Thursday, December 12, 2024

ಏಷ್ಯನ್ ಗೇಮ್ಸ್‌ನಲ್ಲಿ ಕಂಚು ಗೆದ್ದ ಬೆಳಗಾವಿಯ ಮಲಪ್ರಭಾ

ಸೋಮಶೇಖರ್ ಪಡುಕರೆ ಬೆಂಗಳೂರು

ಆ ಊರಿಗೆ ಬೆಳಗಾವಿ ನಗರ ಪಾಲಿಕೆಯು ಕಸ ಎಸೆಯುತ್ತಿರುವುದರಿಂದ  ಆ ಊರ ಬಗ್ಗೆ ಹೆಚ್ಚು ಆಸಕ್ತಿ ವಹಿಸುವವರು ಕಡಿಮೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಈ ಪುಟ್ಟ ಗ್ರಾಮ ತುರ್ಮುರಿ. ಇಲ್ಲಿ ಮಕ್ಕಳು ಜೂಡೋ ಆಟ ಆಡುತ್ತಾರೆ. ಆ ಜೋಡೋ ಆಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದ  ಮಲಪ್ರ‘ಾ  ಜಾ‘ವ್ ಜಕಾರ್ತದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಕರಶ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಕೀರ್ತಿ ತಂದಿದ್ದಾರೆ.

ಕರಶ್ ಮಾರ್ಷಲ್ ಆರ್ಟ್ಸ್‌ನ ಒಂದು ಮಾದರಿ, ಜೂಡೋಗೆ ಹತ್ತಿರವಾಗುತ್ತದೆ. ಮಧ್ಯ  ಏಷ್ಯಾದಲ್ಲಿ ಈ ಕ್ರೀಡೆ ಹೆಚ್ಚು ಜನಪ್ರಿಯವಾಗಿದೆ. ಜೂಡೋದಲ್ಲಿ ಪಳಗಿದ ಮಲಪ್ರಭಾ  ಕೋಚ್ ಜಿತೇಂದ್ರ ಸಿಂಗ್ ಅವರ ನೆರವಿನಿಂದ ಕರಶ್‌ನಲ್ಲೂ ತಮ್ಮನ್ನು ತೊಡಗಿಸಿಕೊಂಡರು. ಈ ಕ್ರೀಡೆ ಕೇಂದ್ರ ಸರಕಾರದ ಕ್ರೀಡಾ ಇಲಾಖೆಯಿಂದ ಮಾನ್ಯತೆ ಪಡೆದಿಲ್ಲ. ಆದ್ದರಿಂದ ಏಷ್ಯನ್ ಗೇಮ್ಸ್‌ನಲ್ಲಿ  ಪಾಲ್ಗೊಳ್ಳುವವರು ತಮ್ಮದೇ ವೆಚ್ಚದಲ್ಲಿ ದೇಶವನ್ನು ಪ್ರತಿನಿಧಿಸಬೇಕಾಗುತ್ತದೆ ಎಂದು  ಕೇಂದ್ರ ಇಲಾಖೆ ಸೂಚಿಸಿದೆ. ಆದ್ದರಿಂದ ಬಡ ಕೃಷಿಕ ಯಲ್ಲಪ್ಪ ಜಾಧವ್‌ಗೆ ಇದು ಕಷ್ಟವಾಗಿತ್ತು. ಸಾಲ ಮಾಡಿ ಮಗಳನ್ನು ಏಷ್ಯನ್ ಗೇಮ್ಸ್‌ಗೆ ಕಳುಹಿಸಿದ್ದು ಸಾರ್ಥಕವಾಯಿತು.
ಬೆಳಗಾವಿಗೆ ಮಲಪ್ರಭಾ  ನದಿಯ ನೀರು ಅತ್ಯಂತ ಪ್ರಮುಖವಾದುದು, ಅದೇ ರೀತಿ ಯಲ್ಲಪ್ಪ ತಮ್ಮ ಮಗಳಿಗೆ ಮಲಪ್ರಭಾ  ಎಂದು  ಹೆಸರಿಟ್ಟಿರುವುದು ವಿಶೇಷ. ಈಗ ಮಲಪ್ರಭಾ  ಬೆಳಗಾವಿಗೆ ಏಕೆ ಇಡೀ ದೇಶಕ್ಕೆ ಕೀರ್ತಿ ತಂದಿದ್ದಾಳೆ.

ಜೂಡೋದಲ್ಲಿ  ಏಕಲವ್ಯ ಪ್ರಶಸ್ತಿ

ರಾಜ್ಯ ಒಲಿಂಪಿಕ್ಸ್ ಸಂಸ್ಥೆ ನೀಡಿರುವ ವಾರ್ಷಿಕ ಪ್ರಶಸ್ತಿ ಹಾಗೂ ರಾಜ್ಯ ಸರಕಾರ ನೀಡುವ ಏಕಲವ್ಯ ಗೌರವ ಗಳಿಸಿರುವ ಮಲಪ್ರಭಾ  ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಚ್ಚಾಗಿ ಮಿಂಚಿದ್ದು ಜೂಡೋ ಕ್ರೀಡೆಯ ಮೂಲಕ. ಆದರೆ ಕರಶ್  ವಿಭಿನ್ನವಾದುದು. ಕರಶ್‌ನಲ್ಲಿ ಏಷ್ಯಾ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಮೂಲಕ ಮಲಪ್ರ‘ಾ ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಈ ಕ್ರೀಡೆಯಲ್ಲಿ ಪಳಗಿದರು.  ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ನಾಲ್ಕು ಪದಕಗಳನ್ನು ಗೆದ್ದಿರುವ ಮಲಪ್ರಭಾ  ಅವರ ಸಾಧನೆಯಲ್ಲಿ ಎರಡು ಚಿನ್ನದ ಪದಕವೂ ಸೇರಿತ್ತು.

ರಾಜ್ಯ ಸರಕಾರದ ನೆರವು ಅಗತ್ಯ

ಬಡ ಕೃಷಿಕ ಯಲ್ಲಪ್ಪ ಜಾಧವ್ ಸಣ್ಣ ಗದ್ದೆಯಲ್ಲಿ ದುಡಿದ ಫಸಲನ್ನು ಮಾರಿ ಮಗಳನ್ನು ಏಷ್ಯನ್ ಗೇಮ್ಸ್‌ಗೆ ಕಳುಹಿಸಿರುತ್ತಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಮಗಳು ಸಾಧನೆ ಮಾಡಿದ ನಂತರ ಬದುಕು ಸುಧಾರಣೆ ಆಗಬಹುದು ಎಂಬುದು ಅವರ ನಂಬಿಕೆ. ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದಿರುವ ಕ್ರೀಡಾಪಟುಗಳಿಗೆ ಕೊಡುವ ನಗದು ಬಹುಮಾನವನ್ನು ನೀಡಿ ಗೌರವಿಸಬೇಕಾದ ಅಗತ್ಯ ಇದೆ.

Related Articles