ಭಾರತ ಎ ತಂಡಕ್ಕೆ ಜಯ

0
190
ಬೆಂಗಳೂರು

ದಕ್ಷಿಣ ಆಫ್ರಿಕಾ ವಿರುದ್ಧದ ಅಧಿಕೃತವಲ್ಲದ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ ೩೦ ರನ್‌ಗಳ ಅಂತರದಲ್ಲಿ ಜಯ ಗಳಿಸಿದ ಭಾರತ ಎ ತಂಡ ಅದ್ಭುತ ಜಯ ಗಳಿಸಿದೆ.

ಮೊಹಮ್ಮದ್ ಸಿರಾಜ್ ಎರಡು  ಇನಿಂಗ್ಸ್‌ಗಳಲ್ಲಿ ಒಟ್ಟು ೧೦ ವಿಕೆಟ್ ಗಳಿಸುವ ಮೂಲಕ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ಎ ತಂಡ  ೨೪೬ ರನ್‌ಗಳಿಗೆ ಸರ್ವ ಪತನ ಕಂಡಿತ್ತು. ನಂತರ ಭಾರತ ಎ ತಂಡ ೮ ವಿಕೆಟ್‌ನಷ್ಟಕ್ಕೆ ೫೮೪ ರನ್ ಗಳಿಸಿ ಡಿಕ್ಲೇರ್ ಘೋಷಿಸಿತ್ತು. ದಕ್ಷಿಣ ಆಫ್ರಿಕಾ ತಂಡದ ಪರ ರೂಡಿ ಸೆಕೆಂಡ್ ೯೪ ರನ್ ಗಳಿಸಿ ಉತ್ತಮ ಪೈಪೋಟಿ ನೀಡಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ೩೦೮ ರನ್ ಗಳಿಸುತ್ತಲೇ ಪ್ರವಾಸಿ ತಂಡ ಸೋಲಿಗೆ ಶರಣಾಯಿತು.