ಗೇರುಸೊಪ್ಪ ಬಂಗಾರಮಕ್ಕಿ ಕ್ಷೇತ್ರಕ್ಕೆ ಕ್ರಿಕೆಟಿಗ ಕೆ.ಎಲ್. ರಾಹುಲ್ ಭೇಟಿ
ಹೊನ್ನಾವರ: ಅಂತರಾಷ್ಟ್ರೀಯ ಕ್ರಿಕೆಟ್ ತಾರೆ ಕನ್ನಡಿಗ ಕೆ.ಎಲ್. ರಾಹುಲ್ ಅವರು ಹೊನ್ನಾವರ ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರವಾದ ಗೆರುಸೊಪ್ಪಾದ ಬಂಗಾರಮಕ್ಕಿಗೆ ಭಾನುವಾರ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು. International cricket star Kannadigas K.L. Rahul visited the famous holy site of Gerusoppada Bangaramakki in Honnavar taluk on Sunday and sought God’s blessings.
ಕ್ಷೇತ್ರಕ್ಕೆ ಆಗಮಿಸಿದ ಅವರು, ಇಲ್ಲಿನ ಆರಾಧ್ಯ ದೈವ ಶ್ರೀ ವೀರಾಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಮಾರುತಿ ಗುರೂಜಿಯವರನ್ನು ಭೇಟಿ ಮಾಡಿದ ರಾಹುಲ್, ಅವರೊಟ್ಟಿಗೆ ಕೆಲ ಹೊತ್ತು ಸಮಾಲೋಚನೆ ನಡೆಸಿ, ಆಶೀರ್ವಾದ ಪಡೆದುಕೊಂಡರು. ಸ್ಟಾರ್ ಕ್ರಿಕೆಟಿಗನ ಭೇಟಿ ಕ್ಷೇತ್ರದ ಭಕ್ತರು ಹಾಗೂ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಇತ್ತೀಚಿಗೆ ವಿರಾಟ್ ಕೊಹ್ಲಿ ಅವರು ಕ್ಷೇತ್ರದ ಧರ್ಮದರ್ಶಿಗಳಿಗೆ ಸಹಿ ಮಾಡಿದ ಬ್ಯಾಟ್ ಕಳುಹಿಸಿದ್ದರು. ಅದನ್ನು ಭಾರತ ತಂಡದ ಥ್ರೋಡೌನ್ ಸ್ಪೆಷಾಲಿಸ್ಟ್ ರಾಘವೇಂದ್ರ ಅವರು ಮಾರುತಿ ಗುರೂಜಿಯವರಿಗೆ ಹಸ್ತಾಂತರಿಸಿದ್ದರು.

