ರಾಷ್ಟ್ರೀಯ ಪ್ಯಾರಾ ಕ್ರೀಡಾಕೂಟ: ಕರ್ನಾಟಕಕ್ಕೆ 6 ಚಿನ್ನ
ಭುವನೇಶ್ವರ: ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ಶನಿವಾರ ಮುಕ್ತಾಯಗೊಂಡ 24ನೇ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕದ ಕ್ರೀಡಾಟಪುಗಳು 6 ಚಿನ್ನ, 3 ಬೆಳ್ಳಿ ಹಾಗೂ 3 ಕಂಚಿನ ಪದಕಳನ್ನು ಗೆದ್ದು ಪದಕ ಪಟ್ಟಿಯಲ್ಲಿ ರಾಜ್ಯಕ್ಕೆ 8ನೇ ಸ್ಥಾನ ತಂದುಕೊಟ್ಟಿದ್ದಾರೆ. At the 24th National Para Athletics Championships, Karnataka athletes won 6 gold, 3 silver and 3 bronze medals, bringing the state to 8th place in the medal tally.
ಪುರುಷರ T63 ವಿಭಾಗದ 100 ಮೀ. ಓಟದಲ್ಲಿ ಕರ್ನಾಟಕದ ಯುವರಾಜ್ ಅಣ್ಣಪ್ಪ ವೈಮಿ 13.40 ಸೆಕೆಂಡಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರು. ಇದರೊಂದಿಗೆ ಕರ್ನಾಟಕ ಚಿನ್ನದ ಮೂಲಕ ಪದಕದ ಖಾತೆ ಆರಂಭಿಸಿತು.

ಪುರುಷರ T47 ವಿಭಾಗದ 400 ಮೀಟರ್ ಓಟದಲ್ಲಿ ಬಾಬು ಜಾನು ಪಿ 49.54 ಸೆಕೆಂಡುಗಳಲ್ಲಿ ಗುರಿ ತಲುಪಿ ಕರ್ನಾಟಕಕ್ಕೆ ಎರಡನೇ ಚಿನ್ನ ತಂದರು. ಪುರುಷರ F12 ವಿಭಾಗದ ಶಾಟ್ಪಟ್ನಲ್ಲಿ ವಿಶಾಲ್ ಎನ್ ಪಾತ್ರೋಟಿ 10.42 ಮೀ. ದೂರಕ್ಕೆ ಗುಂಡೆಸೆದು ಕಂಚಿನ ಪದಕ ಗೆದ್ದರು.
ವನಿತೆಯರ T37 ವಿಭಾಗದ 100 ಮೀ. ಓಟದಲ್ಲಿ ಭಾರತಿ ಬಿ. 17.61 ಸೆಕೆಂಡುಗಳಲ್ಲಿ ಗುರಿ ತಲುಪಿ ರಾಜ್ಯಕ್ಕೆ ಮೂರನೇ ಚಿನ್ನ ತಂದಿತ್ತರು. T12 ವಿಭಾಗದ ವನಿತೆಯರ 400 ಮೀ. ಓಟದಲ್ಲಿ ಕರ್ನಾಟಕದ ಸೌಮ್ಯ ಬೆಳ್ಳಿ ಪದಕ ಗೆದ್ದರು. 1500 ಮೀ ಓಟದಲ್ಲಿ ರಕ್ಷಿತಾ ಆರ್ T11 ವಿಭಾಗದಲ್ಲಿ ಚಿನ್ನ ಗೆದ್ದು ರಾಜ್ಯಕ್ಕೆ ಕೀರ್ತಿ ತಂದರು. 5 ನಿಮಿಷ 46.65 ಸೆಕೆಂಡುಗಳಲ್ಲಿ ಗುರಿ ತಲುಪಿದ ರಕ್ಷಿತಾ ಆರ್. ಅಗ್ರ ಸ್ಥಾನಿಯಾದರು.
ವನಿತೆಯರ T13 ವಿಭಾಗದ 1500 ಮೀ. ಓಟದಲ್ಲಿ ಕರ್ನಾಟಕದ ಸೌಮ್ಯ ಅಗ್ರ ಸ್ಥಾನಿಯಾಗಿ ರಾಜ್ಯಕ್ಕೆ ಮತ್ತೊಂದು ಚಿನ್ನ ತಂದರು. 5 ನಿಮಿಷ 14.04 ಸೆಕೆಂಡುಗಳಲ್ಲಿ ಗುರಿ ತಲುಪಿದ ಸೌಮ್ಯ ರಾಜ್ಯಕ್ಕೆ ಮತ್ತೊಂದು ಚಿನ್ನದ ಕೊಡುಗೆ ನೀಡಿದರು. ವನಿತೆಯರ ಲಾಂಗ್ಜಂಪ್ನಲ್ಲಿ ಭಾರತ ಬಿ ಕಂಚಿನ ಪದಕ ಗೆದ್ದರು. 3.07 ಮೀ. ಉದ್ದಕ್ಕೆ ಜಿಗಿಯುವ ಮೂಲಕ ಭಾರತಿ ಮೂರನೇ ಸ್ಥಾನಿಯಾದರು.

ವನಿತೆಯರ ಶಾಟ್ಪಟ್ F33 ವಿಭಾಗದಲ್ಲಿ ಕರ್ನಾಟಕದ ಮೇಧಾ ಜಯಂತ್ 5.15 ಮೀ. ದೂರಕ್ಕೆ ಎಸೆದು ಚಿನ್ನ ಗೆದ್ದರು. ಶಾಟ್ಪಟ್ F57 ವಿಭಾಗದಲ್ಲಿ ಮೈಸೂರಿನ ಮೈಸೂರಿನ ಶಿಲ್ಪಾ ಕೆ ಎಸ್ 6.97 ಮೀ. ದೂರಕ್ಕೆ ಎಸೆದು ಬೆಳ್ಳಿಗೆ ತೃಪ್ತಿಪಟ್ಟರು.
F12 ವನಿತೆಯರ ಜಾವೆಲಿನ್ ಎಸೆತದಲ್ಲಿ ಗಂಗವ್ವ ನೀಲಪ್ಪ 21.97 ಮೀ. ದೂರಕ್ಕೆ ಎಸೆದು ಬೆಳ್ಳಿ ಗೆದ್ದರು.
ಭಾರತೀಯ ಪ್ಯಾರಾಲಿಂಪಿಕ್ಸ್ ಸಮಿತಿಯ ಮುಖ್ಯಸ್ಥರಾದ ಕೆ. ಸತ್ಯನಾರಾಯಣ (Chairman and Chief Coach of the Paralympic Committee of India (PCI).ಅವರ ಮುತುವರ್ಜಿಯಲ್ಲಿ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಿತು. ಒಡಿಶಾ ಸರಕಾರ ಕ್ರೀಡಾ ಇಲಾಖೆ ಇದಕ್ಕೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿತ್ತು.

