Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಹಾಲು ಮಾರುವ ಕಣಿವೆಯ ಹುಡುಗ ಕುಸ್ತಿಯಲ್ಲಿ ಚಿನ್ನ ಗೆದ್ದ ಕತೆ

ಅಂಬಿಕಾಪುರ: ಜಮ್ಮು ಮತ್ತು ಕಾಶ್ಮೀರದ ಹಮಾಮ್ ಹುಸೇನ್  ಕುಸ್ತಿ ಅಭ್ಯಾಸ ಇಲ್ಲದಿರುವಾಗ ಅಣ್ಣನೊಂದಿಗೆ ಮನೆ ಮನೆಗೆ ಹಾಲು ತಲುಪಿಸುವ ಕೆಲಸದಲ್ಲಿ ಸಹಾಯ ಮಾಡುತ್ತಾರೆ. ಐದು ವರ್ಷಗಳ ಹಿಂದೆ ಅವರ ತಂದೆ ನಿಧನರಾದಾಗಿನಿಂದ ಹುಸೇನ್ ಮತ್ತು ಅವರ ಅಣ್ಣ ತಮ್ಮ ಕುಟುಂಬಕ್ಕಾಗಿ ಜೀವನೋಪಾಯಕ್ಕಾಗಿ ಹಾಲು ಮಾರಾಟ ಮಾಡುತ್ತಿದ್ದಾರೆ, ಜೊತೆಯಲ್ಲಿ ಕುಸ್ತಿಯಲ್ಲಿ ಸಾಧನೆ ಮಾಡುವ ಕನಸನ್ನು ಜೀವಂತವಾಗಿರಿಸಿದ್ದಾರೆ. From delivering milk to winning first career gold at KITG 2026, J&K wrestler Hamam Hussain’s dreams come true.

ಈ ನಿರಂತರ ಶ್ರಮ ಖೇಲೋ ಇಂಡಿಯಾ ಟ್ರೈಬಲ್ ಗೇಮ್ಸ್ 2026 ರಲ್ಲಿ ಫಲ ನೀಡಿದೆ. ಜಮ್ಮುವಿನ ಜೋರಾವರ್ ಗ್ರಾಮದ 28 ವರ್ಷದ ಕುಸ್ತಿಪಟು ಹಮಾನ್‌ ಹುಸೇನ್‌ ಹಿಮಾಚಲ ಪ್ರದೇಶದ ಮೋಹಿತ್ ಕುಮಾರ್ ಅವರನ್ನು  ಪುರುಷರ 79 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಸೋಲಿಸಿ ತನ್ನ 14 ವರ್ಷಗಳ ಕುಸ್ತಿ ವೃತ್ತಿಜೀವನದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ತನ್ನ ಮೊದಲ ಚಿನ್ನದ ಪದಕವನ್ನು ಗೆದ್ದರು.

“ನನ್ನ ಅಣ್ಣ ಕೂಡ ಕುಸ್ತಿಪಟು ಮತ್ತು ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಿದ್ದರು. ನಮ್ಮ ತಂದೆ ನಿಧನರಾದ ನಂತರ, ಎಲ್ಲಾ ಜವಾಬ್ದಾರಿಗಳು ನಮ್ಮ ಹೆಗಲ ಮೇಲೆ ಬಿದ್ದವು. ನನ್ನ ಸಹೋದರ ಕುಸ್ತಿಯನ್ನು ತ್ಯಜಿಸಿ ಹಾಲು ಮಾರಾಟ ಮಾಡಲು ಪ್ರಾರಂಭಿಸಬೇಕಾಯಿತು.  ನಾನು ಅವರೊಂದಿಗೆ ಮನೆ ಮನೆಗೆ ಹಾಲು ಮಾರಲು ಹೋಗುತ್ತಿದ್ದೆ. ಆದರೆ ಆತ ಕುಸ್ತಿಯನ್ನು ಮುಂದುವರಿಸಲು ನನ್ನನ್ನು ಪ್ರೇರೇಣೆ ನೀಡಿದ ಮತ್ತು ನನ್ನನ್ನು ದಂಗಲ್‌ಗಳಿಗೆ ಕರೆದೊಯ್ಯುತ್ತಿದ್ದ, ”ಎಂದು ಹುಸೇನ್ ತಿಳಿಸಿದರು.

“ನಮ್ಮ ತಂದೆ ಸಾಕಿದ್ದ  ಎಮ್ಮೆಗಳು ನಮ್ಮ ಬದುಕಿಗೆ ಆಧಾರವಾಯಿತು. ನನ್ನ ಸಹೋದರ ಹಾಲು ಮಾರಾಟ ಮಾಡುವ ಮೂಲಕ ಮನೆಯನ್ನು ನಡೆಸುತ್ತಿದ್ದನು, ಮತ್ತು ನಾನು ಅವನಿಗೆ ಸಹಾಯ ಮಾಡಿದೆ. ಆದರೆ ನಾನು ಮಣ್ಣಿನ ಅಖಾಡಕ್ಕೆ ಕಾಲಿಟ್ಟ ನಂತರ, ಕುಸ್ತಿಯ ಬಗ್ಗೆ ಆಕರ್ಷಿತನಾದೆ, ”ಎಂದು ಜಮ್ಮುವಿನ ಹುಸೇನ್ ಬುಡಕಟ್ಟು ಜನಾಂಗಕ್ಕೆ ಸೇರಿದ ಹಮಾಮ್‌ ಹೇಳಿದರು.

ಸೀಮಿತ ಸೌಲಭ್ಯಗಳ ಹೊರತಾಗಿಯೂ, ಹಮಾಮ್ ಎಂದಿಗೂ ಭರವಸೆ ಕಳೆದುಕೊಳ್ಳಲಿಲ್ಲ. ಅವರು ತಮ್ಮ ಹಳ್ಳಿಯಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಮಣ್ಣಿನ ಅಖಾಡದಲ್ಲಿ ತರಬೇತಿ ಪಡೆಯುತ್ತಾರೆ ಮತ್ತು ಮ್ಯಾಟ್ ಅಭ್ಯಾಸಕ್ಕಾಗಿ ಜಮ್ಮುವಿಗೆ ಸುಮಾರು 40 ಕಿ.ಮೀ ಪ್ರಯಾಣಿಸುತ್ತಾರೆ – ಅದೇ ಸಮಯದಲ್ಲಿ ಅವರ ಕೆಲಸದ ಜವಾಬ್ದಾರಿಗಳನ್ನು ನಿಭಾಯಿಸುತ್ತಾರೆ.


administrator