Thursday, September 12, 2024

ಮೈಸೂರಿನಲ್ಲಿ ಫೆ.2 ಮತ್ತು 3ರಂದು ರಾಜ್ಯ ಯೂಥ್ ಅಥ್ಲೆಟಿಕ್ಸ್ ಕೂಟ

ಸ್ಪೋರ್ಟ್ಸ್ ಮೇಲ್ ವರದಿ

ಮೈಸೂರು ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯದ ನೆರವಿನೊಂದಿಗೆ ಫೆಬ್ರವರಿ 2 ಮತ್ತು 3ರಂದು ಮೈಸೂರಿನಲ್ಲಿ ಕರ್ನಾಟಕ ಯೂಥ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ನಡೆಯಲಿದೆ.

ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯುವ   ಈ ಕ್ರೀಡಾಕೂಟದಲ್ಲಿ ಡಿಸೆಂಬರ್ 31, 2019ರಂದು 16 ಮತ್ತು 17 ವಯೋಮಿತಿಯ ಕ್ರೀಡಾಪಟುಗಳು ಪಾಲ್ಗೊಳ್ಳಬಹುದು. 1-1-2002 ಹಾಗೂ 31 ಡಿಸೆಂಬರ್, 2013ರ ನಡುವೆ ಜನಿಸಿದವರು ಪಾಲ್ಗೊಳ್ಳಲು ಅರ್ಹರು.
ಅಥ್ಲೀಟ್‌ಗಳು ಎರಡು ವೈಯಕ್ತಿಕ ವಿಭಾಗ ಹಾಗೂ ಒಂದು ರಿಲೇಯಲ್ಲಿ ಪಾಲ್ಗೊಳ್ಳಬಹುದು. ಹೆಸರು, ಹುಟ್ಟಿದ ದಿನಾಂಕ ಹಾಗೂ ಪಾಲ್ಗೊಳ್ಳುವ ವಿಭಾಗವನ್ನು ಸ್ಪಷ್ಟಪಡಿಸಿ ಕೆಎಎ ನಮೂದಿಸಿದ ಇ-ಮೇಲ್‌ಗೆ ಜನವರಿ 29ರಂದು ಕಳುಹಿಸತಕ್ಕದ್ದು. ಸ್ಥಳದಲ್ಲೇ ಪ್ರವೇಶಾತಿಗೆ ಅವಕಾಶ ಇರುವುದಿಲ್ಲ.
ಇ-ಮೇಲ್ ವಿಳಾಸ- karathletic@gmail.com .ದೂರವಾಣಿ ಸಂಪರ್ಕ-9448438276.
ಮೈಸೂರಿನಲ್ಲಿ ಮೈಸೂರು ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಬಿ. ಶ್ರೀಕಾಂತ್ ಅವರನ್ನು 9448402048 ಹಾಗೂ 9731808008
ವಯಸ್ಸು ದೃಢೀಕರಣ: ಅಥ್ಲೀಟ್‌ಗಳ ವಯಸ್ಸು ದೃಢೀಕರಿಸಲು ಕೆಎಎ ವಯಸ್ಸು ದೃಢೀಕರಣ ಸಮಿತಿ ನಿಯೋಜಿಸಲಾಗಿದೆ. ಪ್ರತಿಯೊಬ್ಬ ಅಥ್ಲೀಟ್ ವಯಸ್ಸನ್ನು ದೃಢೀಕರಿಸಲು ಸಂಬಂ‘ಪಟ್ಟ ದಾಖಲೆಯ ಮೂಲ ಪ್ರತಿಯನ್ನು ಹೊಂದಿರಬೇಕು. ಸರಕಾರದ ಯಾವುದೇ ದೃಢೀಕರಣ ಕಾರ್ಡು (ಆಧಾರ್ ಕಾರ್ಡು) ಮತ್ತು ಪಾಸ್‌ಪೋರ್ಟ್ ಗಾತ್ರದ ಫೋಟೋ ಹೊಂದಿರಬೇಕು. ಮೂಲ ಪ್ರತಿ ಇಲ್ಲದೆ ಬಿಬ್ ನಂಬರ್ ನೀಡಲಾಗುವುದಿಲ್ಲ. ಫೆಬ್ರವರಿ 2ರಂದು ಬೆಳಿಗ್ಗೆ 10 ಗಂಟೆಗೆ ಬಿಬ್ ನಂಬರ್ ನೀಡಲಾಗುವುದು.
ಬರಿಗಾಲಿನಲ್ಲಿ ಪಾಲ್ಗೊಳ್ಳುವಂತಿಲ್ಲ. ಫೆಬ್ರವರಿ 2ರ ಬೆಳಿಗ್ಗೆ 8 ಗಂಟೆಯಿಂದ ಫೆಬ್ರವರಿ 3ರ ರಾತ್ರಿ 7 ಗಂಟೆಯವರೆಗೆ ವಸತಿ ಸೌಲಭ್ಯವನ್ನು ಕಲ್ಪಿಸಲಾಗುವುದು.

Related Articles