ASMITA ರಗ್ಬಿ ಲೀಗ್: ಕರ್ನಾಟಕ ವನಿತೆಯರಿಗೆ ಚಾಂಪಿಯನ್ ಪಟ್ಟ
ಬೆಂಗಳೂರು: ಚೆನ್ನೈನಲ್ಲಿ ನಡೆದ ದಕ್ಷಿಣ ವಲಯ ಆಸ್ಮಿತಾ ರಗ್ಬಿ ಲೀಗ್‌ನಲ್ಲಿ ಕರ್ನಾಟಕದ ವನಿತೆಯರು ಅದ್ಭುತ ಪ್ರದರ್ಶನ ತೋರಿ ಚಾಂಪಿಯನ್ ಪಟ್ಟ ಗೆದ್ದಿದ್ದಾರೆ. Karnataka delivered an outstanding performance at the South Zone ASMITA Women’s Rugby League winning double crown.
ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಫೆಬ್ರವರಿ 21 ಮತ್ತು 22 ರಂದು ಚೆನ್ನೈನಲ್ಲಿ ಸಬ್ ಜೂನಿಯರ್, ಜೂನಿಯರ್ ಹಾಗೂ ಸೀನಿಯರ್ ಮಹಿಳಾ ವಿಭಾಗದಲ್ಲಿ ಸ್ಪರ್ಧೆಗಳು ನಡೆದವು. ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ್, ತೆಲಂಗಾಣ ಮತ್ತು ಪಾಂಡಿಚೇರಿಯ ತಂಡಗಳು ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದವು.
ಕರ್ನಾಟಕ ತಂಡ 15 ವರ್ಷ ವಯೋಮಿತಿ, 18 ವರ್ಷ ವಯೋಮಿತಿಯ ಬಾಲಕಿಯರು ಹಾಗೂ ಹಿರಿಯ ವನಿತೆಯರ ವಿಭಾಗಲ್ಲಿ ಸ್ಪರ್ಧಿಸಿತ್ತು. ಲೀಗ್ ಹಂತದಲ್ಲಿ ಕರ್ನಾಟಕ ತಂಡ ಅಗ್ರ ಸ್ಥಾನ ಪಡೆದು ಸೆಮಿಫೈನಲ್ ತಲುಪಿತು.

15 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದ ಸೆಮಿಫೈನಲ್‌ನಲ್ಲಿ ಕರ್ನಾಟಕದ ತಂಡ ಆಂಧ್ರಪ್ರದೇಶದ ವಿರುದ್ಧ 25-0 ಅಂತರದಲ್ಲಿ ಜಯ ಗಳಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು. 18 ವರ್ಷ ವಯೋಮಿತಿಯ ವಿಭಾಗದಲ್ಲಿ ಕರ್ನಾಟಕ ತಂಡ ತಮಿಳುನಾಡು ವಿರುದ್ಧ 25-0 ಅಂತರದಲ್ಲಿ ಜಯ ಗಳಿಸಿ ಫೈನಲ್ ಪ್ರವೇಶಿಸಿತು. ಹಿರಿಯ ವನಿತೆಯರ ತಂಡ ಸೆಮಿಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ದ 10-0 ಅಂತರದಲ್ಲಿ ಜಯ ಗಳಿಸಿತು.

ಫೈನಲ್ ಪಂದ್ಯದಲ್ಲಿ 15 ವರ್ಷ ವಯೋಮಿತಿಯ ಕರ್ನಾಟಕ ಬಾಲಕಿಯರ ತಂಡ ಕೇರಳ ವಿರುದ್ಧ 10-0 ಅಂತರದಲ್ಲಿ ಜಯ ಗಳಿಸಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು. 18 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಕರ್ನಾಟಕ ತಂಡ 5-26 ಅಂತರದಲ್ಲಿ ಕೇರಳಕ್ಕೆ ಶರಣಾಗಿ ರನ್ನರ್ಸ್ ಅಪ್‌ಗೆ ತೃಪ್ತಿಪಟ್ಟಿತು.
ಹಿರಿಯ ವನಿತೆಯರ ವಿಭಾಗದಲ್ಲಿ ಕರ್ನಾಟಕ ತಂಡ 12-5 ಅಂತರದಲ್ಲಿ ಕೇರಳ ವಿರುದ್ಧ ಜಯ ಗಳಿಸಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು. ಕರ್ನಾಟಕ ಎರಡು ವಿಭಾಗಗಳಲ್ಲಿ ಚಾಂಪಿಯನ್ ಪಟ್ಟ ಗೆದ್ದು ಒಂದು ವಿಭಾಗದಲ್ಲಿ ರನ್ನರ್ಸ್ ಅಪ್‌ಗೆ ತೃಪ್ತಿಪಟ್ಟಿತು.

