Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಬಹುಮುಖ ಪ್ರತಿಭೆಯ ವೀಕ್ಷಕ ವಿವರಣೆಗಾರ: ಪ್ರಶಾಂತ್ ಅಂಬಲಪಾಡಿ

ಆರ್.ಕೆ.ಆಚಾರ್ಯ.

ಟೆನಿಸ್  ಬಾಲ್ ಕ್ರಿಕೆಟ್ ಈಗ ವೃತ್ತಿಪರತೆಯತ್ತ ಹೆಜ್ಜೆ ಹಾಕುತ್ತಿದೆ. ಪಂದ್ಯಗಳಿಗೆ ಜೀವ ತುಂಬುವಲ್ಲಿ ವೀಕ್ಷಕ ವಿವರಣೆಗಾರರ ಪಾತ್ರವೂ ಪ್ರಮುಖವಾದುದು. ಅಂತ ಅಗ್ರ ವೀಕ್ಷಕ ವಿವರಣೆಗಾರರ ಪಟ್ಟಿಯಲ್ಲಿ ಸೇರುತ್ತಾರೆ ಉಡುಪಿಯ ಅಂಬಲಪಾಡಿಯ ಪ್ರಶಾಂತ್.

ಪೊಡವಿಗೊಡೆಯ ಶ್ರೀ ಕೃಷ್ಣ ನ ನಾಡಾದ ಉಡುಪಿ ಜಿಲ್ಲೆಯ ಅಂಬಲಪಾಡಿಯಲ್ಲಿ ಜನಿಸಿರುವ ಇವರು ಬ್ಯಾಂಕ್ ಆಫ್ ಇಂಡಿಯಾ ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಉದ್ಯೋಗಿಯಾಗಿದ್ದುಕೊಂಡು,
ರಾಷ್ಟ್ರ,ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟಗಳ ವೀಕ್ಷಕ ವಿವರಣೆ ಜೊತೆ ನಾಟಕ,ಯಕ್ಷಗಾನ ಹಾಗೂ ನೃತ್ಯ ರಂಗದಲ್ಲಿ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡವರು.
2000 ನೇ ರಾಜ್ಯದ ಪ್ರತಿಷ್ಟಿತ ತಂಡ “ಪಡುಬಿದ್ರಿ ಫ್ರೆಂಡ್ಸ್” ಸಂಘಟಿಸಿದ್ದ ರಾಜ್ಯಮಟ್ಟದ ಪಂದ್ಯಾಟದಿಂದ ವೀಕ್ಷಕ ವಿವರಣೆಯ ಇವರ ಪಯಣ ಇಂದು ರಾಜ್ಯದಾದ್ಯಂತ  23 ಜಿಲ್ಲೆಗಳ  ಕ್ರಿಕೆಟ್ ಪ್ರೇಮಿಗಳ ಮನೆ ಮನ ತಲುಪಿದೆ.ಸುಮಾರು 600 ಕ್ಕೂ ಮಿಕ್ಕಿದ ಪಂದ್ಯಾಕೂಟಗಳಿಗೆ  ಹಾಗೂ ಕೆ‌.ಪಿ.ಎಲ್  ಹಾಗೂ ಚಲನಚಿತ್ರ ಕಲಾವಿದರ ಸಿ.ಸಿ.ಎಲ್ ಪಂದ್ಯಾಕೂಟಕ್ಕೂ ಕನ್ನಡ ಭಾಷೆಯಲ್ಲಿ ಇಂಪಾಗಿ ವೀಕ್ಷಕ ವಿವರಣೆ ನೀಡಿರುವ ಹೆಮ್ಮೆ ಇವರದ್ದು.
ಅಲ್ಲದೆ ನಾಟಕ ಕಲಾವಿದರಾಗಿ,ಸುಮಾರು 75 ಕ್ಕೂ ಹೆಚ್ಚಿನ ನಾಟಕದಲ್ಲಿ ಭಾಗವಹಿಸಿದ್ದು ಜೊತೆಗೆ ಯಕ್ಷಗಾನ ರಂಗದಲ್ಲೂ ನೈಪುಣ್ಯತೆಯನ್ನು ಸಾಧಿಸಿದವರು.