ಹುಟ್ಟಿದ್ದು ಕುಡ್ಲ, ಬೆಳೆದದ್ದು ಕುವೈತ್, ನಿಹಾಲ್ ಕೀರ್ತಿ ಭಾರತಕ್ಕೆ
ಮಂಗಳೂರು; ಇದೇ ತಿಂಗಳ 23 ರಿಂದ 26 ರ ವರೆಗೆ ಬಹೆರಿನ್‌ನಲ್ಲಿ 3ನೇ ಏಷ್ಯನ್ ಯೂಥ್ ಗೇಮ್ಸ್ ನಡೆಯಲಿದೆ. ಭಾರತದ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದೆ. ತಂಡದಲ್ಲಿ ಕರ್ನಾಟಕದ ಏಕೈಕ ಕ್ರೀಡಾಪಟು ಆಯ್ಕೆಯಾಗಿದ್ದಾರೆ. ಹೆಸರು ನಿಹಾಲ್ ಕಮಲ್. ಈ ಕ್ರೀಡಾಪಟುವಿನ ಬದುಕಿನ ಹಾದಿ ಕುತೂಹಲದಿಂದ ಕೂಡಿದೆ. ಅಲ್ಲಿ ಆತನ ದೇಶಪ್ರೇಮ, ತಾಯ್ನಾಡಿನ ಬಗ್ಗೆ ಇರುವ ಪ್ರೀತಿಯನ್ನು ಗಮನಿಸಿದಾಗ ಖುಷಿಯಾಗುವುದು ಸಹಜ. ಅದಕ್ಕೆ ಕಾರಣವೂ ಇದೆ. Born in Mangalore, grown up in Kuwait and Nihal Kamal Representing India in 3rd Asian Youth Games 2025 Bahrain.
ನಿಹಾಲ್ ಕಮಲ್ ಹುಟ್ಟಿದ್ದು ಮಂಗಳೂರು, ಬೆಳೆದದ್ದು ಕುವೈತ್, ವಾಸಿಸುತ್ತಿರುವುದೂ ಕುವೈತ್‌ನಲ್ಲಿ ಆದರೆ ತರಬೇತಿ ತರಬೇತಿ ಮಂಗಳೂರಿನಲ್ಲಿ ಹಾಗೂ ಪ್ರನಿಧಿಸುತ್ತಿರುವುದು ಭಾರತವನ್ನು. ಸಾಮನ್ಯವಾಗಿ ಅನೇಕ ಕ್ರೀಡಾಟುಗಳು ವಿದೇಶದಲ್ಲಿ ನೆಲೆಸಿದ್ದರೆ ಆ ದೇಶವನ್ನು ಪ್ರತಿನಿಧಿಸುವ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾರೆ. ಆದರೆ ಮೊಹಮ್ಮದ್ ಕಮಲ್ ಹಾಗೂ ರಾಹಿನಾ ಕಮಲ್ ದಂಪತಿ ತಮ್ಮ ಮಗನನ್ನು ಕುವೈತ್ ಬದಲು ಭಾರತವನ್ನೇ ಪ್ರತಿನಿಧಿಸುವ ಸಲುವಾಗಿ ಮಂಗಳೂರಿನಲ್ಲೇ ತರಬೇತಿ ನೀಡಲಾರಂಭಿಸಿದರು. ಮಂಗಳೂರಿನಲ್ಲಿ ತನ್ನದೇ ಆದ ಅಥ್ಲೆಟಿಕ್ ಅಕಾಡೆಮಿಯನ್ನು ಸ್ಥಾಪಿಸಿರುವ ಭಾರತದ ಮಾಜಿ ಅಥ್ಲೀಟ್ ಭಕ್ಷಿತ್ ಸಾಲ್ಯಾನ್ ಅವರು ನಿಹಾಲ್ ಕಮಲ್‌ಗೆ ಉತ್ತಮ ರೀತಿಯಲ್ಲಿ ತರಬೇತಿ ನೀಡಲಾರಂಭಿಸಿದರು. 100 ಮೀ. ಓಟರದಲ್ಲಿ ಪಳಗಿರುವ ನಿಹಾಲ್ ಕಮಲ್ ರಿಲೇಯಲ್ಲಿರೂ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಭಕ್ಷಿತ್ ಸಾಲ್ಯಾನ್ ಈಗ ಮಂಗಳೂರಿನಲ್ಲಿ ತಮ್ಮದೇ ಆದ ಎನ್‌ಡುರೆನ್ಸ್ ಅಕಾಡೆಮಿಯಲ್ಲಿ ನೂರಾರು ಅಥ್ಲೀಟ್‌ಗಳಿಗೆ ತರಬೇತಿ ನೀಡುತ್ತಿದ್ದಾರೆ. ಅಲ್ಲದೆ ಖೇಲೋ ಇಂಡಿಯಾ ಎಕ್ಸಲೆನ್ಸಿಯಲ್ಲಿಯೂ [Khelo India] ತರಬೇತುದಾರರಾಗಿದ್ದಾರೆ.

