Thursday, September 12, 2024

ಕಬಡ್ಡಿ ಸಂಸ್ಥೆಯಲ್ಲಿ ರಾಡಿ

ಸ್ಪೋರ್ಟ್ಸ್ ಮೇಲ್ ವರದಿ

ಕಳೆದ 40 ವರ್ಷಗಳಿಂದ ಭಾರತೀಯ ಅಮೆಚೂರ್ ಕಬಡ್ಡಿ ಸಂಸ್ಥೆ (ಎಕೆಎಫ್ ಐ )ಯ ಅಧ್ಯಕ್ಷರಾಗಿ ತಾನು ಮತ್ತು ತಮ್ಮ ಪತ್ನಿ ಮೃದುಲಾ ಗೆಲೋಟ್ ಅವರನ್ನು ಆಜೀವ ಅ ಧ್ಯಕ್ಷರೆಂದು ಘೋಷಿಸಿಕೊಂಡಿರುವ ಜನಾರ್ಧನ್  ಸಿಂಗ್ ಗೆಲೋಟ್ ಅವರಿಗೆ ದಿಲ್ಲಿ ನ್ಯಾಯಾಲಯ ತಕ್ಕ ಪಾಠ ಕಲಿಸಿದೆ. ಅವರಿಬ್ಬರ ಸ್ಥಾನವನ್ನು ತೆರವುಗೊಳಿಸಿ ನಿವೃತ್ತ ಐಎಎಸ್‌ಅಧಿಕಾರಿಯನ್ನು ಎಕೆಎ್‌ಐನ ಆಡಳಿತವನ್ನು ನೋಡಿಕೊಳ್ಳಲು ನಿಯೋಜಿಸಿದೆ.

ಕಬಡ್ಡಿ ಸಂಸ್ಥೆಯನ್ನು ತಮ್ಮ ಮನೆಯೆಂಬಂತೆ ಬಿಂಬಿಸುತ್ತಿರುವ ಗೆಲೋಟ್ ಕುಟುಂಬಕ್ಕೆ ತಕ್ಕ ಶಾಸ್ತಿಯಾಗಿದ್ದು, ನಿವೃತ್ತ ಐಎಎಸ್ ಅಧಿಕಾರಿ ಸನತ್ ಕೌಲ್ ಅವರು ಎಕೆಎ್‌ಐನ ಆಡಳಿತವನ್ನು ನೋಡಿಕೊಳ್ಳಲಿದ್ದಾರೆ.
ಹಲವಾರು ಆರೋಪಗಳನ್ನು ಎದುರಿಸುತ್ತಿರುವ ಗೆಲೋಟ್ ವಿರುದ್ಧ ನ್ಯೂ ಕಬಡ್ಡಿ ಫೆಡರೇಷನ್ ಆ್ ಇಂಡಿಯಾ ನ್ಯಾಯಾಲಯದ ಮೆಟ್ಟಿಲು ಏರಿತ್ತು. ಈ ವಿಷಯದಲ್ಲಿ ಅರ್ಜುನ ಪ್ರಶಸ್ತಿ ವಿಜೇತ ಮಾಜಿ ಕಬಡ್ಡಿ ಆಟಗಾರ ಡಾ. ಸಿ. ಹೊನ್ನಪ್ಪ ಗೌಡ, ಮಾಜಿ  ಆಟಗಾರ ಅರ್ಜುನ ಪ್ರಶಸ್ತಿ ವಿಜೇತ ಮಹಿಪಾಲ್ ಸಿಂಗ್, ಎಂ.ವಿ. ಪ್ರಸಾದ್ ಬಾಬು (ಕಬಡ್ಡಿ ಬಾಬು) ಹಾಗೂ ಅನೇಕ ಆಟಗಾರರು ಪ್ರಮುಖ ಪಾತ್ರವಹಿಸಿರುತ್ತಾರೆ. ಪತಿ ಹಾಗೂ ಪತ್ನಿ ಸೇರಿಕೊಂಡು ಕಬಡ್ಡಿಯ ಹೆಸರಿನಲ್ಲಿ ಸಾಕಷ್ಟು ಅವ್ಯವಹಾರ ನಡೆಸಿದ್ದಾರೆಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ. ಗೆಲೋಟ್ ಅವರು ಅಧ್ಯಕ್ಷರಾಗಿ ಅಶಸ್ತಿನಿಂದ ವರ್ತಿಸಿರುವ ಬಗ್ಗೆ ಅನೇಕ ಆಟಗಾರರು ದೂರು ನೀಡಿರುತ್ತಾರೆ.

