Friday, March 29, 2024

ಯಾರೇ ಗೆದ್ರೂ ನಾವೇ ನಂ. 1, ವಿಶ್ವಕ್ಕೆ ವಿರಾಟ್ ಕೊಹ್ಲಿಯೇ ಶ್ರೇಷ್ಠ!

ಏಜೆನ್ಸೀಸ್ ದುಬೈ

ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-4 ಅಂತರದಲ್ಲಿ ಸೋತಿರಬಹುದು, ಆದರೆ ರಾಂಕಿಂಗ್‌ನಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿರುವುದು ವಿಶೇಷ. ಅದೇ ರೀತಿ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವ ನಾಯಕ ವಿರಾಟ್ ಕೊಹ್ಲಿ ಐಸಿಸಿ ವಿಶ್ವ ರಾಂಕಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ.

ಸರಣಿಯಲ್ಲಿ ಕೊಹ್ಲಿ 59.3 ಸರಾಸರಿಯೊಂದಿಗೆ 593 ರನ್ ಗಳಿಸಿರುತ್ತಾರೆ. ಸರಣಿ ಆರಂಭಕ್ಕೆ ಮುನ್ನ ಆಸ್ಟ್ರೇಲಿಯಾದ ಸ್ಟೀವನ್ ಸ್ಮಿತ್ ಅವರಿಗಿಂತ 27 ಅಂಕ ಹಿಂದೆ ಬಿದ್ದಿದ್ದ ಕೊಹ್ಲಿ ಈಗ ಸ್ಮಿತ್‌ಗಿಂತ 1ಅಂಕ ಮನ್ನಡೆ ಕಂಡಿದ್ದಾರೆ. ಎಡ್ಜ್‌ಬಾಸ್ಟನ್ ಟೆಸ್ಟ್ ನಂತರ ಕೊಹ್ಲಿ ಅಗ್ರ ಸ್ಥಾನಕ್ಕೇರಿದರು. ನಂತರ ಟ್ರೆಂಟ್‌ಬ್ರಿಡ್ಜ್ ಟೆಸ್ಟ್ ಬಳಿಕ ಅಗ್ರ ಸ್ಥಾನ ಕಾಯ್ದುಕೊಂಡರು. ಅಕ್ಟೋಬರ್ 4 ರಿಂದ ವೆಸ್ಟ್ ಇಂಡೀಸ್ ವಿರುದ್ಧ ಮನೆಯಂಗಣದಲ್ಲಿ ಆರಂಭಗೊಳ್ಳಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ತಮ್ಮ ಅಗ್ರ ಸ್ಥಾನವನ್ನು ಕಾಯ್ದುಕೊಳ್ಳಲು ಅವಕಾಶವಿದೆ.
ಕೆ.ಎಲ್. ರಾಹುಲ್ ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್‌ನಲ್ಲಿ  149 ರನ್ ಗಳಿಸುವ ಮೂಲಕ ರಾಂಕಿಂಗ್‌ನಲ್ಲಿ  ೧೯ನೇ ಸ್ಥಾನ ತಲುಪಿದ್ದಾರೆ. ಚೊಚ್ಚಲ ಪಂದ್ಯವನ್ನಾಡಿದ ರಿಶಬ್ ಪಂತ್ 65 ಸ್ಥಾನ ಮೇಲಕ್ಕೇರಿ 111ನೇ ಸ್ಥಾನ ತಲುಪಿದ್ದಾರೆ. ಪಂತ್ 5 114ರನ್ ಗಳಿಸಿದ್ದರು.
ಆರಂಭದಲ್ಲೂ ಶತಕ
ಕೊನೆಯಲ್ಲೂ ಶತಕ
ಟೆಸ್ಟ್ ಕ್ರಿಕೆಟ್‌ನ ಮೊದಲ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿರುವ ಇಂಗ್ಲೆಂಡ್‌ನ ಆಲಿಸ್ಟರ್ ಕುಕ್ ನೂತನ ದಾಖಲೆ ಬರೆದು ಟೆಸ್ಟ್‌ಗೆ ವಿದಾಯ ಹೇಳಿದರು. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ  ಈ ಸಾಧನೆ ಮಾಡಿದ ಐದನೇ ಆಟಗಾರರೆನಿಸಿದ್ದಾರೆ.
ಐಸಿಸಿ ಬೌಲಿಂಗ್ ರಾಂಕಿಂಗ್‌ನಲ್ಲಿ ಇಂಗ್ಲೆಂಡ್‌ನ ಜೇಮ್ಸ್ ಆಂಡರ್ಸನ್ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ. ಲಾರ್ಡ್ಸ್ ಟೆಸ್ಟ್ ಮುಗಿದ ಬಳಿಕ ಆಂಡರ್ಸನ್ ಜೀವನಶ್ರೇಷ್ಠ 603 ಅಂಕಗಳನ್ನು ಗಳಿಸಿದರು.
ಭಾರತವೂ ನಂ. 1
ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 1-4 ಅಂತರದಲ್ಲಿ ಸರಣಿ ಸೋತಿರಬಹುದು, ಆದರೆ ಐಸಿಸಿ ರಾಂಕಿಂಗ್‌ನಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ. 123 ಅಂಕಗಳನ್ನು ಹೊಂದಿದ್ದ ಭಾರತ ಟೆಸ್ಟ್ ಸರಣಿ ಮುಗಿದ ನಂತರ 115 ಅಂಕಕ್ಕೆ ಕುಸಿದಿದೆ. ಆದರೂ ದಕ್ಷಿಣ ಆಫ್ರಿಕಾಕ್ಕಿಂತ 9 ಅಂಕ ಮೇಲುಗೈ ಸಾಧಿಸಿದೆ. ದಕ್ಷಿಣ ಆಫ್ರಿಕಾ 106 ಅಂಕಗಳನ್ನು ಗಳಿಸಿ ಎರಡನೇ ಸ್ಥಾನದಲ್ಲಿದೆ.

Related Articles