ರಾಹುಲ್, ಪಾಂಡ್ಯಾರನ್ನು ಮನೆಗೆ ಅಟ್ಟಿದ ಬಿಸಿಸಿಐ

0
190
ಸ್ಪೋರ್ಟ್ಸ್ ಮೇಲ್ ವರದಿ

ಖಾಸಗಿ ಚಾನೆಲ್‌ವೊಂದರ ಕಾರ್ಯಕ್ರಮದಲ್ಲಿ ಅಸಭ್ಯವಾಗಿ ಹೇಳಿಕೆ ನೀಡಿದ ಭಾರತ ಕ್ರಿಕೆಟ್ ತಂಡದ ಆಟಗಾರರಾದ ಕೆ. ಲೋಕೇಶ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಮಾನತು ಮಾಡಿರುವುದಲ್ಲದೆ ಆಸ್ಟ್ರೇಲಿಯಾದಿಂದ ತಾಯ್ನಾಡಿಗೆ ಕರೆಸಿಕೊಂಡಿದೆ.

ಬಿಸಿಸಿಐ ಸಂವಿಧಾನದ 41ನೇ ನಿಮಯದ ಪ್ರಕಾರ ಸುಪ್ರೀಂ ಕೋರ್ಟ್ ನಿಯೋಜಿತ ಬಿಸಿಸಿಐ ಆಡಳಿತ ಸಮಿತಿಯು ಈ ತೀರ್ಮಾನ ಕೈಗೊಂಡಿದೆ. ಮುಂದಿನ ತೀರ್ಪು ನೀಡುವ ವರೆಗೂ ಈ ಇಬ್ಬರು ಆಟಗಾರರು ಕ್ರಿಕೆಟ್ ಆಡುವುದು ಮಾತ್ರವಲ್ಲ ಕ್ರಿಕೆಟ್‌ಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುವಂತಿಲ್ಲ. ರಾಜ್ಯ ಕ್ರಿಕೆಟ್ ಸಂಸ್ಥೆಗಳು ನಡೆಸುವ ಕ್ರಿಕೆಟ್‌ನಲ್ಲೂ ಭಾಗವಹಿಸುವಂತಿಲ್ಲ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಸಿಸಿಐನ ಸಿಒಎ ಸಮಿತಿ ಇಬ್ಬರಿಗೂ ನೋಟೀಸ್ ಜಾರಿ ಮಾಡಿತ್ತು. ಇಬ್ಬರೂ ತಾವು ಮಾಡಿದ್ದು ತಪ್ಪು ಎಂದು ಹೇಳಿಕೆ ನೀಡಿದ್ದರು. ಆದರೆ ಸಮಿತಿಗೆ ಇದು ಸಮಾಧಾನ ಉಂಟು ಮಾಡಿಲ್ಲ. ನಂತರ ಸಮಿತಿ ಇಬ್ಬರನ್ನೂ ವಿಚಾರಣೆಗೆ ಗುರಿಪಡೆಸಿದೆ. ಇನ್ನು ಒಂದು ವಾರದೊಳಗೆ ಈ ಇಬ್ಬರೂ ಆಟಗಾರರು ವಿಚಾರಣೆಯನ್ನು ಎದುರಿಸಲಿದ್ದಾರೆ.