Saturday, July 27, 2024

ಗ್ರ್ಯಾಂಡ್‌ ಮಾಸ್ಟರ್‌ ಪ್ರಣವ್‌ ಆನಂದ್‌ಗೆ ಕ್ರೀಡಾ ಇಲಾಖೆಯಿಂದ ಸನ್ಮಾನ

ಬೆಂಗಳೂರು: ಭಾರತದ 76ನೇ ಮತ್ತು ಕರ್ನಾಟಕದ 4ನೇ ಚೆಸ್‌ ಗ್ರ್ಯಾಂಡ್‌ ಮಾಸ್ಟರ್‌ ಎನಿಸಿದ ವಿಶ್ವ ಯೂತ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ 16 ವರ್ಷ ವಯೋಮಿತಿಯ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿರುವ ಕರ್ನಾಟಕದ ಪ್ರಣವ್‌ ಆನಂದ್‌ ಅವರನ್ನು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಡಾ. ಎಚ್‌.ಎನ್‌. ಗೋಪಾಲಕೃಷ್ಣ ಅವರು ಸೋಮವಾರ ಸನ್ಮಾನಿಸಲಿದ್ದಾರೆ.

ರೋಮಾನಿಯಾದಲ್ಲಿ  ನಡೆದ ವಿಶ್ವ ಯೂತ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಣವ್‌, ಎಲೋ ರೇಟಿಂಗ್‌ 2500 ಅಂಕಗಳನ್ನು ದಾಟಿದರು. ಜುಲೈಯಲ್ಲಿ ಸ್ವಿಜರ್ಲೆಂಡ್‌ನಲ್ಲಿ ನಡೆದ 55ನೇ ಬಿಯೆಲ್‌ ಇಂಟರ್‌ನ್ಯಾಷನಲ್‌ ಚೆಸ್‌ ಫೆಸ್ಟಿವಲ್‌ನಲ್ಲಿ ಪ್ರಣವ್‌, ಮೂರನೇ ಹಾಗೂ ಕೊನೆಯ ಗ್ರ್ಯಾಂಡ್‌ ಮಾಸ್ಟರ್‌ ನಾರ್ಮ್‌ ದಾಟಿದರು. ಅವರು ಈ ಟೂರ್ನಿಯಲ್ಲಿ ಜಿಎಂ ಮ್ಯಾಕ್ಸಿಮ್‌ ಲಗಾರ್ಡೆ (ಫ್ರಾನ್ಸ್‌, 2631), ಜಿ.ಎಂ. ಸೇತುರಾಮನ್‌ ಎಸ್‌ಪಿ (2623), ಆರ್ಯನ್‌ ಚೋಪ್ರಾ (2610) ಮತ್ತು ಜಿಎಂ ಶಾಂತ್‌ ಸರ್ಗ್‌ಸ್ಯಾನ್‌ (2661) ಅವರೊಂದಿಗೆ ಡ್ರಾ ಸಾಧಿಸಿದ್ದರು.

ಜನವರಿ ತಿಂಗಳಲ್ಲಿ ನಡೆದ ಸಿಟ್ಗಸ್‌ ಓಪನ್‌ನಲ್ಲಿ ಮತ್ತು ವೆಜೆರ್‌ಕೆಪ್ಸೋ ಜಿಎಂ ರೌಂಡ್‌ ರಾಬಿನ್‌ ಟೂರ್ನಿಗಳಲ್ಲಿ ಮೊದಲ ಎರಡು ಜಿಎಂ ನಾರ್ಮ್‌ ಗಳಿಸಿದ್ದರು.

Related Articles