Wednesday, November 6, 2024

ಅರ್ಚನಾ ಕಾಮತ್ ಗೆ ಚಿನ್ನ

ಸ್ಪೋರ್ಟ್ಸ್ ಮೇಲ್ ವರದಿ 

ಕೊಯಮತ್ತೊರಿನಲ್ಲಿ ನಡೆದ ೪೮ನೇ ಅಖಿಲ ಭಾರತ ಅಂತರ್ ಸಾಂಸ್ಥಿಕ ಟೇಬಲ್ ಟೆನಿಸ್ ಚಾಂಪಿಯನ್ ಷಿಪ್ ನಲ್ಲಿ ಬೆಂಗಳೂರಿನ ಅರ್ಚನಾ ಕಾಮತ್ ಅವರನ್ನೊಳಗೊಂಡ ಪ್ರಟ್ರೋಲಿಯಂ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್ ( ಪಿ ಎಸ್ ಪಿ ಬಿ ) ತಂಡ ಚಿನ್ನದ ಪದಕದೊಂದಿಗೆ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ಪೆಟ್ರೋಲಿಯಂ ಬೋರ್ಡ್ ತಂಡದಲ್ಲಿ ಅರ್ಚನಾ ಸೇರಿದಂತೆ ಪ್ರಾಪ್ತಿ ಸೇನ್, ಯಾಶಿನಿ ಶಿವಶಂಕರ್, ಶ್ರುತಿ  ಹಳೆಯಂಗಡಿ ಇದ್ದಾರೆ.

ರೈಲ್ವೆ ಕ್ರೀಡಾ ಉತ್ತೇಜನ ಮಂಡಳಿ ವಿರುದ್ಧ ೩-೦ ಅಂತರದಲ್ಲಿ ಜಯ ಗಳಿಸುವ ಮೂಲಕ ಪಿ ಎಸ್ ಪಿ ಬಿ ತಾಣದ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು. ಭಾರತೀಯ ವಿಮಾನಯಾನ ಪ್ರಾಧಿಕಾರ ಹಾಗು ಏರ್ ಇಂಡಿಯಾ ವಿರುದ್ದವೂ ಅರ್ಚನಾ ಪಡೆ ೩-೦ ಅಂತರದಲ್ಲಿ ಗೆದ್ದಿತ್ತು.
ಪಿಎ ಸ್ ಪಿ ಬಿ ಯನ್ನು ಪ್ರತಿನಿಧಿಸುತ್ತಿರುವ ಅರ್ಚನಾ ಮೂರು ಚಿನ್ನದ ಪಾದಕ ಗಳನ್ನು  ಗೆದ್ದುಕೊಂಡರು. ಮಹಿಳಾ ಡಬಲ್ಸ್, ಮಿಶ್ರ ಡಬಲ್ಸ್, ಹಾಗೂ ಯೂಥ್ ಗರ್ಲ್ಸ್ ವಿಭಾಗದಲ್ಲಿ ಅರ್ಚನಾ ಚಿನ್ನ ಗೆದ್ದರು. ಮಹಿಳಾ ವಿಭಾಗದ ಸಿಂಗಲ್ಸ್ ನಲ್ಲೂ ಬೆಳ್ಳಿ ಪದಕದ ಸಾಧನೆ ಮಾಡಿದ

Related Articles