Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಸಬ್‌ಜೂನಿಯರ್‌ ಬ್ಯಾಡ್ಮಿಂಟನ್‌: ಬೆಂಗಳೂರಿನ ಆಟಗಾರರ ಪ್ರಾಬಲ್ಯ

ಮೈಸೂರು: ಇಲ್ಲಿ ನಡೆದ ಯೋನೆಕ್ಸ್‌–ಸನ್‌ರೈಸ್‌ ಕರ್ನಾಟಕ ರಾಜ್ಯ ಸಬ್‌ಜೂನಿಯರ್‌ 15 ಮತ್ತು 17ವರ್ಷ ವಯೋಮಿನತಿಯ ಬಾಲಕ ಹಾಗೂ ಬಾಲಕಿಯರ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡೂ ವಯೋಮಿತಿಯ ವಿವಿಧ ವಿಭಾಗಗಳಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರದ ಆಟಗಾರರು ಪ್ರಶಸ್ತಿ ಗೆದ್ದರು. Players from Bengaluru dominated the Yonex State Junior Badminton Championship held in Mysuru, clinching several titles.

ಅಂಡರ್‌-15 ವಿಭಾಗ

ಬಾಲಕರ ಸಿಂಗಲ್ಸ್‌: ಯಶವರ್ಧನ್‌ ಎಸ್‌.ಆರ್‌. (ಬೆಂಗಳೂರು ಗ್ರಾಮಾಂತರ) ಅವರು ಸಿದ್ಧಾರ್ಥ್‌ ಎಸ್‌. ನಾಯರ್‌ (ಬೆಂಗಳೂರು ನಗರ) ಅವರನ್ನು 15-11, 15-8 ಅಂತರದಿಂದ ಸೋಲಿಸಿ ಪ್ರಶಸ್ತಿ ಗೆದ್ದರು.

ಬಾಲಕಿಯರ ಸಿಂಗಲ್ಸ್‌: ಜೊಹಾನಾ ಅಹಿಲನ್‌ (ಬೆಂಗಳೂರು ನಗರ) ಅವರು ಮೈಸೂರಿನ ಹಂಸಾ ಮುರಳೀಧರ (7ನೇ ಶ್ರೇಯಾಂಕ) ಅವರನ್ನು 15-3, 15-5 ಅಂತರದಿಂದ ಮಣಿಸಿ ಚಾಂಪಿಯನ್‌ ಆದರು.

ಬಾಲಕರ ಡಬಲ್ಸ್‌: ಚೇತಸ್‌ ಮುಂಡರಗಿ ಮತ್ತು ವಿಶಾಲ್‌ ಡಿ. ಆನಂದ್‌ (ಬೆಂಗಳೂರು ನಗರ) ಜೋಡಿ, ಗೌತಮ್‌ ಎಸ್‌. ನಾಯರ್‌ ಮತ್ತು ಸಿದ್ಧಾರ್ಥ್‌ ಎಸ್‌. ನಾಯರ್‌ (ಬೆಂಗಳೂರು ನಗರ) ಜೋಡಿಯನ್ನು 15-13, 19-17 ಅಂತರದಿಂದ ಸೋಲಿಸಿತು.

ಬಾಲಕಿಯರ ಡಬಲ್ಸ್‌: ಜೊಹಾನಾ ಅಹಿಲನ್‌ ಮತ್ತು ಪುಣ್ಯಾ ಎಂ.ಎನ್‌. (ಬೆಂಗಳೂರು ನಗರ) ಜೋಡಿ, ಮಾನ್ಯ ಮಂಜುನಾಥ್‌ (ಬೆಂಗಳೂರು ಗ್ರಾಮಾಂತರ) ಮತ್ತು ಸಾಚಿ ಘಾರ್ಗಿ (ಬೆಂಗಳೂರು ನಗರ) ಜೋಡಿಯನ್ನು 15-5, 15-13 ಅಂತರದಿಂದ ಮಣಿಸಿತು.

