19ನೇ ತಿಂಗಳ ಚೆಸ್ ಚಾಂಪಿಯನ್‌ಷಿಪ್: ಅಕ್ಷಯಕಲ್ಪಾ ಗ್ರ್ಯಾನ್‌ಪ್ರಿ ಫೈನಲ್ ಟೂರ್ನಿ

0
433
ಸ್ಪೋರ್ಟ್ಸ್ ಮೇಲ್ ವರದಿ 

ಬೆಂಗಳೂರು ನಾರ್ತ್ ಚೆಸ್ ಫೋರಂ (ರಿ), ಭಾರತ್ ಎಲೆಕ್ಟ್ರಾನಿಕ್ಸ್ ಆಫಿಸರ್ಸ್ ಕ್ಲಬ್, ಅಕ್ಷಯಕಲ್ಪಾ ಹಾಗೂ ಗ್ರ್ಯಾನ್ ಪ್ರಿ ಫೈನಲ್ ಪಾರ್ಟ್ನರ್ಸ್ ಇವರ ಸಂಯುಕ್ತ ಆಶ್ರಯದಲ್ಲಿ 19ನೇ ತಿಂಗಳ ಚೆಸ್ ಟೂರ್ನಮೆಂಟ್ ಹಾಗೂ ಅಕ್ಷಯಕಲ್ಪಾ ಗ್ರ್ಯಾನ್ ಪ್ರಿ ಫೈನಲ್ ಕ್ವಾಲಿಯರ್ ಅಕ್ಟೋಬರ್ 7ರಂದು ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಭಾರತ್ ಎಲೆಕ್ಟ್ರಾನಿಕ್ಸ್ ಆಫಿಸರ್ಸ್ ಕ್ಲಬ್‌ನಲ್ಲಿ ನಡೆಯಲಿದೆ.

ಸ್ಪರ್ಧೆಗಳು ಬೆಳಿಗ್ಗೆ 8-30ರಿಂದ ಸಂಜೆ 6-30 ರವರೆಗೆ  ನಡೆಯಲಿದೆ. ಕರ್ನಾಟಕ ರಾಜ್ಯ ಚೆಸ್ ಸಂಸ್ಥೆಯ ಗುರುತಿನ ಕಾರ್ಡ್ ಹೊಂದಿರುವವರಿಗೆ ಪ್ರವೇಶ ಶುಲ್ಕ ರೂ. 550, ಇತರರಿಗೆ ರೂ. 600 ಆಗಿರುತ್ತದೆ. ಪ್ರವೇಶ ನೋಂದಾವಣಿಗೆ ಅಕ್ಟೋಬರ್ 4 ಕೊನೆಯ ದಿನಾಂಕವಾಗಿರುತ್ತದೆ. ಆ ನಂತರ ನೋಂದಾಯಿಸಿಕೊಳ್ಳುವವರು ಅಕ್ಟೋಬರ್ 5 ಮತ್ತು 6ರಂದು ಬೆಂಗಳೂರಿನ ಬಿಇಎಲ್ ಸರ್ಕಲ್‌ನಲ್ಲಿರುವ ಭಾರತ್ ಎಲೆಕ್ಟ್ರಾನಿಕ್ಸ್ ಆಫಿಸರ್ಸ್ ಕ್ಲಬ್‌ನಲ್ಲಿ  1000 ರೂ. ನೀಡಿ ಹೆಸರನ್ನು ದಾಖಲಿಸಿಕೊಳ್ಳಬಹುದು. www.paychessentry.com  ಮೂಲಕ ಪ್ರವೇಶ ಶುಲ್ಕವನ್ನು ನೀಡಬಹುದು.

ಆಟದ ಮಾದರಿ

ಸ್ವಿಸ್ ಲೀಗ್ ಮಾದರಿಯಲ್ಲಿ ನಡೆಯುವ ಚಾಂಪಿಯನ್‌ಷಿಪ್‌ನಲ್ಲಿ 7-8 ಸುತ್ತುಗಳಿರುತ್ತವೆ. ಮುಕ್ತ ಹಾಗೂ ವಯಸ್ಸಿನ ಮಿತಿ ವಿಭಾಗಗಳಲ್ಲಿ  ಟೂರ್ನಿಗಳನ್ನು ನಡೆಸಿ ಯಶಸ್ಸು ಕಂಡಿರುವ ಬೆಂಗಳೂರು ನಾರ್ತ್ ಚೆಸ್ ಪೋರಂ 2018ರಿಂದ ಟೂರ್ನಿಯ ಮಾದರಿಯಲ್ಲಿ ಬದಲಾವಣೆ ತರಲು ತೀರ್ಮಾನಿಸಿದೆ. ಮುಕ್ತ ವಿಭಾಗದಲ್ಲಿ ನಗದು ಬಹುಮಾನವನ್ನು ನೀಡಲಾಗುವುದು. ಅದೇ ರೀತಿ ಎಂದಿನಂತೆ ವಯೋಮಿತಿಯಲ್ಲಿ ಆಡಿ ಗೆಲ್ಲುವ ಆಟಗಾರರಿಗೆ ಟ್ರೋಫಿ ಹಾಗೂ ಪದಕಗಳಿರುತ್ತವೆ. ಗ್ರ್ಯಾನ್ ಪ್ರಿ ಫೈನಲ್‌ನಲ್ಲಿ ಒಟ್ಟು 1,50,000 ರೂ. ಬಹುಮಾನವಿರುತ್ತದೆ.
ಮುಕ್ತ ವಿಭಾಗದಲ್ಲಿ ವಿಜೇತರಿಗೆ 20,000 ರೂ. ಬಹುಮಾನವಿರುತ್ತದೆ. (ಇದು ಒಂದೇ ಗ್ರೂಪ್ ಆಗಿದ್ದಲ್ಲಿ ಮಾತ್ರ).
ಇಲ್ಲವಾದಲ್ಲಿ  5,000, 4000, 3000,1800, 1600, 1200, 1000, 900, 800 ಹಾಗೂ 700 ರೂ.ಗಳ ಬಹುಮಾನವಿರುತ್ತದೆ.
ಮುಕ್ತ ವಿಭಾಗದ ವಿಜೇರಿಗೆ ಬಹಮಾನ 15000 ರೂ. (ಒಂದಕ್ಕಿಂತ ಹೆಚ್ಚು ಗ್ರೂಪ್ ಇದ್ದರೆ )
4,000, 3000, 1600, 1300, 1100, 1000, 800, 700, ರೂ.ಗಳ ಬಹುಮಾನವಿರುತ್ತದೆ.
ಹೀಗೆ ಮೊದಲ ಬಹುಮಾನ 1,00,000 ರೂ. ಎರಡನೇ ಬಹುಮಾನ 50,000 ರೂ. ಹಾಗೂ ಮೂರನೇ ಬಹುಮಾನ 25,000 ರೂ.ಗಳಿಂದ ಕೂಡಿರುತ್ತದೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿರಿ  (ಕೇವಲ ವ್ಯಾಟ್ಸಪ್) ಮುರಳೀಧರ್ ಜಿ.ಕೆ. -9901044520
ಪ್ರಸನ್ನ ಕುಮಾರ್ ಆರ್. -9901800665
ಉಮಾದೇವಿ ಬಿ. -9901800664
ಮಾ‘ುರ್ಯ-9845512892