ಸಂವಿಧಾನ ಉಲ್ಲಂಘನೆ

(ಎಕೆಎಫ್ ಐ )ನ  ಸಂವಿಧಾನವನ್ನು ಉಲ್ಲಂಘಿಸಿ 24 ವರ್ಷಗಳ ಕಾಲ ಅಧ್ಯಕ್ಷರಾಗಿ ಅಧಿಕಾರದಲ್ಲಿದ್ದ ಗೆಲೋಟ್ ನಂತರ ತಮ್ಮ ಅಧಿಕಾರವನ್ನು ಪತ್ನಿಗೆ ನೀಡಿರುತ್ತಾರೆ. ಒಟ್ಟು 40 ವರ್ಷಗಳ ಕಾಲ ಈ ದಂಪತಿ  ಫೆಡರೇಷನ್‌ನ ಆಡಳಿತವನ್ನು ತಮ್ಮ ಅಧೀನದಲ್ಲಿ ಇಟ್ಟುಕೊಂಡಿದ್ದಾರೆ. ಇದು ಕಾನೂನು ಬಾಹೀರವಾದದ್ದು. ಭಾರತೀಯ ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಯಮ (ಎನ್‌ಎಸ್‌ಸಿಐ)ದ ಪ್ರಕಾರ ಈ ರೀತಿ ಸಂಸ್ಥೆಯ ಆಡಳಿತವನ್ನು ನಡೆಸುವುದು ಕಾನೂನು ಬಾಹೀರ ಎಂದು ನ್ಯಾಯ ಪೀಠವು ತಿಳಿಸಿದೆ.
ಈ ನಡುವೆ ನ್ಯಾಯಾಲಯ, ಮಾಜಿ  ಅಧ್ಯಕ್ಷರ ಪತ್ನಿಗೆ ಅಧ್ಯಕ್ಷರ ಹುದ್ದೆಗೆ ಸ್ಪರ್ಧಿಸಬಹುದು ಎಂದು ಸೂಚಿಸಿದೆ. ಆದರೆ ಮೇ 19, 2013 ರಿಂದ ಇಲ್ಲಿಯವರೆಗೆ ನಡೆದಿರುವ ಹಣಕಾಸಿನ ಲೆಕ್ಕಚಾರವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಸಂಸ್ಥೆಗೆ ಸೇರಬೇಕಾದ ಹಣವನ್ನು ವಸೂಲಿ ಮಾಡಬೇಕು. ಆ ನಂತರವೇ ಸ್ಪಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಾಧ್ಯ  ಎಂದು ಸೂಚಿಸಿದೆ. ಈ ದಂಪತಿಯ ಮಗ ಕೂಡ ರಾಜಸ್ಥಾನ ಕಬಡ್ಡಿ ಸಂಸ್ಥೆಯ ಅಧ್ಯಕ್ಷ ರಾಗಿರುವುದು ಪ್ರಶ್ನಾರ್ಹ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ. ಇದೇ ವೇಳೆ ನ್ಯಾಯಾಲಯ ಮೂರು ತಿಂಗಳೊಳಗೆ ಸಂಸ್ಥೆಯ ಚುನಾವಣೆ ನಡೆಸಬೇಕು ಎಂದು ಆದೇಶಿಸಿದೆ.

ತಂಡಗಳ ಪುನರಾಯ್ಕೆ

ಜಕಾರ್ತದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ ತಂಡಗಳನ್ನು ಆಯ್ಕೆ ಮಾಡಿರುವುದು ಸೂಕ್ತವಾಗಿಲ್ಲ, ಅದು ಕಣ್ಣೊರೆಸುವ ತಂತ್ರ ಎಂದು ತಿಳಿದು ಬಂದಿದೆ. ಕ್ರೀಡಾ ಕಾಯ್ದೆಯ ನಿಯಮದಂತೆ ತಂಡಗಳನ್ನು ಆಯ್ಕೆ ಮಾಡಲು ನ್ಯಾಯಾಲಯ ಸೂಚಿಸಿದೆ. ಆದರೆ ಏಷ್ಯನ್ ಕ್ರೀಡಾಕೂಟಕ್ಕೆ ಇನ್ನು ಕೆಲವೇ ದಿನಗಳು ಇರುವುದರಿಂದ ಈ ಬದಲಾವಣೆ ಕಷ್ಟಸಾಧ್ಯವಾಗಿದೆ. ಹಾಗಾದಲ್ಲಿ ‘ಭಾರತ ತಂಡ (ಮಹಿಳಾ ಹಾಗೂ ಪುರುಷರು) ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳುವುದು ಅತಂತ್ರವೆನಿಸಲಿದೆ.

