Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಕೇರಳದಲ್ಲಿ ಮೆಸ್ಸಿ, ರೊನಾಲ್ಡೋ, ನೇಮಾರ್‌ ಲುಂಗಿ

ಬೆಂಗಳೂರು: ಫಿಫಾ ವಿಶ್ವಕಪ್‌ ಫುಟ್ಬಾಲ್‌ ಜ್ವರ ಜಗತ್ತನ್ನು ಆವರಿಸುವುದಕ್ಕೆ ಮೊದಲೇ ಕೇರಳದಲ್ಲಿ ಲಿಯೋನೆಲ್‌ ಮೆಸ್ಸಿ, ಕ್ರಿಸ್ಟಿಯಾನೋ ರೊನಾಲ್ಡೋ ಹಾಗೂ ನೆಮಾರ್‌ ಜೂನಿಯರ್‌ ಅವರ ಬ್ರಾಂಡಿನ ಲುಂಗಿಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. FIFA World Cup 2026: Messi, Neymar and Ronaldo are now on Kerala’s Lungis

ಭಾರತ ಫುಟ್ಬಾಲ್‌ ವಿಶ್ವಕಪ್‌ಗೆ ಅರ್ಹತೆ ಪಡೆದಿಲ್ಲ, ಆದರೆ ಭಾರತದಲ್ಲಿ ಫುಟ್ಬಾಲ್‌ ವಿಶ್ವಕಪ್‌ ಸಂಭ್ರಮಿಸುವ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಕೇರಳಲ್ಲಿ ಫುಟ್ಬಾಲ್‌ ಅಭಿಮಾನಿಗಳೇ ಹೆಚ್ಚು. ಕ್ರಿಕೆಟ್‌ ಈ ದೇಶದ ಉಸಿರಾಗಿದ್ದರೂ ಕೇರಳದಲ್ಲಿ ಫುಟ್ಬಾಲ್‌ ಹೆಚ್ಚು ಜನಪ್ರಿಯತೆ ಪಡೆದಿದೆ. ಕೇರಳದಲ್ಲಿ ಲುಂಗಿ ಧರಿಸುವವರ ಸಂಖ್ಯೆ ಹೆಚ್ಚು ಇದನ್ನೇ ಅರಿತ ಬಟ್ಟೆ ಉತ್ಪಾದಕರು ಈ ಬಾರಿ ವಿಶ್ವಕಪ್‌ ಸಂದರ್ಭ ಬೇರೆ ಬೇರೆ ದೇಶಗಳ ಆಟಗಾರರ ಜೆರ್ಸಿಯ ಬಣ್ಣದ ಲುಂಗಿ ಹಾಗೂ ಟಿಶರ್ಟ್‌ ಉತ್ಪಾದಿಸಿದ್ದು, ಈಗ ಕೇರಳದ ಮಾರುಕಟ್ಟೆಯಲ್ಲಿ ಈ ಉತ್ಪನ್ನಗಳು ಹೆಚ್ಚು ಜನಪ್ರಿಯತೆ ಪಡೆದಿವೆ.


administrator