ಕಾಲಿಗೆ ಗೆಜ್ಜೆ ಕಟ್ಟಿ ಯಕ್ಷಗಾನದ ತಾಳ ಮೇಳಕ್ಕೆ ತನ್ನ ಪ್ರತಿಭೆಯನ್ನು ಓರೆ ಹಚ್ಚಿರುವ ಶ್ರೀ ಲಕ್ಷ್ಮೀ ಜನಾರ್ಧನ ಯಕ್ಷಗಾನ ಕಲಾಮಂಡಳಿಯಂತಹ ಹವ್ಯಾಸಿ ಸಂಘಗಳ ಜೊತೆಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಗೆಜ್ಜೆ ಕಟ್ಟಿದವರು.ಜೊತೆಗೆ ನಾಟ್ಯ ರಂಗದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.
ಇವರ ಸಾಧನೆಯನ್ನು ಗುರುತಿಸಿ 2012_13 ನೇ ಸಾಲಿನಲ್ಲಿ ವಿಶ್ವ ಕ್ರೀಡಾಂಗಣ ಮತ್ತು ಸ್ಪೋರ್ಟ್ಸ್ ಫೌಂಡೇಶನ್ ಬೆಂಗಳೂರು ಇವರು ಜಂಟಿಯಾಗಿ ಕೊಡಮಾಡಿದ “ಕ್ರೀಡಾರತ್ನ” ಪ್ರಶಸ್ತಿಯನ್ನು ಬೆಂಗಳೂರಿನ ಟೌನ್ ಹಾಲ್ ನಲ್ಲಿ ಅನಿವಾಸಿ ಕನ್ನಡಿಗ ಅಬುಧಾಬಿಯ ಉದ್ಯಮಿ ಡಾ.ಬಿ.ಆರ್.ಶೆಟ್ಟಿಯವರ ಮುಖಾಂತರ ಪಡೆದಿರುವುದು ಅವರ ಪ್ರತಿಭೆಗೆ ಹಿಡಿದ ಕೈಗನ್ನಡಿ.
ತಮ್ಮನ್ನು ಹಲವಾರು ಸಂಘ ಸಂಸ್ಥೆಗಳಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರು ಸುಮಾರು 500 ಕ್ಕೂ ಮಿಕ್ಕಿರುವ ನೆನಪಿನ ಕಾಣಿಕೆಗಳು,ಸ್ಮರಣಿಕೆಗಳು,ಹಾರ ತುರಾಯಿಗಳು ಮನೆಯಲ್ಲಿ ಎಲ್ಲರನ್ನು ಆಕರ್ಷಿಸದಿರದು. ಇತಿಹಾಸ ಸೃಷ್ಟಿಸಿದ್ದ ಧಾರಾವಾಹಿ “ಗುಡ್ಡದ ಭೂತ” ದಲ್ಲಿ ಪ್ರಕಾಶ್ ರೈ  ಅವರ ಜೊತೆಗೆ ಕಿರುಪಾತ್ರದಲ್ಲಿ ನಟಿಸಿರುವುದು ಹಾಗೂ ರಕ್ತದಾನದಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದ್ದು ,ಇತ್ತೀಚೆಗೆ ಉಡುಪಿಯ ಸ್ಥಳೀಯ ಟಿ.ವಿ ಚಾನೆಲ್ ಪ್ರೈಮ್ ಟಿ.ವಿ ಯ ಮನದ ಮಾತು ಕಾರ್ಯ ಕ್ರಮದಲ್ಲಿ ಸಂದರ್ಶಿಸಿರುವದು ಇವರ ಬಹುಮುಖ ಪ್ರತಿಭೆಗೆ ಸಂದ ಗೌರವ.
 ಸಾಧನೆಯ ಹಾದಿಯಲ್ಲಿ ನಿಮ್ಮ ಪಯಣ ನಿತ್ಯ ನಿರಂತರವೂ ನಿರ್ವಿಘ್ನದಿಂದ  ಸಾಗುತಿರಲಿ.
ಕನಸುಗಳು ನನಸಾಗಲಿ.ರಾಜ್ಯದ ಶ್ರೇಷ್ಠ ವೀಕ್ಷಕ ವಿವರಣೆಕಾರರಾದ ನಿಮಗೆ www.wordpress-451521-1958220.cloudwaysapps.com  ವತಿಯಿಂದ ಹಾರ್ದಿಕ ಶುಭಾಶಯಗಳು…

administrator