುವು ಸಾಧಿಸಿ, ಮತ್ತೊಂದು ರೇಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದು ಈ ಸಾಧನೆ ಮಾಡಿದ್ದಾರೆ. Chiranth Vishwanath from Bengaluru scripted history when he became the first Indian to win a race at the iconic Mobility Resort Motegi racetrack in Japan.

ಅಧಿಕೃತ ಅಭ್ಯಾಸ ಅವಧಿಯಲ್ಲಿ ಹಲವು ವೇಗದ ಸುತ್ತುಗಳನ್ನು ಪೂರ್ಣಗೊಳಿಸಿದ್ದ 18 ವರ್ಷದ ಚಿರಂತ್, ಅರ್ಹತಾ ಸುತ್ತಿನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು. ಟಿವಿಎಸ್ ಅಪಾಚೆ ಆರ್‌ಆರ್ 310 ಬೈಕ್‌ನಲ್ಲಿ ಸ್ಪರ್ಧಿಸಿದ ಅವರು, ಮೊದಲ ರೇಸ್‌ನಲ್ಲಿ ಆರಂಭದಿಂದಲೇ ಮುನ್ನಡೆ ಸಾಧಿಸಿ ಅದ್ಭುತ ಪ್ರದರ್ಶನ ನೀಡಿದರು.

ಎಂಟು ಸುತ್ತುಗಳ ರೇಸ್‌ನ ಐದನೇ ಸುತ್ತಿನಲ್ಲಿ ಮತ್ತೊಬ್ಬ ರೈಡರ್ ಜೊತೆಗಿನ ಸಂಪರ್ಕದಿಂದಾಗಿ ಚಿರಂತ್ ಐದನೇ ಸ್ಥಾನಕ್ಕೆ ಕುಸಿದಿದ್ದರು. ಆದರೆ ಅವರು ಆತ್ಮಸ್ಥೈರ್ಯ ಕಳೆದುಕೊಳ್ಳದೆ ಕೊನೆಯ ಸುತ್ತಿನಲ್ಲಿ ಮೂವರು ರೈಡರ್‌ಗಳನ್ನು ಹಿಂದಿಕ್ಕಿ ಮೊದಲ ಸ್ಥಾನವನ್ನು ತಮ್ಮದಾಗಿಸಿಕೊಂಡರು. ಇದು ಈ ಚಾಂಪಿಯನ್‌ಶಿಪ್‌ನಲ್ಲಿ ಅವರ ಮೊದಲ ಗೆಲುವಾಗಿದೆ. ಎರಡನೇ ರೇಸ್‌ನಲ್ಲೂ ಚಿರಂತ್ ಉತ್ತಮ ಪ್ರದರ್ಶನ ಮುಂದುವರಿಸಿ ಕೊನೆಯ ಸುತ್ತಿನವರೆಗೂ ಎರಡನೇ ಸ್ಥಾನದಲ್ಲಿದ್ದರು. ಆದರೆ ಮತ್ತೊಮ್ಮೆ ಎದುರಾಳಿ ರೈಡರ್ ಜೊತೆಗಿನ ಸಂಪರ್ಕದಿಂದಾಗಿ ಎರಡು ಸ್ಥಾನಗಳನ್ನು ಕಳೆದುಕೊಂಡು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು.

ವಾರಾಂತ್ಯದ ಪ್ರದರ್ಶನದ ಬಗ್ಗೆ ಪ್ರತಿಕ್ರಿಯಿಸಿದ ಚಿರಂತ್, “ಇದು ನನಗೆ ಸವಾಲಿನ ಆದರೆ ಉತ್ತಮ ವಾರಾಂತ್ಯವಾಗಿತ್ತು. ಮೊದಲ ರೇಸ್‌ನಲ್ಲಿ ಉತ್ತಮ ವೇಗವನ್ನು ಕಾಯ್ದುಕೊಂಡಿದ್ದೆ. ಸ್ಥಾನ ಕಳೆದುಕೊಂಡರೂ ಸಮಾಧಾನ ಕಳೆದುಕೊಳ್ಳದೆ ಕೊನೆಯ ಸುತ್ತಿನಲ್ಲಿ ಮೂವರು ಮುಂಚೂಣಿ ರೈಡರ್‌ಗಳನ್ನು ಹಿಂದಿಕ್ಕಿ ಗೆಲುವು ಸಾಧಿಸಿದೆ. ಎರಡನೇ ರೇಸ್‌ನಲ್ಲಿ ಪೋಡಿಯಂ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾಗ ಮತ್ತೊಂದು ಸಂಪರ್ಕದಿಂದ ಎರಡು ಸ್ಥಾನಗಳನ್ನು ಕಳೆದುಕೊಂಡೆ. ಆದರೂ ನಾಲ್ಕನೇ ಸ್ಥಾನ ಪಡೆದಿದ್ದೇನೆ. ಇದು ನನಗೆ ಉತ್ತಮ ಕಲಿಕೆಯ ಅನುಭವವಾಗಿದೆ. ಟಿವಿಎಸ್ ರೇಸಿಂಗ್, ನನ್ನ ಪ್ರಾಯೋಜಕರು ಹಾಗೂ ಕುಟುಂಬದ ಬೆಂಬಲಕ್ಕೆ ನಾನು ಕೃತಜ್ಞನಾಗಿದ್ದೇನೆ,” ಎಂದು ಹೇಳಿದರು. ಈ ಗೆಲುವು ಮತ್ತು ನಾಲ್ಕನೇ ಸ್ಥಾನದೊಂದಿಗೆ ಚಿರಂತ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ. ಆಗಸ್ಟ್‌ನಲ್ಲಿ ಇಂಡೋನೇಷ್ಯಾದಲ್ಲಿ ನಡೆಯಲಿರುವ ಮುಂದಿನ ಸುತ್ತಿನ ಸ್ಪರ್ಧೆಗೆ ಅವರು ಸಜ್ಜಾಗುತ್ತಿದ್ದಾರೆ.


administrator