ಮಿಶ್ರ ಡಬಲ್ಸ್‌: ಯಶವರ್ಧನ್‌ ಎಸ್‌.ಆರ್‌. ಮತ್ತು ಅದಿತಿ ಸುಶಾಂತ್‌ (ಬೆಂಗಳೂರು ಗ್ರಾಮಾಂತರ) ಜೋಡಿ, ಮಯೂರ್‌ ಜಿ. ಮತ್ತು ಹಂಸಾ ಮುರಳೀಧರ (ಮೈಸೂರು) ಜೋಡಿಯನ್ನು 15-12, 15-13 ಅಂತರದಿಂದ ಸೋಲಿಸಿ ಪ್ರಶಸ್ತಿ ಪಡೆಯಿತು.

ಅಂಡರ್‌-17 ವಿಭಾಗ

ಬಾಲಕರ ಸಿಂಗಲ್ಸ್‌: ಶ್ಯಾಮ್‌ ಬಿಂದಿಗನವಿಲೆ (ಬೆಂಗಳೂರು ನಗರ) ಅವರು ಗೌತಮ್‌ ಎಸ್‌. ನಾಯರ್‌ (ಬೆಂಗಳೂರು ನಗರ) ಅವರನ್ನು 15-6, 15-6 ಅಂತರದಿಂದ ಸೋಲಿಸಿ ಪ್ರಶಸ್ತಿ ಗೆದ್ದರು.

ಬಾಲಕಿಯರ ಸಿಂಗಲ್ಸ್‌: ಸೆಲ್ವಸಮೃದ್ಧಿ ಸೆಲ್ವಪ್ರಭು (ಬೆಂಗಳೂರು ನಗರ) ಅವರು ಕೀರ್ತಿ ಬಾಲಾಜಿ (ಬೆಂಗಳೂರು ನಗರ) ಅವರನ್ನು 15-10, 16-14 ಅಂತರದಿಂದ ಮಣಿಸಿ ಚಾಂಪಿಯನ್‌ ಆದರು.

ಬಾಲಕರ ಡಬಲ್ಸ್‌: ಮೆಹುಲ್‌ ಮಾನವ್‌ ಅರುಳ್‌ಮುರುಗನ್‌ ಮತ್ತು ಸಾತ್ವಿಕ್‌ ಎಸ್‌. ಪ್ರಭು (ಬೆಂಗಳೂರು ನಗರ) ಜೋಡಿ, ದೇವಾಂಶ್‌ ಚೌಧರಿ ಮತ್ತು ಈಶ್ವರ್‌ ಸಾಯಿ ಕಟಂ (ಬೆಂಗಳೂರು ನಗರ) ಜೋಡಿಯನ್ನು 15-10, 12-15, 15-11 ಅಂತರದಿಂದ ಸೋಲಿಸಿತು.

ಬಾಲಕಿಯರ ಡಬಲ್ಸ್‌: ದಿಶಾ ರವಿ ಭಟ್‌ ಮತ್ತು ತನ್ವಿ ಮುನೋತ್‌ (ಬೆಂಗಳೂರು ನಗರ) ಜೋಡಿ, ಅವನಿ ಕುಲಕರ್ಣಿ (ಬೆಂಗಳೂರು ನಗರ) ಮತ್ತು ಭೂಮಿ ಕುಲಕರ್ಣಿ (ಬೆಂಗಳೂರು ಗ್ರಾಮಾಂತರ) ಜೋಡಿಯನ್ನು 15-10, 15-17, 15-11 ಅಂತರದಿಂದ ಮಣಿಸಿ ಪ್ರಶಸ್ತಿ ಗೆದ್ದಿತು.

ಮಿಶ್ರ ಡಬಲ್ಸ್‌: ಈಶ್ವರ್‌ ಸಾಯಿ ಕಟಂ ಮತ್ತು ಡೆಬೊರಾ ಜಾನ್‌ (ಬೆಂಗಳೂರು ನಗರ) ಜೋಡಿ, ಇವಾನ್‌ ಡೆಕ್ಸ್ಟರ್‌ ಫರ್ನಾಂಡಿಸ್‌ ಮತ್ತು ದಿಶಾ ರವಿ ಭಟ್‌ (ಬೆಂಗಳೂರು ನಗರ) ಜೋಡಿಯನ್ನು 15-13, 15-8 ಅಂತರದಿಂದ ಸೋಲಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.


administrator