ಸ್ಪೀಡೋ ಆಹ್ವಾನಿತ ಈಜು
ಸ್ಪೋರ್ಟ್ಸ್ ಮೇಲ್ ವರದಿ

ಒಲಿಂಪಿಯನ್ ವೀರ ಧವಳ್ ಖಾಡೆ ಹಾಗೂ ಸಂದೀಪ್ ಸೆಜ್ವಾಲ್ ಅವರ ಉಪಸ್ಥಿತಿ ಯಲ್ಲಿ ನಿಶಾ ಮಿಲ್ಲೆಟ್ ಅಕಾಡೆಮಿಯು ಸ್ಪೀಡೋ ಫಿಟ್ನೆಸ್ ಜತೆಗೂಡಿ ಸ್ಪೀಡೋ ಆಹ್ವಾನಿತ ಈಜು ಚಾಂಪಿಯನ್ ಷಿಪ್ ಆಯೋಜಿಸಿತ್ತು.
ಈಜಿನ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಸಲುವಾಗಿ ಈ ಸ್ಪರ್ಧೆ ಏರ್ಪಡಿಸಲಾಗಿತ್ತು. ಎರಡು ದಿನಗಳ ಕಾಲ್ ನಡೆದ ಕೂಟದಲ್ಲಿ ಒಟ್ಟು ೬೦೦ಕ್ಕೂ ಹೆಚ್ಚು ಈಜುಗಾರರು ಪಾಲ್ಗೊಂಡಿದ್ದರು. ಪ್ರತಿಯೊಬ್ಬರಿಗೂ ಪಾಲ್ಗೊಂಡಿರುವುದಕ್ಕೆ ಪ್ರಮಾಣ ಪತ್ರ ಹಾಗೂ ಸ್ಪೀಡೋ ಉಡುಗೊರೆ ನೀಡಲಾಯಿತು.
ಪ್ರತಿಯೊಂದು ಗ್ರೂಪಿನಲ್ಲಿ ಅತಿಹೆಚ್ಚು ಅಂಕ ಪಡೆದವರು ವೈಯಕ್ತಿಕ ಪ್ರಶಸ್ತಿ ಗಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸ್ಪೀಡೋ ಇಂಡಿಯಾದ ವ್ಯವಹಾರ ವಿಭಾಗದ ಮುಖ್ಯಸ್ಥ ಮರಳಿ ದೇಸಿಂಗ್, ಈಜಿನಲ್ಲಿ ಉನ್ನತ ಮಟ್ಟದ ಗುರಿ ತಲುಪಲು ಸ್ಪೀಡೋ ಎಲ್ಲ ರೀತಿಯ ನೆರವನ್ನೂ ನೀಡಲಿದೆ. ಈಜಿನಲ್ಲಿ ಯುವ ಪ್ರತಿಭೆಗಳಿಗೆ ನೆರವಾಗುವುದು ನಮ್ಮ ಮುಖ್ಯ ಉದ್ದೇಶ ಎಂದರು.