Saturday, February 24, 2024

ಮುಂಬೈ ಬ್ಯಾರೀಸ್‌ಗೆ ಬಹೆರಿನ್‌ ಬ್ಯಾರೀಸ್‌ ಲೀಗ್‌ ಕಿರೀಟ

 

ಫೈನಲ್‌ ಪಂದ್ಯದಲ್ಲಿ ಯುನೈಟೆಡ್‌ ಬ್ಯಾರೀಸ್‌ ತಂಡವನ್ನು 36 ರನ್‌ ಅಂತರದಲ್ಲಿ ಸೋಲಿಸಿದ ಮುಂಬೈ ಬ್ಯಾರೀಸ್‌ ತಂಡ ಪ್ರತಿಷ್ಠಿತ  ಬಹೆರಿನ್‌ ಬ್ಯಾರೀಸ್‌ ಲೀಗ್‌ ಪ್ರಶಸ್ತಿ ಗೆದ್ದುಕೊಂಡಿದೆ.

ಮುಂಬೈ ಬ್ಯಾರೀಸ್‌ ತಂಡದ ಮಾಲೀಕತ್ವವನ್ನು ಶಂಶುದ್ದೀನ್‌ ಕಲಂದರ್‌ ಮತ್ತು ಅದ್ನಾನ್‌ ಹೊಂದಿದ್ದು, ಶಮೀಮ್ ಅಖ್ತರ್‌ ನಾಯಕರಾಗಿರುತ್ತಾರೆ. ಯುನೈಟೆಡ್‌ ಬ್ಯಾರೀಸ್‌ ತಂಡದ ಮಾಲೀಕತ್ವನ್ನು ಮಸೂದ್‌ ಮಾಸ್‌ ಮತ್ತು ಶಂಶೀರ್‌ ಹೊಂದಿದ್ದು, ಶಮೀರ್ ನಾಯಕರಾಗಿರುತ್ತಾರೆ.

ಜಫ್‌ಏರ್‌ನ ಅಲ್‌ ನಜ್ಮಾ ಕ್ಲಬ್‌  ಅಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಮುಂಬೈ ಬ್ಯಾರೀಸ್‌ ತಂಡ ಮೊದಲು ಬ್ಯಾಟಿಂಗ್‌ ಮಾಡಿ 71 ರನ್‌ ಗಳಿಸಿತು. 72 ಜಯದ ಗುರಿಹೊತ್ತ ಯುನೈಟೆಡ್‌ ಕೇವಲ 35 ರನ್‌ಗೆ ಸರ್ವ ಪತನ ಕಂಡಿತು.

ಈ ಟೂರ್ನಿಯ ವಿಶೇಷವೆಂದರೆ ಫೈನಲ್‌ ಪಂದ್ಯದಲ್ಲಿ ಟಾಸ್‌ಗಾಗಿ ಚಿನ್ನದ ನಾಣ್ಯವನ್ನು ಬಳಸಲಾಗಿತ್ತು. ಯುನೈಟೆಡ್‌ ಬ್ಯಾರೀಸ್‌ನ ರಿಜ್ವಾನ್‌ ಈ ಚಿನ್ನದ ನಾಣ್ಯವನ್ನು ಟಾಸ್‌ ಗೆಲ್ಲುವ ಮೂಲಕ ತಮ್ಮದಾಗಿಸಿಕೊಂಡರು.

ಮ್ಯಾನ್‌ ಆಫ್ ದಿ ಸಿರೀಸ್‌ಗೆ ಇದೇ ಮೊದಲ ಬಾರಿ ಉತ್ತಮ ಗುಣಮಟ್ಟದ ಸ್ಕೂಟರ್‌ ನೀಡಲಾಗಿದ್ದು ಈ ಕೊಡುಗೆಯನ್ನು ಸಮೀರ್‌ ಹಾಗೂ ಸಲಾಂ ಲಿಬರ್ಟಿ ನೀಡಿರುತ್ತಾರೆ.

ಅತಿ ಹೆಚ್ಚು ರನ್‌ ಗಳಿಸಿದ 5 ಆಟಗಾರರು:

ಸಕ್ಲೈನ್‌ ಶೇಖ್‌ 180 (ಯುನೈಟೆಡ್‌ ಬ್ಯಾರೀಸ್)‌, ನೌಫಿಲ್‌ ಅಹಮ್ಮದ್‌, 164 (ಬ್ಯಾರೀಸ್‌ ಬೌನ್ಸರ್ಸ್)‌, ಸಮೀರ್‌ ಪೊಂಚೆರಿ, 142 (ಜಮಾನ್‌ ಬಾಯ್ಸ್)‌, ಫೈಜಲ್‌ ಗಂಗೊಳ್ಳಿ, 139 (ಯುನೈಟೆಡ್‌ ಬ್ಯಾರೀಸ್)‌, ಶಮೀಮ್‌ ಅಖ್ತರ್‌ 124, (ಮುಂಬೈ ಬ್ಯಾರೀಸ್).‌

 

ಅತಿ ಹೆಚ್ಚು ವಿಕೆಟ್‌ಗಳಿಸಿದ 5 ಆಟಗಾರರು:

ಎಂ. ಮನ್ಸೂರ್‌, ಮುಂಬೈ ಬ್ಯಾರೀಸ್‌ 14, ಶನ್ಫೀರ್‌, ಜಮಾನ್‌ ಬಾಯ್ಸ್‌, 13, ಸಲ್ಲು, ಮುಂಬೈ ಬ್ಯಾರೀಸ್‌, 12, ಶಫಿ, ಜಮಾನ್‌ ಬಾಯ್ಸ್ 12, ಮಿಕ್ದಾದ್‌ ಉಳ್ಳಾಲ್‌, ಜಮಾನ್‌ ಬಾಯ್ಸ್‌, 8.

ಶರೀಫ್‌ ಉಳ್ಳಾಲ್‌ ಬಿಬಿಎಲ್‌ ಇತಿಹಾಸದಲ್ಲೇ ಅತಿ ಹೆಚ್ಚು ವಿಕೆಟ್‌ (36) ಹಾಗೂ ಫೈಜಲ್‌ ಅಹಮ್ಮದ್‌  ಅತಿ ಹೆಚ್ಚು ರನ್‌ (359) ಗಳಿಕೆಯ ಸಾಧನೆ ಮಾಡಿದ್ದಾರೆ.

ಬಹೆರಿನ್‌ನಲ್ಲಿ ನೆಲೆಸಿರುವ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾರಿಸ್‌ ಸಮುದಾಯದ ಯುವಕರು ಈ ಟೂರ್ನಿಯನ್ನು ಪ್ರತಿವರ್ಷ ಆಯೋಜಿಸುತ್ತಿದ್ದು, ಇದು ಮೂರನೆಯ ಋತುವಾಗಿದೆ.

Related Articles