Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಕೂರ್ಗ್‌ ಹಾಕ್ಸ್‌ ತಂಡ ಚೈರೋಸ್‌ ಭೀಮಯ್ಯ ಹಾಕಿ ಚಾಂಪಿಯನ್‌

ಬೆಂಗಳೂರು: ಪಾಳೆಯ ತಾಲೂಕು ತಂಡವನ್ನು 7-5 ಅಂತರದಲ್ಲಿ ಸೋಲಿಸಿದ ಕೂರ್ಗ್‌ ಹಾಕ್ಸ್‌ ತಂಡವು ಐದನೇ  ಆವೃತ್ತಿಯ QNET ಚೈರೋಸ್‌ ಭೀಮಯ್ಯ ಹಾಕಿ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ. Coorg Hawks defeated Pale Taluk with a scoreline of 7–5 to lift the Winner’s Trophy. The teams in third and fourth position were Southern Command and DYES Karnataka respectively.

ಫೀಲ್ಡ್‌ ಮಾರ್ಷಲ್‌ ಕೆ ಎಂ ಕಾರಿಯಪ್ಪ ಹಾಕಿ ಅರೆನಾದಲ್ಲಿ ನಡೆದ ಚಾಂಪಿಯನ್‌ಷಿನ್‌ ಫೆಬ್ರವರಿ 20 ರಿಂದ 22 ರ ವರೆಗೆ ನಡೆಯಿತು, ಕೂರ್ಗ್‌ ಚಾಲೆಂಜರ್ಸ್‌ ಚಿಕ್‌ಪೆಟೆ ಅಸೋಸಿಯೇಷನ್‌ (CCCA) ಆಯೋಜಿಸಿದ 5A- ಸೈಡ್‌ ಚಾಂಪಿಯನ್‌ಷಿಪ್‌ಗೆ ಹಾಕಿ ಇಂಡಿಯಾ ಹಾಗೂ ಹಾಕಿ ಕರ್ನಾಟಕ ನೆರವು ನೀಡಿತ್ತು. ದೇಶದ ವಿವಿಧ ಭಾಗಗಳಿಂದ 18 ತಂಡಗಳು ಪಾಲ್ಗೊಂಡಿದ್ದವು. ಸದರ್ನ್‌ ಕಮಾಂಡ್‌ ಮತ್ತು ಡಿವೈಇಎಸ್‌ ತಂಡಗಳು ಅನುಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಗಳಿಸಿದವು. ಭಾರತೀಯ ಕ್ರೀಡಾ ಪ್ರಾಧಿಕಾರದ ತಂಡ ಎಸ್‌ಐಟಿ ವಿಶೇಷ ಶೂಟೌಟ್‌ ಟ್ರೋಫಿಯನ್ನು ಗೆದ್ದುಕೊಂಡಿತು.

ಭಾರತ ಹಾಕಿ ತಂಡ ಮಾಜಿ ಗೋಲ್‌ಕೀಪರ್‌, ಅರ್ಜನ ಪ್ರಶಸ್ತಿ ವಿಜೇತ ಎಬಿ ಸುಬ್ಬಯ್ಯ ಅವರು ಚಾಂಪಿಯನ್ನರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಭಾರತ ಹಾಕಿ ತಂಡದ ಮಾಜಿ ನಾಯಕ ಹಾಗೂ ಏಷ್ಯನ್‌ ಗೇಮ್ಸ್‌ ಚಿನ್ನದ ಪದಕ ವಿಜೇತ ಅನಿಲ್‌ ಅಲೆಕ್ಸಾಂಡರ್‌ ಆಲ್ಡ್ರಿನ್‌, ಅಂತಾರಾಷ್ಟ್ರೀಯ ಮಾಜಿ ಆಟಗಾರ ವಿ.ಎಸ್‌. ವಿನಯ್‌, ಹಾಕಿ ಕರ್ನಾಟಕ ಕೋಚ್‌ ಆಭರಣ್‌ ಸುದೇವ್‌, ಅಂತಾರಾಷ್ಟ್ರೀಯ ಆಟಗಾರ ಮೊಹಮ್ಮದ್‌ ರಾಹೀಲ್‌, ಕಳಿಯಾಂಡ ಭರತ್‌ ಹಾಗೂ ಚೆಲ್ಸೆ ಮೇದಪ್ಪ ಟೂರ್ನಿಗೆ ಮೆರುಗು ನೀಡಿದರು.

ಪ್ರಾಥಮಿಕ ಹಂತದಲ್ಲಿ ಹಾಕಿಯ ಅಭಿವೃದ್ಧಿಗೆ QNET ಉತ್ತಮ ಪ್ರೋತ್ಸಾಹ ನೀಡಲಿದೆ, ಈ ಟೂರ್ನಿಯು ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದೆ,” ಎಂದು QNET ನ ಕಾರ್ಪೊರೇಟ್‌ ಕಮ್ಯೂನಿಕೇಷನ್‌ನ ಭಾರತ ವಲಯದ ಮುಖ್ಯಸ್ಥ ನಿಶ್ಚಲ್‌ ಸಿ ಹೇಳಿದ್ದಾರೆ,


administrator