ಏಷ್ಯನ್ ಗೇಮ್ಸ್‌ಗೆ ಬೆಂಗಳೂರಿನ ಯೋಧರು
ಸ್ಪೋರ್ಟ್ಸ್ ಮೇಲ್ ವರದಿ
ಜಕಾರ್ತದಲ್ಲಿ ನಡೆಯಲಿರುವ ೧೮ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಮದ್ರಾಸ್ ರೆಜಿಮೆಂಟ್‌ನ ಯೋಧರ ಪಡೆ ಸಜ್ಜಾಗಿದೆ.ಬೆಂಗಳೂರಿನಲ್ಲಿರುವ ಮದ್ರಾಸ್ ಎಂಜಿನೀಯರ್ ಗ್ರೂಪ್ (ಎಂಇಜಿ)ನ ೧೩ ಕ್ರೀಡಾಪಟುಗಳು ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
೧೩ ಯೋಧರಲ್ಲಿ ಇಬ್ಬರು ಎಕ್ವೆಟಿಕ್, ಐವರು ವಾಟರ್ ಪೋಲೋ, ಇಬ್ಬರು ಹ್ಯಾಂಡ್ ಬಾಲ್ ಹಾಗೂ ಅಥ್ಲೆಟಿಕ್ಸ್, ಬಾಕ್ಸಿಂಗ್ ಹಾಗೂ ಪ್ಯಾರಾ ಅಥ್ಲೀಟ್‌ನಲ್ಲಿ ತಲಾ ಒಬ್ಬರು ಸೇರಿದ್ದಾರೆ.ಕಾಲು ಕಳೆದುಕೊಂಡ ಯೋಧಭಾರತದ ಖ್ಯಾತ ಬ್ಲೇಡ್ ರನ್ನರ್ ನಯೆಬ್ ಸುಬೇದಾರ್ ಆನಂದನ್ ಜಿ. ಕೂಡ ಈ ಬಾರಿಯ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ೧೦೦, ೨೦೦ ಹಾಗೂ ೪೦೦ ಮೀ. ಓಟದಲ್ಲಿ ಆನಂದನ್ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ೨೦೦೯ರಲ್ಲಿ ಕಾಶ್ಮೀರದಲ್ಲಿ ಗಡಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದ ಆನಂದನ್ ಭಯೋತ್ಪಾದಕರ ಗುಂಡಿಗೆ ತುತ್ತಾಗಿ ಕಾಲು ಕಳೆದುಕೊಂಡರು. ಆದರೆ ಅವರಲ್ಲಿರುವ ಆತ್ಮವಿಶ್ವಾಸವನ್ನು ಯಾರಿಂದಲೂ ಕಸಿದುಕೊಳ್ಳಲಾಗಲಿಲ್ಲ. ಒಂಟಿಗಾಲಿನಲ್ಲೇ ದೇಶವನ್ನು ಹಲವಾರು ಕ್ರೀಡಾಕೂಟಗಳಲ್ಲಿ ಪ್ರತಿನಿಧಿಸಿ ಪದಕ ಗೆದ್ದು ತಂದರು. ದೇಶದ ನಂ.೧ ಬ್ಲೇಡ್ ರನ್ನರ್ ಎಂಬ ಹೆಗ್ಗಳಿಕೆಗೆ ಆನಂದನ್ ಪಾತ್ರರಾಗಿದ್ದಾರೆ.ಏಷ್ಯನ್ ಗೇಮ್ಸ್‌ಗೆ ಯೋಧರ ಪಡೆ.೧.ಸುಬೇದಾರ್ ಅರವಿಂದ್ ಮಣಿ- ೧೦೦ ಮೀ. ಬ್ಯಾಕ್ ಸ್ಟ್ರೋಕ್೨. ಸುಬೇದಾರ್ ರಮಾನಂದ್ ಶರ್ಮಾ-ಡೈವಿಂಗ್೩. ಹವಲ್ದಾರ್ ಲಂಡನ್- ಡೈವಿಂಗ್೪. ಸುಬೇದಾರ್ ಸಂತೋಷ್, ಅಥ್ಲೆಟಿಕ್ಸ್.೫. ಹವಲ್ದಾರ್ ಅಲ್ಬರ್ಟ್ ರಾಜ್-ಕಯಾಕಿಂಗ್೬. ಹವಲ್ದಾರ್ ಜಗನ್- ರೋವಿಂಗ್೭. ಹವಲ್ದಾರ್ ಪಾಂಡುರಂಗ-ರೋವಿಂಗ್೮. ರಾಹುಲ್ ಗಿರಿ- ರೋವಿಂಗ್೯. ಹವಲ್ದಾರ್ ಗ್ರೀನಿಡ್ಜ್-ಹ್ಯಾಂಡ್ಬಾಲ್೧೦. ಹವಾಲ್ದಾರ್ ಆದಿತ್ಯ- ಹ್ಯಾಂಡ್‌ಬಾಲ್.೧೧. ಸುಬೇದಾರ್ ಆನಂದನ್- ಪ್ಯಾರಾ ಅಥ್ಲೆಟಿಕ್ಸ್.೧೨. ಸುಬೇದಾರ್ ಮುಜೀಬ್ ರೆಹಮಾನ್-ರೋವಿಂಗ್೧೩. ಸುಬೇದಾರ್ ಸಿಎ ಕುಟ್ಟಪ್ಪ- ಬಾಕ್ಸಿಂಗ್ ಕೋಚ್.