ಕಷ್ಟಗಳ ಹರ್ಡಲ್ಸ್ ದಾಟಿ ಏಷ್ಯನ್, ಕಾಮನ್‌ವೆಲ್ತ್‌ಗೆ ಯಶಸ್ ಆರಾಧ್ಯ
ಬೆಂಗಳೂರು: ತುಮಕೂರು ಜಿಲ್ಲೆಯ, ಕೊರಟಗೆರೆ ತಾಲೂಕಿನ, ಹೊಳವನ ಹಳ್ಳಿ ಹೋಬಳಿಯ ಎಚ್.ವಿ, ಪಾಳ್ಯದ ದಿನಗೂಲಿ ಕಾರ್ಮಿಕರ ಮನೆಯ ಸಾಧಕ ಯಶಸ್ ಪಾಲಾಕ್ಷ ಆರಾಧ್ಯ 400 ಮೀ. ಹರ್ಡಲ್ಸ್‌ನಲ್ಲಿ ಈ ಬಾರಿಯ ಕಾಮನ್ವೆಲ್ತ್ ಹಾಗೂ ಏಷ್ಯನ್ ಗೇಮ್ಸ್ ಎರಡಕ್ಕೂ ಆಯ್ಕೆಯಾಗಿದ್ದಾರೆ. Yashas Palaksha Aradhya, the son of daily wage workers from Holavanahalli village in Koratagere taluk of Tumakuru district, has been selected to represent India at both the Commonwealth Games and the Asian Games.
ಭುವನೇಶ್ವರದಲ್ಲಿ ನಡೆಯುತ್ತಿರುವ ಅಂತರ್‌ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 400 ಮೀ. ಹರ್ಡಲ್ಸ್‌ನಲ್ಲಿ 49.14 ಸೆಕೆಂಡುಗಳಲ್ಲಿ ಗುರಿ ತಲುಪಿದ ಯಶಸ್ ನೂತನ ಕೂಟ ದಾಖಲೆಯೊಂದಿಗೆ ಏಷ್ಯನ್ ಗೇಮ್ಸ್‌ಗೆ ಆಯ್ಕೆಯಾದರು. ಏಷ್ಯನ್ ಗೇಮ್ಸ್ ಸೆಪ್ಟಂಬರ್ 19 ರಿಂದ ಅಕ್ಟೋಬರ್ 4, 2026 ಜಪಾನಿನಲ್ಲಿ ನಡೆಯಲಿದೆ. ಕಾಮನ್‌ವೆಲ್ತ್ ಗೇಮ್ಸ್ ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ಜುಲೈ 23ರಿಂದ ಆಗಸ್ಟ್ 2 ರ ವರೆಗೆ ನಡೆಯಲಿದೆ.

ಟಾರ್ಗೆಟ್ ಒಲಿಂಪಿಕ್ಸ್ ಯೋಜನೆಯಲ್ಲಿ ಯಾಕಿಲ್ಲ?: ಶನಿವಾರ ಭುವನೇಶ್ವರದಿಂದ sportsmail ಜೊತೆ ಮಾತನಾಡಿದ ಯಶಸ್ ಆರಾಧ್ಯ, “ಕಾಮನ್‌ವೆಲ್ತ್ ಹಾಗೂ ಏಷ್ಯನ್ ಗೇಮ್ಸ್ ಎರಡಕ್ಕೂ ಆಯ್ಕೆಯಾಗಿರುವುದು ಖುಷಿ ಕೊಟ್ಟಿದೆ. ನಾವು ಬಡವರಾಗಿದ್ದರೂ ನಮ್ಮ ಕ್ರೀಡಾ ಸಾಧನೆ ಶ್ರೀಮಂತವಾಗಿದೆ. ಕಾಮನ್‌ವೆಲ್ತ್ ಹಾಗೂ ಏಷ್ಯನ್ ಗೇಮ್ಸ್ ಎರಡಕ್ಕೂ ಆಯ್ಕೆಯಾಗಿರುವೆ. ಕರ್ನಾಟಕ ಸರಕಾರದ ಟಾರ್ಗೆಟ್ ಒಲಿಂಪಿಕ್ಸ್ ಯೋಜನೆಯಲ್ಲಿ ನಮ್ಮ ಹೆಸರಿಲ್ಲ. ಸರಕಾರ ನನ್ನ ಸಾಧನೆಯನ್ನು ಗುರುತಿಸುತ್ತದೆ,” ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಮೊದಲು ಹೈಜಂಪ್‌ನಲ್ಲಿ ಸ್ಪರ್ಧೆ ಮಾಡಿ, ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪದಕಗಳನ್ನು ಗೆದ್ದಿರುವ ಯಶಸ್ ಆರಾಧ್ಯ ನಂತರ ಹರ್ಡಲ್ಸ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಲ್ಲಿಯೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ನನ್ನ ಸಾಧನೆಯನ್ನು ಭಾರತೀಯ ಸೇನೆ ಗುರುತಿಸಿದೆ, 49 ಸೆಕೆಂಡುಗಳಲ್ಲಿ ಗುರಿ ತಲುಪಿರುವುದು ನನ್ನ ವೈಯಕ್ತಿಕ ಉತ್ತಮ ಸಾಧನೆ, ಪ್ರತಿಯೊಬ್ಬರ ಬದುಕಿನಲ್ಲೂ ಹರ್ಡಲ್ಸ್ ಇದ್ದೇ ಇರುತ್ತದೆ. ನಾವು ಅವುಗಳನ್ನು ದಾಟಿ ಮುನ್ನಡೆಯುವುದೇ ಯಶಸ್ಸು ಎಂದು ಹೇಳಿದರು.