ಟ್ರಯಲ್ ಪಂದ್ಯ ಅಗತ್ಯ

ಆಟಗಾರರು ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಆಟಗಾರರು ಆಯ್ಕೆ ಟ್ರಯಲ್ಸ್‌ನ ಪಂದ್ಯವನ್ನು ಆಡಬೇಕಾಗಿದೆ. ಆಯ್ಕೆಯನ್ನು ಪ್ರಶ್ನಿಸಿ ಕನ್ನಡಿಗ ಡಾ. ಹೊನ್ನಪ್ಪ ಗೌಡ  ಹಾಗೂ ಎಸ್. ರಾಜರತ್ನಂ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ರವೀಂದ್ರ ಕೌರ್ ಅವರ ಸಮ್ಮುಖದಲ್ಲಿ ಮೂವರು ಸದಸ್ಯರನ್ನೊಳಗೊಂಡ ಆಯ್ಕೆ ಸಮಿತಿ ಏಷ್ಯನ್ ಗೇಮ್ಸ್‌ಗಾಗಿ ಆಯ್ಕೆಯಾಗಿರುವ ತಂಡದ ಸಾಮರ್ಥ್ಯವನ್ನು ಪರೀಕ್ಷಿಸಲಿದೆ. ಆಯ್ಕೆ ಮಾಡುವ ಸದಸ್ಯರನ್ನು ಕೇಂದ್ರ ಕ್ರೀಡಾ ಇಲಾಖೆ ನಿಯೋಜಿಸಲಿದೆ. ಸೆಪ್ಟೆಂಬರ್ ೧೫ರಂದು ದಿಲ್ಲಿಯಲ್ಲಿರುವ ತ್ಯಾಗರಾಜ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆಟಗಾರರ ಸಾಮರ್ಥ್ಯದ ಕುರಿತ ದಾಖಲೆ ಹಾಗೂ ವೀಡಿಯೋ ಚಿತ್ರಣವನ್ನು ಆಯ್ಕೆ ಸಮಿತಿ ನ್ಯಾಯಾಲಯಕ್ಕೆ ಸಲ್ಲಿಸಲಿದೆ. ಅವುಗಳ ಪರಿಶೀಲನೆಯ ನಂತರ ಆಯ್ಕೆಯಾದ ಆಟಗಾರರನ್ನು ಏಷ್ಯನ್ ಗೇಮ್ಸ್‌ಗೆ ಕಳುಹಿಸಲಾಗುವುದು.

ಉತ್ತಮ ಆಟಗಾರರೇ ಔಟ್ 

ದುಬೈಯಲ್ಲಿ ನಡೆದ ಕಬಡ್ಡಿ ಮಾಸ್ಟರ್ಸ್ ಟೂರ್ನಿಯಲ್ಲಿ ‘ಾರತ ತಂಡವನ್ನು ಪ್ರತಿನಿಧಿಸಿ ಉತ್ತಮ ಆಟ ಪ್ರದರ್ಶಿಸಿದ್ದ ಸುರ್ಜಿತ್ ಸಿಂಗ್ ಅವನ್ನು ತಂಡದಿಂದ ಕೈ ಬಿಟ್ಟಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಜುಲೈ ೧೫ರಂದು ತಂಡದ ಅಂತಿಮ ಆಯ್ಕೆ ನಡೆಯಲಿದೆ ಎಂದು ಹೇಳಿದವರು ಜೂನ್ ೧೫ಕ್ಕೇ ತಂಡವನ್ನು ಪ್ರಕಟಿಸಿದ್ದಾರೆ. ಲೆಫ್ಟ್ ಕಾರ್ನರ್  ಸುರೀಂದರ್ ನಾಡಾ ‘ಭಾರತ ತಂಡದ ಉತ್ತಮ ಆಟಗಾರ. ಯಾವುದೇ ಕಾರಣ ನೀಡದೆ ಅವರನ್ನು ತಂಡದಿಂದ ಹೊರಗಿಡಲಾಗಿದೆ.
ಮಹಿಳಾ ತಂಡದ ಆಯ್ಕೆಯಲ್ಲೂ ಅವ್ಯವಹಾರ ನಡೆದಿದೆ ಎಂದು ಗೌಡ ಆರೋಪಿಸಿದ್ದಾರೆ. ಕಳೆದ 11 ವರ್ಷಗಳಿಂದ  ಭಾರತ ತಂಡದ ಚಿತ್ರಣದಲ್ಲೇ ಕಾಣದ ಆಟಗಾರ್ತಿಯೊಬ್ಬರನ್ನು ಏಷ್ಯನ್ ಗೇಮ್ಸ್‌ಗೆ ಆಯ್ಕೆ ಮಾಡಲಾಗಿದೆ ಎಂದು ದೂರುಗಳು ಕೇಳಿ ಬಂದಿವೆ.

Related Articles