ಭಾರತ ರಗ್ಬಿ ತಂಡದ ಮಾಜಿ ನಾಯಕ, ನಟ ವಿನಯ್ ರೈ ಅವರು ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಕರ್ನಾಟಕ U-15 ತಂಡದ ವಿವರ:
ರಫು ಪಾತಿಮಾ, (ಬೆಂಗಳೂರು ನಗರ), ಶ್ರೇಯಾ ಉಮಾರಾಣಿ (ಬೆಂಗಳೂರು ನಗರ), ಆದಿತ್ಯ ಜಗ್ವಾನ್ ಕೆ (ಬೆಂಗಳೂರು ನಗರ), ಪ್ರೀತಮ್ ಕುವರ್ (ಚಾಮರಾಜನಗರ), ಬುಶ್ರಾ ಖಾನ್ (ಶಿವಮೊಗ್ಗ), ಅನನ್ಯ ಎಂ (ಬೆಂಗಳೂರು ನಗರ), ರಿಶಿತಾ ತನ್ವರ್ (ಬೆಂಗಳೂರು ಗ್ರಾಮೀಣ), ಸೃಜನ ಎಸ್ (ಶಿವಮೊಗ್ಗ), ಅಸ್ಮಿತಾ ಎನ್ (ಬೆಂಗಳೂರು ನಗರ), ಕೆ, ಎಂ. ಸಮನ್ವಿತಾ (ಚಿತ್ರದುರ್ಗಾ), ರಿಶಿಕಾ ಎಂ (ಬೆಂಗಳೂರು ನಗರ), ತಮನ್ನ ತಾಜ್ ಎನ್ (ಚಿತ್ರದುರ್ಗಾ),

ಕೋಚ್: ಅಖಿಲ್ ಆನಂದ್, ಮ್ಯಾನೇಜರ್: ಆರ್. ಸಂಧ್ಯಾ
ಕರ್ನಾಟಕ 18 ವರ್ಷ ವಯೋಮಿತಿಯ ತಂಡ
ಹರಿಷ್ಮಿತಾ ಎಚ್.ಎಸ್ (ಬೆಂಗಳೂರು ನಗರ), ಐಶ್ವರ್ಯ ಆರ್. (ಉಡುಪಿ), ಸಿಂಧೂಶ್ರೀ ಎಸ್. (ಬೆಂಗಳೂರು ನಗರ), ಪಂಚಮಿ ಎಚ್. (ಬೆಂಗಳೂರು ನಗರ), ವೇದಿಕಾ ಶಿವಣ್ಣ (ಬೆಂಗಳೂರು ನಗರ), ಗ್ರೇಸ್ ಮರ್ಸಿ ಎ (ಬೆಂಗಳೂರು ನಗರ), ನಿಹಾರಿಕಾ ಶರ್ಮಾ (ಬೆಂಗಳೂರು ನಗರ), ದೀಪ್ತಿ ಆರ್ (ಚಾಮರಾಜನಗರ), ಅಪರ್ಣಾ ಮಾರಿಯಾ (ಬೆಂಗಳೂರು ನಗರ), ಶಮಿತ ಪಿ (ಬೆಂಗಳೂರು ನಗರ), ಅಲಿಯಾ ಜಾಸ್ಮಿನ್ (ಚಾಮರಾಜನಗರ), ಪ್ರತೀಕ್ಷಾ ಎಸ್ (ಬೆಂಗಳೂರು ಗ್ರಾಮಾಂತರ).
ಕೋಚ್: ಲೋಕೇಶ್ ಆರ್, ಮ್ಯಾನೇಜರ್: ಮಧು ಕುಮಾರ್ ಎನ್.

ಕರ್ನಾಟಕ ಹಿರಿಯ ಮಹಿಳಾ ತಂಡ
ಯಲ್ಲಮ್ಮ ಜ್ಯೋತಿ, ಪೂರ್ಣಿಮಾ ಎಸ್, ದಾನಿಯಾ ಎ, ನಂದಿನಿ ಸಿ, ಮಧುಶ್ರೀ ಎಂ.ಆರ್, ಧೃತಿ ವೈ, ಸಂಜನಾ ರಾಥೋಡ್, ನಿಖಿತಾ ಎಂ, ರೂಪಾ ಎಚ್, ಆಯಿಶಾ.
ಕೋಚ್: ತರುಣ್ ಅಪ್ಪಣ್ಣ, ಮ್ಯಾನೇಜರ್: ಮೇಘನಾ ಆರ್.