“ನಿಹಾಲ್ ಅವರ ಹೆತ್ತವರು ಮಂಗಳೂರಿನ ನಂತೂರಿನವರು, ಮಗನನ್ನು ಉತ್ತಮ ಕ್ರೀಡಾಪಟುವನ್ನಾಗಿಸಬೇಕೆಂಬುದು ಅವರ ಕನಸಾಗಿದೆ. ಅದಕ್ಕಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ನಿಹಾಲ್ ಕುವೈತ್‌ನಲ್ಲಿ ಇಂಡಿಯನ್ ಸ್ಕೂಲ್‌ನಲ್ಲಿ ಸಿಬಿಎಸ್‌ಇ ಓದುತ್ತಿದ್ದರೂ ರಜೆಯಲ್ಲಿದಾದ ಮಂಗಳೂರಿನ ಬಂದು ತರಬೇತಿ ಪಡೆಯುತ್ತಾನೆ. ಅಲ್ಲದೆ ವಿಶೇಷ ರಜೆ ಪಡೆದು ನಮ್ಮ Endurance Academy Mangalore ಅಕಾಡೆಮಿಯಲ್ಲಿ ನಿರಂತರ ಅಭ್ಯಾಸ ನಡೆಸುತ್ತಾನೆ, ಇದರಿಂದಾಗಿ ರಾಜ್ಯ ಮಟ್ಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದ. ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕನೇ ಸ್ಥಾನ ಪಡೆದ ಪರಿಣಾಮ ಕಿರಿಯು ವಿಭಾಗಲ್ಲಿ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿತು. ನಿಹಾಲ್ ಅವರ ಬದ್ಧತೆ ಹಾಗೂ ಕಠಿಣ ಶ್ರಮವನ್ನು ಗಮನಿಸಿದಾಗ ಅವರು ಭಾರತದಲ್ಲಿ ಭವಿಷ್ಯದ ಉತ್ತಮ ಕ್ರೀಡಾಪಟು ಆಗುವುದರಲ್ಲಿ ಸಂಶಯ ಇಲ್ಲ,” ಎಂದು ನಿಹಾಲ್‌ಗೆ ತರಬೇತಿ ನೀಡುತ್ತಿರುವ Endurance Academy Mangalore ಇದರ ಕೋಚ್ ಭಕ್ಷಿತ್ ಸಾಲ್ಯಾನ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಜನಿಸಿ, ಕುವೈತ್‌ನಲ್ಲಿ ಓದುತ್ತ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಈಗ ಭಾರತವನ್ನು ಪ್ರತಿನಿಧಿಸುತ್ತಿರುವ ನಿಹಾಲ್ ಕಮಲ್ ಅವರ ಬದ್ಧತೆಗೆ ಕರ್ನಾಟಕ ಅಥ್ಲೆಟಿಕ್ಸ್ ಸಂಶ್ಥೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಏಷ್ಯನ್ ಯೂಥ್ ಗೇಮ್ಸ್‌ನಲ್ಲಿ ಕರ್ನಾಟಕದ ಓಟಗಾರನಿಗೆ ಒಳಿತಾಗಲಿ ಎಂದು ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ [Karnataka Athletics Association] ಶುಭ ಹಾರೈಸಿದೆ.


