ಸ್ಕೇಟಿಂಗ್‌ನಲ್ಲಿ ಕೀರ್ತಿ ತಂದ ಡಾ. ವರ್ಷಾ

0
490
ಸ್ಪೋರ್ಟ್ಸ್ ಮೇಲ್ ವರದಿ 

ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ  18ನೇ ಏಷ್ಯನ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮೈಸೂರಿನ ಡಾ. ವರ್ಷಾ ಪುರಾಣಿಕ್  ಅವರರನ್ನೊಳಗೊಂಡ ಭಾರತ ತಂಡ 5 ಕಿ.ಮೀ. ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದಿದೆ.

ಮೊದಲು ಕಂಚಿನ ಪದಕ ಗೆದ್ದಿದ್ದ ಭಾರತ ತಂಡಕ್ಕೆ ಬೆಳ್ಳಿ ಪದಕ ಸಿಗಲು ಆತಿಥೇಯ ಕೊರಿಯಾ ಆಟಗಾರರು ಪ್ರಮಾದ ಮಾಡಿ ಅನರ್ಹಗೊಂಡಿರುವುದೇ ಕಾರಣ.
ಏಷ್ಯನ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಡಾ. ವರ್ಷಾ ಮೈಸೂರಿನ ಪ್ರಸಿದ್ಧ ತರಬೇತುದಾರ ಶ್ರೀಕಾಂತ್ ರಾವ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆಲ್ಲುವಲ್ಲಿ ವಿಲರಾದರೂ ವರ್ಷಾ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆಲ್ಲುವಲ್ಲಿ ಯಶಸ್ವಿಯಾದರು.