Friday, December 13, 2024

ಫಿಟ್ನೆಸ್‌ಗಾಗಿ ಇಂಜೆಕ್ಷನ್ : ಟೀಂ ಇಂಡಿಯಾ ಆಟಗಾರರ ಬಗ್ಗೆ ಚೇತನ್ ಶರ್ಮಾ ಹೊಸ ಬಾಂಬ್

ಮುಂಬೈ : ಭಾರತ ಕ್ರಿಕೆಟ್ ತಂಡದ ಕೆಲವು ಆಟಗಾರರು ಫಿಟ್ನೆಸ್ ಗಾಗಿ ಇಂಜೆಕ್ಷನ್ ತೆಗೆದುಕೊಳ್ಳುತ್ತಾರೆ ಅನ್ನೋ ಶಾಕಿಂಗ್ ವಿಚಾರವನ್ನು ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ ಚೇತನ್ ಶರ್ಮಾ (Chetan Sharma) ಬಿಚ್ಚಿಟ್ಟಿದ್ದಾರೆ. ಖಾಸಗಿ ಸುದ್ದಿಸಂಸ್ಥೆ ನಡೆಸಿರುವ ರಹಸ್ಯ ಕಾರ್ಯಾಚರಣೆಯಲ್ಲಿ ಈ ಮಾಹಿತಿ ಹೊರಬಿದ್ದಿದೆ.

ಟೀಂ ಇಂಡಿಯಾದ ಆಟಗಾರರು ಶೇಕಡಾ 80ರಷ್ಟು ಫಿಟ್ ಆಗಿದ್ದರೂ ಕೂಡ ಶೇಕಡಾ 100ರಷ್ಟು ಫಿಟ್ ಆಗಲು ಇಂಜೆಕ್ಷನ್ ಮೊರೆ ಹೋಗುತ್ತಿದ್ದಾರೆ. ಆಟಗಾರರು ತೆಗೆದುಕೊಳ್ಳುವ ಇಂಜೆಕ್ಷನ್ ಗಳಲ್ಲಿ ಬಳಸಿರುವ ಡ್ರಗ್ಸ್ ಗಳು ಯಾವುದೇ ಡೋಪ್ ಟೆಸ್ಟ್ ನಲ್ಲಿಯೂ ಪತ್ತೆಯಾಗುವುದಿಲ್ಲ. ಈ ಇಂಜೆಕ್ಷನ್ ಗಳು ನೋವು ನಿವಾರಕವಾಗಿಯೂ ಕೆಲಸ ಮಾಡುವುದಿಲ್ಲ ಎಂದಿದ್ದಾರೆ ಚೇತನ್ ಶರ್ಮಾ.

ಖಾಸಗಿ ಸುದ್ದಿ ಸಂಸ್ಥೆ ನಡೆಸಿರುವ ರಹಸ್ಯ ಕಾರ್ಯಾಚರಣೆಯಲ್ಲಿ ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಅವರ ಹೆಸರನ್ನು ಉಲ್ಲೇಖಿಸಿರುವ ಚೇತನ್ ಶರ್ಮಾ (Chetan Sharma) , 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಜಸ್ಪ್ರೀತ್ ಬುಮ್ರಾ ಸಂಪೂರ್ಣ ಫಿಟ್ ಆಗಿರಲಿಲ್ಲ.ಅಲ್ಲದೇ ಗಂಭೀರ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರೂ ಕೂಡ ಅವರು ಬೆಂಗಳೂರಿನಲ್ಲಿ ಇರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪೂರ್ಣ ಪ್ರಮಾಣದ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿರಲಿಲ್ಲ.ಆದರೆ ಆಡಲು ಅನ್’ಫಿಟ್ ಆಗಿದ್ದರೂ ಕೂಡ ಟೀಮ್ ಇಂಡಿಯಾ ಜೊತೆ ಬುಮ್ರಾ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದ್ದರು ಎಂಬ ಸ್ಪೋಟಕ ಮಾಹಿತಿಯನ್ನು ಅವರು ಬಾಯ್ಬಿಟ್ಟಿದ್ದಾರೆ.

ಇದನ್ನೂ ಓದಿ : ಆರ್‌ಸಿಬಿಗೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲು : ಮಹಿಳಾ ಪ್ರೀಮಿಯರ್ ಲೀಗ್ ವೇಳಾಪಟ್ಟಿ ಪ್ರಕಟ

ಬೂಮ್ರಾ ಮಾತ್ರವಲ್ಲದೇ ಹಲವು ಆಟಗಾರರ ಕುರಿತು ಚೇತನ್ ಶರ್ಮಾ (Chetan Sharma) ಆಘಾತಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆಟಗಾರರು ಡೋಪಿಂಗ್ ಟೆಸ್ಟ್ ನಲ್ಲಿ ಸಿಕ್ಕಿ ಬೀಳದಂತಹ ಇಂಜೆಕ್ಷನ್ಸ್ ತೆಗೆದುಕೊಳ್ಳುತ್ತಿದ್ದಾರೆ. ಫಿಟ್ನೆಸ್ ಪರೀಕ್ಷೆಗೂ ಮೊದಲು ಇಂಜೆಕ್ಷನ್ಸ್ ತೆಗೆದುಕೊಂಡು, ಫಿಟ್ನೆಸ್ ಪರೀಕ್ಷೆಯಲ್ಲಿ ಸುಲಭವಾಗಿ ಪಾಸ್ ಆಗುತ್ತಿದ್ದಾರೆ. ಕೇವಲ 80ರಿಂದ 85% ರಷ್ಟು ಫಿಟ್ ಆಗಿರುವ ಆಟಗಾರರು ಕೂಡ ಟೀಂ ಇಂಡಿಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ : ಮಹಿಳಾ ಪ್ರೀಮಿಯರ್ ಲೀಗ್ : ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ RCB ಮೆಂಟರ್

ಬಿಸಿಸಿಐ ಇತ್ತೀಚಿಗಷ್ಟೇ ಚೇತನ್ ಶರ್ಮಾ ಅವರನ್ನು ಬಿಸಿಸಿಐ ಹಿರಿಯರ ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿತ್ತು. ಐಸಿಸಿ ಟಿ20 ವಿಶ್ವಕಪ್ ನಲ್ಲಿ ವೈಫಲ್ಯ ಕಂಡಿದ್ದರೂ ಕೂಡ ಇಡೀ ಆಯ್ಕೆ ಸಮಿತಿಯನ್ನೇ ವಜಾ ಮಾಡಿದ್ದರೂ ಕೂಡ, ಚೇತನ್ ಶರ್ಮಾ ಅವರನ್ನು ಮಾತ್ರವೇ ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ಮುಂದುವರಿಸಿತ್ತು. ಆದರೆ ಖಾಸಗಿ ವಾಹಿನಿ ನಡೆಸಿರುವ ರಹಸ್ಯ ಕಾರ್ಯಾಚರಣೆ ಇದೀಗ ಬಿಸಿಸಿಐಯಲ್ಲಿ ಮುಜುಗರವನ್ನು ತಂದಿಟ್ಟಿದೆ. ಆಯ್ಕೆ ಸಮಿತಿಯ ಮುಖ್ಯಸ್ಥರೇ ಇಂತಹ ಹೇಳಿಕೆ ನೀಡಿರುವುದು ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಇದನ್ನೂ ಓದಿ : ಕರ್ನಾಟಕದ ಕ್ರಿಕೆಟ್‌ನಲ್ಲಿ ವಿಜಯದ ವೈಶಾಖ

Related Articles