Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಚಿಂತನೆಗೆ ಪೂರಕವಾದ ಬೇಸಿಗೆ ಶಿಬಿರ ಮಂಥನ: ಮಂಜಯ್ಯ ಶೆಟ್ಟಿ

ಕುಂದಾಪುರ: ಶಾಲೆಗಳಲ್ಲಿ ನಡೆಯುವ ಬೇಸಿಗೆ ಶಿಬಿರಗಳು ಮಕ್ಕಳ ಭವಿಷ್ಯಕ್ಕೆ ಪೂರಕವಾಗಿರಬೇಕು. ಶಿಬಿರಗಳಲ್ಲಿ ಕಲಿತ ಒಳ್ಳೆಯ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಆ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದು ಕೊಲ್ಲೂರು ಮುಕಾಂಬಿಕಾ ದೇವಾಲಯದ ಮಾಜಿ ಮ್ಯಾನೇಜಿಂಗ್‌ ಟ್ರಸ್ಟಿ ಸಬ್ಲಾಡಿ ಮಂಜಯ್ಯ ಶೆಟ್ಟಿ ಅವರು ಕರೆ ನೀಡಿದರು. Summer camps held in schools should be conducive to the future of children. The good ideas learned in the camps should be implemented in life.

ಅವರು ಕುಂದಾಪುರ ತಾಲೂಕಿನ ಯಡಾಡಿ ಮತ್ಯಾಡಿಯಲ್ಲಿರುವ ಸುಜ್ಞಾನ ಎಜ್ಯುಕೇಷನಲ್‌ ಟ್ರಸ್ಟ್‌ನ ವಿದ್ಯಾರಣ್ಯ ಕ್ಯಾಂಪಸ್‌ನಲ್ಲಿ ಸುಜ್ಞಾನ ಪಿಯು ಕಾಲೇಜು ಹಾಗೂ ವಿದ್ಯಾರಣ್ಯ ಇಂಗ್ಲಿಷ್‌ ಮೀಡಿಯಂ ಸ್ಕೂಲ್‌ ಆಯೋಜಿಸಿದ “ಮಂಥನ” ಬೇಸಿಗೆ ಶಿಬಿರದ ಐದನೇ ದಿನದ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.

“ಮಕ್ಕಳ ಕೈಗೆ ಮೊಬೈಲ್‌ ನೀಡುವುದನ್ನು ನಿಲ್ಲಿಸಬೇಕು. ಅವರಿಗೆ ಬದುಕಿನ ಬಗ್ಗೆ ಅರಿವು ಮೂಡಿಸುವ ಕೆಲಸಗಳು ಮನೆಯಲ್ಲಿ ಮತ್ತು ಶಾಲೆಯಲ್ಲಿ ನಡೆಯಬೇಕು. ನಾವೆಲ್ಲ ಕುಲ ಕಸುಬಿನ ಜೊತೆಯಲ್ಲಿ ಬದುಕನ್ನು ಕಟ್ಟಿಕೊಂಡವರು. ನಾವು ಯಾವುದೇ ಉನ್ನತ ಹುದ್ದೆ ತಲುಪಿದರೂ ನಮಗೆ ಅನ್ನ ನೀಡಿದ ಕೃಷಿಯನ್ನು ಮರೆಯಬಾರದು. ನಮ್ಮ ಬದುಕನ್ನು ತಿದ್ದಿದ ಗುರು ಹಿರಿಯರಿಗೆ ನಾವು ಸದಾ ಚಿರ ಋಣಿಯಾಗಿರಬೇಕು ಹಾಗೂ ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಶಿಕ್ಷಣ ಎನ್ನುವುದು ಕೇವಲ ಅಂಕಗಳಿಕೆಯಲ್ಲ; ಸಮಾಜದಲ್ಲಿ ಹೇಗೆ ಇರಬೇಕು ಮತ್ತು ವರ್ತಿಸಬೇಕು ಎಂಬುದನ್ನು ಕಲಿಸಿಕೊಡುವುದೇ ನಿಜವಾದ ಶಿಕ್ಷಣ. ಶಿಬಿರಗಳು ಮಕ್ಕಳಿಗೆ ಚಿಂತನೆಯ ಹಾದಿ ತೋರಿಸಬೇಕು” ಎಂದು ಹೇಳಿದರು.

ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಬಿದ್ಕಲ್‌ಕಟ್ಟೆ ಇದರ ಪ್ರಾಂಶುಪಾಲರಾದ, ಕರುಣಾಕರ ಶೆಟ್ಟಿ ಅವರು ಮಾತನಾಡಿ, “ಸುಜ್ಞಾನ ಎಜ್ಯುಕೇಶನ್‌ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ರಮೇಶ್‌ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್‌ ಚಂದ್ರ ಶೆಟ್ಟಿ ಹಾಗೂ ಖಜಾಂಚಿ ಭರತ್‌ ಶೆಟ್ಟಿ ಅವರಿಗೆ ಶಿಕ್ಷಣದ ಬಗ್ಗೆ ಇರುವ ಬದ್ಧತೆಯನ್ನು ಮೆಚ್ಚಿದರು. ಡಾ. ರಮೇಶ್‌ ಶೆಟ್ಟಿ ಅವರು ಸರಕಾರಿ ಶಾಲೆಗಳಿಗೂ ನೆರವನ್ನು ನೀಡಿರುತ್ತಾರೆ. ಕಾಡಿನ ನಡುವೆ ಪ್ರಶಾಂತವಾದ ವಾತಾವರಣದಲ್ಲಿ ಅಪೂರ್ವವಾದ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಮಾದರಿ ಎನಿಸಿದ್ದಾರೆ. ಅವರು ನಡೆಸುತ್ತಿರುವ ಈ ಶಿಬಿರ ಮಾದರಿ ಶಿಬಿರವಾಗಿದೆ,” ಎಂದರು.

ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದ ಹಿರಿಯ ಕ್ರೀಡಾ ಪತ್ರಕರ್ತ ಸೋಮಶೇಖರ್‌ ಪಡುಕರೆ ಶಿಕ್ಷಣಕದ ಜೊತೆಯಲ್ಲಿ ಕ್ರೀಡೆ ಎಷ್ಟು ಪ್ರಾಮುಖ್ಯವಾದುದು ಎಂದು ತಿಳಿಸಿದರು. “ಪದಕ ಗೆಲ್ಲುವುದೊಂದೇ ಕ್ರೀಡೆಯ ಉದ್ದೇಶವಲ್ಲ. ಕ್ರೀಡೆಯ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಚಿಕ್ಕಂದಿನಿಂದಲೇ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳವುದರಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಹುಟ್ಟಿಕೊಳ್ಳುತ್ತದೆ,” ಎಂದು ಹೇಳಿದ ಅವರು ಕ್ರೀಡಾ ಜಗತ್ತಿನ ಕೆಲವು ಸಾಧಕರ ಕುರಿತು ಮಾಹಿತಿ ನೀಡಿದರು.  

ಶಿಬಿರದಲ್ಲಿ ಖ್ಯಾತ ಚಿತ್ರಕಲಾವಿದ ರಾಜಶೇಖರ ತಾಳಿಕೋಟೆ ಅವರು ಮಕ್ಕಳಿಗೆ ಚಿತ್ರಕಲೆಯ ವಿವಿಧ ಹಂತಗಳನ್ನು ಕಲಿಸಿಕೊಟ್ಟರು. ಖ್ಯಾತ ರಂಗಭೂಮಿ ಕಲಾವಿದ ಪ್ರಖ್ಯಾತ ಜೇಷ್ಠ ಅವರು ರಂಗಕಲೆಗಳ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಣದ ಜೊತೆಯಲ್ಲಿ ಕಲೆ ಎಷ್ಟು ಮುಖ್ಯವಾಗಿರುತ್ತದೆ ಹಾಗೂ ಕಲಿಕೆಗೆ ಪೂಕರವಾಗಿರುತ್ತದೆ ಎಂಬುದನ್ನು ಅರ್ಥಪೂರ್ಣವಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಶಿಬಿರದ ಪ್ರಮುಖ ಆಕರ್ಷಣೆಯಾಗಿ ಕರ್ನಾಟಕ ರಾಜ್ಯ ಅಗ್ನಿಶಾಮಕ ದಳದವರಿಂದ ಪ್ರಾತ್ಯಕ್ಷಿಕೆ ನಡೆಯಿತು. ಬೆಂಕಿ ಅವಘಡಗಳ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಕ್ಕಳು ಕುತೂಹಲದಿಂದ ಮಾಹಿತಿ ಪಡೆದರು.

ವೇದಿಕೆಯಲ್ಲಿ ಹೆಬ್ರಿ ಅಮೃತ ಭಾರತಿ ಸಿ.ಬಿ.ಎಸ್.ಸಿ ಶಾಲೆಯ ಪ್ರಾಂಶುಪಾಲರಾದ ಅನಿತಾ ಕುಮಾರಿ, ಸುಜ್ಞಾನ ಎಜುಕೇಶನಲ್‌ ಟ್ರಸ್ಟ್‌ನ ಅಧ್ಯಕ್ಷ ಡಾ. ರಮೇಶ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ ಹಾಗೂ ಮುಖ್ಯೋಪಾಧ್ಯಾಯ ಪ್ರದೀಪ ಕೆ. ಉಪಸ್ಥಿತರಿದ್ದರು.


administrator