Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಆಡುವ ಹನ್ನೊಂದು ಆಟಗಾರರು, ಕಾಡುವ ಹನ್ನೊಂದು ಅಭಿಮಾನಿಗಳು

ಬೆಂಗಳೂರು: Don’t send me flowers when I’m dead. If you like me, send them while I’m alive: Brian Clough

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮತ್ತೆ ಆರಂಭಗೊಂಡಿದೆ. ಹಾಲಿ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಸರ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ. ಆದರೆ ಕಳೆದ ಬಾರಿಯ ವಿಜಯೋತ್ಸವದ ವೇಳೆ ಜೀವಕಳೆದುಕೊಂಡ 11 ಕ್ರಿಕೆಟ್‌ ಅಭಿಮಾನಿಗಳ ನೆನಪು ಈ ಸಂದರ್ಭದಲ್ಲಿ ಕ್ರಿಕೆಟ್‌ ಅಭಿಮಾನಿಗಳು ಹಾಗೂ ಆಟಗಾರರನ್ನು ಕಾಡದಿರದು. Eleven cricket players playing at Chinnaswamy Stadium, along with eleven haunting cricket fans

ಒಂದಿಷ್ಟು ದಿನ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಮೌನಕ್ಕೆ ಸರಿಯಿತು. ಕೆಲವು ಅಧಿಕಾರಿಗಳು ಅಮಾನತುಗೊಂಡರು. ಕೆಲವು ರಾಜಕಾರಣಿಗಳು ಹುದ್ದೆ ಕಳೆದುಕೊಂಡರು. ಆದರೆ ಕಳೆದುಹೋದ ಜೀವಗಳ ಬಗ್ಗೆ ಹಣ ನೀಡಿದ್ದಷ್ಟೇʼʼʼ ಪರಿಹಾರ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಅಂತಾರಾಷ್ಟ್ರೀಯ ಪಂದ್ಯಗಳನ್ನು ನಡೆಸುವುದು ಮತ್ತು ಐಪಿಎಲ್‌ ಪಂದ್ಯಗಳನ್ನು ಆಯೋಜಿಸುವುದೇ ನಮ್ಮ ಗುರಿ ಎಂದು ಚುನಾವಣೆಗೆ ನಿಂತ ಮಾಜಿ ಕ್ರಿಕೆಟಿಗ ವೆಂಕಟೇಶ್‌ ಪ್ರಸಾದ್‌ ಪಡೆ ನಿರೀಕ್ಷೆಯಂತೆ ಪಂದ್ಯಗಳನ್ನು ಆಯೋಜಿಸುತ್ತಿದೆ. ಅದೇ ರೀತಿ ಈ ಬಾರಿ ಐಪಿಎಲ್‌ನ ಫೈನಲ್‌ ಪಂದ್ಯವೂ ಬೆಂಗಳೂರಿನಲ್ಲೇ ನಡೆಯಲಿದೆ. ಅಲ್ಲದೆ ವೆಸ್ಟ್‌ ಇಂಡೀಸ್‌ ವಿರುದ್ಧದ ಸರಣಿಗೂ ಬೆಂಗಳೂರು ಆತಿಥ್ಯ ವಹಿಸಲಿದೆ.

ಹಾಗಾದರೆ ಆ 11 ಜನರ ಸಾವಿಗೆ ಯಾರು ಕಾರಣ?:  ಕರ್ನಾಟಕ ಸರಕಾರ ಮತ್ತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ಗೆ ಅವಕಾಶ ಕೊಟ್ಟಿದೆ. ಇದು ಅನಿವಾರ್ಯ ಕೂಡ. ರಾಜ್ಯದ ಆರ್ಥಿಕ ದೃಷ್ಟಯಿಂದ ಮತ್ತು ಪ್ರತಿಷ್ಠೆಯ ದೃಷ್ಟಿಯಿಂದ ಇಲ್ಲಿ ಕ್ರಿಕೆಟ್‌ ಪಂದ್ಯಗಳು ನಿರಂತರವಾಗಿ ನಡೆಯುತ್ತಿರಬೇಕು. ಜನಪ್ರತಿನಿಧಿಗಳು ವಿಧಾನಸೌಧದಲ್ಲಿ ತಾವು ಪ್ರತಿನಿಧಿಸುತ್ತಿರುವ ಕ್ಷೇತ್ರಗಳಲ್ಲಿರುವ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು ಐಪಿಎಲ್‌ ಟಿಕೆಟ್‌ ಬಗ್ಗೆ ಸದನದಲ್ಲಿ ಬೇಡಿಕೆ ಇಟ್ಟಿರುವುದು, ಸಭಾಧ್ಯಕ್ಷರು ಅವುಗಳಿಗೆ ಸ್ಪಂದಿಸುವುದು ಬೇಸರದ ಸಂಗತಿ. ನಮ್ಮ ನೆನಪಿನಂಗಳದಲ್ಲಿ 11 ಕ್ರಿಕೆಟ್‌ ಅಭಿಮಾನಿಗಳ ಸಾವಿವ ಸೂತಕ ಮರೆಯಾಗಿ ಈಗ ಹನ್ನೊಂದು ಆಟಗಾರರು ಆಡಲಾರಂಭಿಸಿದ್ದಾರೆ.

ಈಗ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸತ್ತವರ ನೆನಪಿಗಾಗಿ 11 ಆಸನಗಳನ್ನು ಮೀಸಲಿಟ್ಟಿದೆ. ಅದಕ್ಕೆ ಪುಷ್ಟಗುಚ್ಛಗಳನ್ನಿಟ್ಟು ಅಲಂಕರಿಸಿದೆ. ದುರಂತದ ಕತೆ ಹೇಳುವ 11 ಆಸನಗಳು ಮತ್ತು ನೆನಪಿನ ಫಲಕವನ್ನು ರಾಜ್ಯದ ಗೃಹ ಸಚಿವ ಪರಮೇಶ್ವರ್‌ ಅವರೇ ಉದ್ಘಾಟಿಸಿದರು. ಇದರೊಂದಿಗೆ ಎಲ್ಲ ನೋವುಗಳು ಮರೆಯಾಗಿ ಮತ್ತೆ ಸಂಭ್ರಮ ಮನೆ ಮಾಡಿದೆ. ಮುಂದಿನ ದಿನಗಳಲ್ಲಿ ಆ ಹನ್ನೊಂದು ಆಸನದ ಕಡೆಗೆ ಸಿಕ್ಸರ್‌ ಹೊಡೆದರೆ ಕೆಎಸ್‌ಸಿಎ, ಆರ್‌ಸಿಬಿ ಅಥವಾ ಬಿಸಿಸಿಐ 11 ಕೋಟಿ ಬಹುಮಾನ ಘೋಷಿಸಿದರೂ ಅಚ್ಚರಿ ಪಡಬೇಕಾಗಿಲ್ಲ.

ಆಟದ ದಿನ ಕುರ್ಚಿಗಿರುವ ಬೆಲೆ ಮರುದಿನ ಇರುವುದೇ ಇಲ್ಲ. ನಾವು ಆಡುತ್ತೇವೆ… ಅಲಂಕರಿಸಿದ ಹೂವು ಬಾಡುತ್ತದೆ… ಆಟದ ಇನ್ನಿಂಗ್ಸ್‌ನಂತೆ ಬದುಕಿನ ಇನ್ನಿಂಗ್ಸ್‌ ಕೂಡ ಒಂದು ದಿನ ಮುಗಿಯುತ್ತದೆ. ಇಷ್ಟೇ ಬದುಕಿನಾಟ… ಆಟ ಮುಂದುವರಿಯಲಿ…..


administrator