ಜಯಂತಿಯನ್ ಕಪ್ 2026: ಮೊದಲ ದಿನವೇ ರೋಚಕ ಸ್ಪರ್ಧೆಗಳು
ಬೆಂಗಳೂರು: ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಆತಿಥ್ಯದಲ್ಲಿ ನಡೆಯುತ್ತಿರುವ ಮೂರು ದಿನಗಳ ರಾಷ್ಟ್ರೀಯ ಮಟ್ಟದ ಅಂತರಕಾಲೇಜು ಕ್ರೀಡಾಕೂಟ ‘ಜಯಂತಿಯನ್ ಕಪ್–2026’ಗೆ ಭರ್ಜರಿ ಚಾಲನೆ ದೊರೆತಿದ್ದು, ಮೊದಲ ದಿನವೇ ಬಾಸ್ಕೆಟ್‌ಬಾಲ್, ಥ್ರೋಬಾಲ್, ವಾಲಿಬಾಲ್ ಹಾಗೂ ಫುಟ್‌ಬಾಲ್ ಪಂದ್ಯಗಳಲ್ಲಿ ಕ್ರೀಡಾಪಟುಗಳು ತೀವ್ರ ಪೈಪೋಟಿ ನಡೆಸಿದರು. On the very first day of the ‘Jayantian Cup–2026’ athletes competed fiercely in basketball, throwball, volleyball and football matches.
ಬಾಸ್ಕೆಟ್‌ಬಾಲ್‌ನಲ್ಲಿ ಮೌಂಟ್ ಕಾರ್ಮೆಲ್ ವಿಶ್ವವಿದ್ಯಾಲಯ ಉತ್ತಮ ಆರಂಭ ಮಾಡಿದ್ದು, ಪೂಲ್ ‘ಎ’ ಪಂದ್ಯದಲ್ಲಿ ಆರ್‌ವಿ ತಂಡವನ್ನು 37–30 ಅಂಕಗಳಿಂದ ಮಣಿಸಿತು. ಮತ್ತೊಂದೆಡೆ, ಪೂಲ್ ‘ಬಿ’ಯಲ್ಲಿ ಕ್ರೈಸ್ಟ್ ಸಿಸಿ ತಂಡ ಜೈನ್ ಸಿಎಂಎಸ್ ವಿರುದ್ಧ 47–18 ಅಂಕಗಳ ಭರ್ಜರಿ ಗೆಲುವು ದಾಖಲಿಸಿತು.
ಪೂಲ್ ‘ಎ’ಯ ಇತರ ಪಂದ್ಯಗಳಲ್ಲಿ ಕ್ರೈಸ್ಟ್ ಮೈಸೂರು ತಂಡ ಪ್ರೆಸಿಡೆನ್ಸಿ ವಿರುದ್ಧ 22–17 ಹಾಗೂ ಜೈನ್ ಎಸ್‌ಎಸ್‌ಎಂಆರ್ ವಿರುದ್ಧ 36–22 ಅಂಕಗಳಿಂದ ಜಯ ಸಾಧಿಸಿತು. ಪೂಲ್ ‘ಬಿ’ಯಲ್ಲಿ ಎಂಎಎಚ್‌ಇ ಬೆಂಗಳೂರು 41–33 ಅಂತರದಲ್ಲಿ ಎಸ್‌ಜೆಸಿ ಕೇರಳವನ್ನು ಮಣಿಸಿದರೆ, ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯ 22–17 ಅಂಕಗಳಿಂದ ಆರ್ಮಿ ತಂಡವನ್ನು ಸೋಲಿಸಿತು. ಸಿಎಂಆರ್‌ಐಟಿ ತಂಡ ಐಎಸ್‌ಎಂಇ ವಿರುದ್ಧ 31–8 ಅಂಕಗಳ ಭರ್ಜರಿ ಗೆಲುವು ದಾಖಲಿಸಿತು.
ಪುರುಷರ ವಿಭಾಗದಲ್ಲಿ ಕ್ರೈಸ್ಟ್ ಕೆಸಿ 35–32 ಅಂಕಗಳಿಂದ ಮೊಹಂದಾಸ್ ತಂಡವನ್ನು ಸೋಲಿಸಿದರೆ, ಮಾರ್ ಬಸೇಲಿಯಸ್ 33–26 ಅಂತರದಲ್ಲಿ ಡಿಎಸ್‌ಸಿಇ ಕೆಸಿಯನ್ನು ಮಣಿಸಿತು. ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯ ‘ಎ’ ತಂಡ ಪಿಇಎಸ್ ಇಸಿ ವಿರುದ್ಧ 41–5 ಅಂಕಗಳ ಭರ್ಜರಿ ಜಯ ದಾಖಲಿಸಿತು.

