ಸ್ಯಾಫ್ ಪಾಕಿಸ್ತಾನಕ್ಕೆ ಸೋಲಿನ ಶಾಕ್

0
213
ಢಾಕಾ

ಪಾಕಿಸ್ತಾನ ತಂಡವನ್ನು 3-1 ಗೋಲುಗಳ ಅಂತರದಲ್ಲಿ ಮಣಿಸಿದ ಭಾರತ ಫುಟ್ಬಾಲ್ ತಂಡ ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಷನ್(ಸ್ಯಾಫ್) ಚಾಂಪಿಯನ್‌ಷಿಪ್‌ನ ಫೈನಲ್ ತಲುಪಿದೆ.

ಮೂರು ವರ್ಷಗಳ ನಂತರ ಅಂತಾರಾಷ್ಟ್ರೀಯ ಫುಟ್ಬಾಲ್ ಟೂರ್ನಿಯನ್ನು ಆಡುತ್ತಿರುವ ಪಾಕಿಸ್ತಾನ ತಂಡ ಮತ್ತೊಮ್ಮೆ ಫೈನಲ್ ತಲಪುವಲ್ಲಿ ವಿಲವಾಯಿತು.
ಮೊದಲಾರ್ಧಲ್ಲಿ ಇತ್ತಂಡಗಳು ಗೋಲು ಗಳಿಸುವಲ್ಲಿ ವಿಲವಾದವುದು. ಆದರೆ ದ್ವಿತಿಯಾರ್ಧ ರ್ದಲ್ಲಿ ಗ್ರೀನ್ ಟೀಮ್‌ನ ಡಿೆನ್ಸ್ ವಿಭಾಗವನ್ನು ಛಿದ್ರಗೊಳಿಸುವಲ್ಲಿ ಭಾರತ ಯಶಸ್ವಿಯಾಯಿತು. ೪೯ ನೇ ನಿಮಿಷದಲ್ಲಿ ಆಶಿಕ್ ಕುರುನಿಯಾನ್ ನೀಡಿದ ಪಾಸ್ ಮೂಲಕ ಮನ್ವೀರ್ ಸಿಂಗ್ ಗೋಲುಉ ಗಳಿಸಿ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. ೬೯ನೇ ನಿಮಿಷದಲ್ಲಿ ಮನ್ವೀರ್ ಮತ್ತೊಂದು ಗೋಲು ಗಳಿಸಿ ಭಾರತಕ್ಕೆ ಜಯದ ಹಾದಿಯನ್ನು ಸುಗಮಗೊಳಿಸಿದರು. ಪಂದ್ಯ ಮುಗಿಯಲು ೭ ನಿಮಿಷ ಬಾಕಿ ಇರುವಂತೆ ಸುಮೀತ್ ಪಾಸ್ಸಿ ಮೂರನೇ ಗೋಲು ಗಳಿಸಿ ಭಾರತಕ್ಕೆ ಜಯ ತಂದುಕೊಟ್ಟರು. ಫೈನಲ್ ಪಂದ್ಯದಲ್ಲಿ ಭಾರತ ತಂಡ ಮಾಲ್ದೀವ್ ತಂಡವನ್ನು ಎದುರಿಸಲಿದೆ.