ಮಾಸ್ಟರ್ಸ್ ಅಥ್ಲೆಟಿಕ್ಸ್ : ಕಂಚು ಗೆದ್ದ ನಾಗಭೂಷಣ್

0
376
ಸ್ಪೋರ್ಟ್ಸ ಮೇಲ್ ವರದಿ

ಕೌಲಾಲಂಪುರದಲ್ಲಿ ಭಾನುವಾರ ಮುಕ್ತಾಯಗೊಂಡ 32ನೇ ಮಾಸ್ಟರ್ಸ್ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಚಿತ್ರದುರ್ಗದ ಡಿ. ನಾಗಭೂಷಣ್ ಕಂಚಿನ ಪದಕ ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ.

5000 ಮೀ. ವಾಕ್‌ರೇಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದ ನಾಗಭೂಷಣ್ ಮೂರನೇ ಸ್ಥಾನ ಗಳಿಸಿ ಕಂಚಿನ ಸಾ‘ನೆ ಮಾಡಿದ್ದಾರೆ. ಉಮ್‌ಅರೇನಾ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ನಾಗಭೂಷಣ್ 33.22 ನಿಮಿಷಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಗಳಿಸಿದರು.ಸ್ಪೇನ್‌ನ ಲೂಯಿಸ್ ಅಬಾಡಿಯಸ್ 27 : 46.7 ನಿಮಿಷಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರೆ, ಸಿಂಗಾಪುರದ ಕೆ. ರಾಜೇಂದಿಯನ್ 32.22 ನಿಮಿಷಗಳಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದರು.