ಮೈಸೂರು: ದೇಶದ ಪ್ರತಿಷ್ಠಿತ ಸೈಕಲ್ ಯಾನ, ಟೂರ್ ಆಫ್ ನೀಲಗಿರೀಸ್‌ನ 14ನೇ ಆವೃತ್ತಿಗೆ ಕರ್ನಾಟಕದ ಮಾಜಿ ಚಾಂಪಿಯನ್ನರಾದ ಸತೀಶ್ ಮರಾಠೆ ರಾವ್ ಹಾಗೂ ವೆಂಕಟೇಶ್ ಶಿವರಾಮ್ ಭಾನುವಾರ ಬೆಳಿಗ್ಗೆ ಮೈಸೂರಿನಲ್ಲಿ ಚಾಲನೆ ನೀಡಿದರು.14th Edition of Tour of Nilgiris kicks off in Mysore.
2008ರಲ್ಲಿ ಹುಟ್ಟಿಕೊಂಡ ಈ ಸೈಕಲ್ ಟೂರ್‌ನಲ್ಲಿ ಈಗ ಜಗತ್ತಿನ ವಿವಿಧ ರಾಷ್ಟ್ರಗಳಿಂದ ಸೈಕ್ಲಿಸ್ಟ್‌ಗಳು ಪಾಲ್ಗೊಳ್ಳುತ್ತಿರುವುದು ವಿಶೇಷ. ಆರಂಭಿಕ ಟೂರ್‌ನಲ್ಲಿ ಪಾಲ್ಗೊಂಡಿದ್ದ ವೆಂಕಿ ಹಲವು ಬಾರಿ ಈ ಸೈಕ್ಲಿಂಗ್ ಟೂರ್‌ನ ಭಾಗವಾಗಿದ್ದು, ಈಗ ಮತ್ತೆ ರೈಡಿಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸತೀಶ್ ಮರಾಠೆ ರಾವ್ 70ರ ದಶಕದಲ್ಲಿ ಕರ್ನಾಟಕದ ಚಾಂಪಿಯನ್. ಈಗ ಅಮೆರಿಕದಲ್ಲಿ ಉಡುಪಿ ಕೆಫೆ ಹೆಸರಿನ ಹೊಟೇನ್ ಉದ್ಯಮಿಯಾಗಿದ್ದಾರೆ. ಇಳಿ ವಯಸ್ಸಿನಲ್ಲೂ 900+ ಕಿಮೀ ದೂರದ ಟೂರ್ ಆಫ್ ನಿಲಗಿರೀಸ್‌ನಲ್ಲಿ ಪಾಲ್ಗೊಂಡ ಸತೀಶ್ ಅವರು ವಯಸ್ಸು ಕೇವಲ ನಂಬರ್ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ನೂರಕ್ಕೂ ಹೆಚ್ಚು ರೈಡರ್‌ಗಳು ಪಾಲ್ಗೊಂಡಿರುವ ಈ ಟೂರ್‌ನಲ್ಲಿ ವಿವಿಧ ವಯೋಮಿತಿಯ ರೈಡರ್‌ಗಳಿದ್ದಾರೆ. ಮಹಿಳೆಯರು, ಯುವಕರು ಕೂಡ ಈ ಬಾರಿಯ ಟೂರ್‌ನಲ್ಲಿ ಪಾಲ್ಗೊಂಡಿದ್ದಾರೆ. ಮೈಸೂರಿನಿಂದ ಹೊರಟ ತಂಡಕ್ಕೆ ಮೈಸೂರಿನ ಯುವ ಸೈಕ್ಲಿಸ್ಟ್‌ಗಳ ತಂಡ ಸುಮಾರು 50 ಕಿಮೀ ವರೆಗೆ ಸಾಥ್ ನೀಡಿತು. ನಂತರ ಅವರು ಮೈಸೂರಿಗೆ ಹಿಂದಿರುಗಿದರು. ಉಳಿದ ನೂರಕ್ಕೂ ಹೆಚ್ಚು ರೈಡರ್‌ಗಳು ಟೂರ್‌ನಲ್ಲಿ ಮುಂದುವರಿದರು.
ಮೊದಲ ದಿನ ಮೈಸೂರಿನಿಂದ ಕೇರಳದ ವಯಾನಾಡ್ ತಲುಪುವುದಾಗಿರುತ್ತದೆ. 142 ಕಿಮೀ ತಲುಪಿದ ನಂತರ ತಂಡ ವಯನಾಡಿನಲ್ಲಿ ತಂಗಲಿದೆ. ಅಲ್ಲಿಗೆ ಮೊದಲ ದಿನದ ಟೂರ್ ಮುಗಿಯುತ್ತದೆ.
ಮಹಿಳಾ ವಿಭಾಗದಲ್ಲಿ 11 ರೈಡರ್‌ಗಳಿರುವುದು ವಿಶೇಷ. 45 ವರ್ಷ ಮತ್ತು ಅದಕ್ಕೆ ಮೇಲ್ಪಟ್ಟವರ ವಿಭಾಗದಲ್ಲಿ 22 ರಡರ್‌ಗಳಿದ್ದಾರೆ.