ಮಹಿಳೆಯರ ವಿಭಾಗದಲ್ಲಿ ಪಿಇಎಸ್ ತಂಡ ಮಾರುಧರ್ ಕೇಸರಿ ವಿರುದ್ಧ 38–28 ಅಂಕಗಳಿಂದ ಗೆದ್ದರೆ, ಕ್ರೈಸ್ಟ್ ವೈಸಿ ತಂಡ ಆರ್ಮಿ ವಿರುದ್ಧ 24–7 ಅಂಕಗಳ ಜಯ ಸಾಧಿಸಿತು.
ಥ್ರೋಬಾಲ್‌ನಲ್ಲಿ ರೋಚಕ ಹಣಾಹಣಿ
ಥ್ರೋಬಾಲ್‌ನ ಪುರುಷರ ವಿಭಾಗದಲ್ಲಿ ಹಲವು ಪಂದ್ಯಗಳು ತೀವ್ರ ಪೈಪೋಟಿಯಿಂದ ಕೂಡಿದ್ದವು. ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯ ‘ಎ’ ತಂಡ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯವನ್ನು 2–1ರಿಂದ ಸೋಲಿಸಿತು. ಮತ್ತೊಂದು ರೋಚಕ ಪಂದ್ಯದಲ್ಲಿ ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯ ‘ಬಿ’ ತಂಡ ಮೌಂಟ್ ಕಾರ್ಮೆಲ್ ವಿಶ್ವವಿದ್ಯಾಲಯವನ್ನು 2–1ರಿಂದ ಮಣಿಸಿತು.
ಎಂಸಿಯು ತಂಡ ಶೇಷಾದ್ರಿಪುರಂ ವಿರುದ್ಧ 2–1ರಿಂದ ಗೆಲುವು ಸಾಧಿಸಿತು. ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ ಗಾರ್ಡನ್ ಸಿಟಿ ವಿಶ್ವವಿದ್ಯಾಲಯವನ್ನು 2–0ರಿಂದ ಸೋಲಿಸಿತು.
ಮಹಿಳೆಯರ ವಿಭಾಗದಲ್ಲಿಯೂ ಉತ್ತಮ ಪೈಪೋಟಿ ಕಂಡುಬಂದಿತು. ಪ್ರೆಸಿಡೆನ್ಸಿ ತಂಡ ಯೆನೆಪೋಯಾವನ್ನು 2–1ರಿಂದ ಸೋಲಿಸಿದರೆ, ಕ್ರೈಸ್ಟ್ ಕೆಸಿ ತಂಡ ಶೇಷಾದ್ರಿಪುರಂ ಯಲಹಂಕ ವಿರುದ್ಧ 2–1ರಿಂದ ಜಯ ಸಾಧಿಸಿತು. ಜೆಎನ್‌ಸಿ ತಂಡ ಕ್ರೈಸ್ಟ್ ಸಿಸಿ ವಿರುದ್ಧ 2–0ರಿಂದ ಗೆದ್ದಿತು.
ವಾಲಿಬಾಲ್‌ನಲ್ಲಿ ಕ್ರೈಸ್ಟ್ ಸಿಸಿ, ಮೌಂಟ್ ಕಾರ್ಮೆಲ್ ಮಿಂಚು
ಮಹಿಳೆಯರ ವಾಲಿಬಾಲ್‌ನಲ್ಲಿ ಕ್ರೈಸ್ಟ್ ಸಿಸಿ ತಂಡ ಪ್ರೆಸಿಡೆನ್ಸಿ ವಿರುದ್ಧ 25–8, 25–11 ಅಂಕಗಳಿಂದ ನೇರ 2–0 ಗೆಲುವು ಸಾಧಿಸಿತು. ಅಲಗಪ್ಪ ತಂಡ ಎಸ್‌ಜೆಯು ವಿರುದ್ಧ 2–0ರಿಂದ ಜಯ ಗಳಿಸಿತು.
ಮೌಂಟ್ ಕಾರ್ಮೆಲ್ ವಿಶ್ವವಿದ್ಯಾಲಯ ಜೆಎನ್‌ಸಿ ವಿರುದ್ಧ 2–0ರಿಂದ ಗೆದ್ದರೆ, ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯ ಎಸ್‌ಸಿಎಂಎಸ್‌ಬಿ ತಂಡವನ್ನು 2–0ರಿಂದ ಮಣಿಸಿತು. ಕ್ರೈಸ್ಟ್ ಸಿಸಿ ಮತ್ತು ಬಿಎಂಎಸ್‌ಸಿಡಬ್ಲ್ಯು ನಡುವಿನ ಪಂದ್ಯದಲ್ಲಿ ತೀವ್ರ ಪೈಪೋಟಿ ಕಂಡುಬಂದಿದ್ದು, ಕ್ರೈಸ್ಟ್ ಸಿಸಿ 2–1ರಿಂದ ಗೆಲುವು ಸಾಧಿಸಿತು.
