Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಫಿಫಾ ವಿಶ್ವಕಪ್‌ ಫುಟ್ಬಾಲ್‌: ಪ್ರಿ ಕ್ವಾರ್ಟ್‌ಫೈನಲ್‌ ತಲುಪಿದ ಕೆನಡಾ

ಲಾಸ್‌ಏಂಜಲೀಸ್‌: ಸ್ಟೀಫನ್ ಯೂಸ್ಟಾಕ್ವಿಯೊ ಅವರ ಕೊನೆಯ ಕ್ಷಣದ ಗೋಲು,ಫಿಫಾ ವಿಶ್ವಕಪ್‌ ನ ರೌಂಡ್ ಆಫ್ 32 ಪಂದ್ಯದಲ್ಲಿ ಕೆನಡಾಗೆ ದಕ್ಷಿಣ ಆಫ್ರಿಕಾ ವಿರುದ್ಧ ಅದ್ಭುತ ಜಯ ತಂದುಕೊಟ್ಟಿತು. ಈ ಗೆಲುವಿನೊಂದಿಗೆ ಜೆಸ್ಸಿ ಮಾರ್ಷ್ ಅವರ ತಂಡ ಇದೀಗ ಹ್ಯೂಸ್ಟನ್ ಸ್ಟೇಡಿಯಂನಲ್ಲಿ ನಡೆಯಲಿರುವ ಪ್ರೀಕ್ವಾರ್ಟರ್ ಪಂದ್ಯದಲ್ಲಿ ನೆದರ್‌ಲೆಂಡ್ಸ್–ಮೊರಾಕೊ ನಡುವಿನ ವಿಜೇತರನ್ನು ಎದುರಿಸಲಿದೆ. Canada outlasted South Africa in the Round of 32 of the FIFA World Cup 2026, Stephen Eustaquio’s superb strike proving the difference between the two teams.

ಲಾಸ್ ಏಂಜಲೀಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬಫಾನಾ ಬಫಾನಾ (ದಕ್ಷಿಣ ಆಫ್ರಿಕಾ) ಮೊದಲಾರ್ಧದಲ್ಲಿ ಆಕರ್ಷಕ ಆಟವಾಡಿತು. ಆದರೆ ಅಂತಿಮ ಹಂತದಲ್ಲಿ ಗೋಲು ಗಳಿಸುವಲ್ಲಿ ವಿಫಲವಾಯಿತು. ಮೊದಲಾರ್ಧದ ಅಂತಿಮ ಕ್ಷಣಗಳಲ್ಲಿ ಕೆನಡಾ ಸತತ ಎರಡು ಉತ್ತಮ ಅವಕಾಶಗಳನ್ನು ಸೃಷ್ಟಿಸಿತು. ಮೊದಲಿಗೆ ಮೊಯ್ಸ್ ಬೊಂಬಿಟೊ ಅವರ ಹೆಡರ್‌ ಅನ್ನು ಆಬ್ರಿ ಮೊಡಿಬಾ ಗೋಲುರೇಖೆಯಿಂದ ತೆರವುಗೊಳಿಸಿದರು. ಬಳಿಕ ರೋನ್ವೆನ್ ವಿಲಿಯಮ್ಸ್, ತಾಜೋನ್ ಬುಚಾನನ್ ಅವರ ಪ್ರಯತ್ನವನ್ನು ಅದ್ಭುತವಾಗಿ ತಡೆದರು.

ದ್ವಿತೀಯಾರ್ಧದಲ್ಲಿ ಕೆನಡಾ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಟಾನಿ ಒಲುವಾಸೆಯಿ ಅವರ ಶಾಟ್‌ನ್ನು ವಿಲಿಯಮ್ಸ್ ಅತ್ಯುತ್ತಮವಾಗಿ ತಡೆದರು. ರಿಬೌಂಡ್ ಚೆಂಡನ್ನು ಒಲುವಾಸೆಯಿ ಗೋಲಾಗಿ ಪರಿವರ್ತಿಸುವ ಮುನ್ನವೇ ಎಂಬೆಕೆಜೆಲಿ ಎಂಬೊಕಾಜಿ ಅದನ್ನು ಕಾರ್ನರ್‌ಗೆ ತಳ್ಳಿದರು.

75ನೇ ನಿಮಿಷದಲ್ಲಿ ಅಲ್ಫೋನ್ಸೊ ಡೇವಿಸ್ ಅವರನ್ನು ಮೈದಾನಕ್ಕಿಳಿಸಿದಾಗ ಕ್ರೀಡಾಂಗಣದಲ್ಲಿ ಭಾರೀ ಹರ್ಷೋದ್ಗಾರ ಮೊಳಗಿತು. ಅವರ ವೇಗ ಮತ್ತು ಚಾಣಾಕ್ಷ ಆಟ ದಕ್ಷಿಣ ಆಫ್ರಿಕಾದ ರಕ್ಷಣಾಪಡೆಗೆ ಸಾಕಷ್ಟು ತೊಂದರೆ ನೀಡಿತು. ಆದರೆ ಅಂತಿಮವಾಗಿ ಪಂದ್ಯದ ಫಲಿತಾಂಶವನ್ನು ನಿರ್ಧರಿಸಿದ್ದು ಸ್ಟೀಫನ್ ಯೂಸ್ಟಾಕ್ವಿಯೊ. ಅವರು ಪೆನಾಲ್ಟಿ ಬಾಕ್ಸ್‌ನ ಅಂಚಿನಲ್ಲಿ ಬೌನ್ಸ್ ಆದ ಚೆಂಡನ್ನು ನಿಖರವಾಗಿ ನಿಯಂತ್ರಿಸಿ ಕೆಳಗಿನ ಮೂಲೆಗೆ ಬಾರಿಸಿ ಅಮೂಲ್ಯ ಗೋಲು ದಾಖಲಿಸಿದರು.

ಸೋಲಿನ ಹೊರತಾಗಿಯೂ ದಕ್ಷಿಣ ಆಫ್ರಿಕಾ ಹೆಮ್ಮೆಯಿಂದ ತವರಿನತ್ತ ಮರಳಲಿದೆ. ಏಕೆಂದರೆ ತಂಡವು ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ವಿಶ್ವಕಪ್‌ನಾಕೌಟ್ ಹಂತ ತಲುಪುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ.


administrator