ಫುಟ್‌ಬಾಲ್‌ನಲ್ಲಿ ಪೆನಾಲ್ಟಿ ಶೂಟೌಟ್ ರೋಚಕತೆ
ಫುಟ್‌ಬಾಲ್ ಪಂದ್ಯಗಳು ಮೊದಲ ದಿನದ ಪ್ರಮುಖ ಆಕರ್ಷಣೆಯಾಗಿದ್ದವು. ಹಲವು ಪಂದ್ಯಗಳು ಪೆನಾಲ್ಟಿ ಶೂಟೌಟ್‌ಗೆ ತಲುಪಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿತು.
ಕ್ರೈಸ್ಟ್ ಕೆಸಿ ‘ಬಿ’ ಮತ್ತು ಪ್ರೆಸಿಡೆನ್ಸಿ ನಡುವಿನ ಪಂದ್ಯ ಗೋಲುರಹಿತ ಡ್ರಾದಲ್ಲಿ ಅಂತ್ಯಗೊಂಡ ಬಳಿಕ, ಪೆನಾಲ್ಟಿ ಶೂಟೌಟ್‌ನಲ್ಲಿ ಕ್ರೈಸ್ಟ್ ಕೆಸಿ ‘ಬಿ’ 3–2ರಿಂದ ಗೆಲುವು ಸಾಧಿಸಿತು. ಕ್ರೈಸ್ಟ್ ಬಿಜಿಆರ್ ತಂಡ ಅಲಗಪ್ಪ ವಿರುದ್ಧ ಪೆನಾಲ್ಟಿಯಲ್ಲಿ 4–3ರಿಂದ ಜಯ ಗಳಿಸಿತು.
ಜೈನ್ ತಂಡ ಎಸ್‌ಜೆಯು ವಿರುದ್ಧ 5–4 ಹಾಗೂ ಎನ್‌ಎಂಐಟಿ ತಂಡ ಯೆನೆಪೋಯಾ ವಿರುದ್ಧ 4–2 ಅಂತರದಲ್ಲಿ ಪೆನಾಲ್ಟಿ ಶೂಟೌಟ್ ಗೆಲುವು ದಾಖಲಿಸಿದವು. ಸರ್ಕಾರಿ ಆರ್‌ಸಿ ಕಾಲೇಜು ಮತ್ತು ಜೈನ್ ಎಸ್‌ಎಸ್‌ಇಆರ್ ನಡುವಿನ ಪಂದ್ಯವೂ ಪೆನಾಲ್ಟಿ ಶೂಟೌಟ್‌ಗೆ ತಲುಪಿ, ಸರ್ಕಾರಿ ಆರ್‌ಸಿ ಕಾಲೇಜು 9–8ರಿಂದ ಜಯ ಸಾಧಿಸಿತು.
ಇನ್ನು ಮೌಂಟ್ ಕಾರ್ಮೆಲ್ ವಿಶ್ವವಿದ್ಯಾಲಯ ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯ ‘ಎ’ ತಂಡವನ್ನು 1–0ರಿಂದ ಸೋಲಿಸಿತು. ಡಿಎಸ್‌ಸಿಇ 1–0ರಿಂದ ಕ್ರೈಸ್ಟ್ ಕೆಸಿ ‘ಎ’ ತಂಡವನ್ನು ಮಣಿಸಿತು. ಆಚಾರ್ಯ 2–1ರಿಂದ ಡಾನ್ ಬಾಸ್ಕೋ ವಿರುದ್ಧ ಜಯ ಗಳಿಸಿತು. ಕ್ರೈಸ್ಟ್ ಸಿಸಿ ತಂಡ ಡಿಎಸ್‌ಸಿಎಎಸ್‌ಸಿ ವಿರುದ್ಧ 1–0ರಿಂದ ಗೆಲುವು ಸಾಧಿಸಿತು.
ಪೂಲ್ ‘ಬಿ’ಯಲ್ಲಿ ಅಥಿಯಮಾನ್ ತಂಡ ಜಿಸಿಯು ವಿರುದ್ಧ 1–0, ಕ್ರೈಸ್ಟ್ ಮೈಸೂರು ತಂಡ ಸಿಎಂಆರ್ ವಿಶ್ವವಿದ್ಯಾಲಯ ವಿರುದ್ಧ 1–0 ಹಾಗೂ ಜೈನ್ ಎಫ್‌ಇಟಿ ತಂಡ ಸಿಎಂಆರ್ ಐಟಿ ವಿರುದ್ಧ 1–0ರಿಂದ ಜಯ ಸಾಧಿಸಿತು. ನ್ಯೂ ಹೊರೈಸನ್ ತಂಡ ಸೇಂಟ್ ಆನ್ಸ್ ವಿರುದ್ಧ 2–0ರಿಂದ ಗೆದ್ದಿತು.

