ಡಾ. ಕಾರ್ತಿಕ್ ಕರ್ಕೇರ ರಾಷ್ಟ್ರೀಯ ಮ್ಯಾರಥಾನ್ ಚಾಂಪಿಯನ್
ನವದೆಹಲಿ: ಮುಂಬೈಯಲ್ಲಿ ನೆಲೆಸಿರುವ ಮಂಗಳೂರಿನ ಡಾ. ಕಾರ್ತಿಕ್ ಜಯರಾಜ್ ಕರ್ಕೇರ (Orthopaedic Surgeon) ಅವರು ಭಾನುವಾರ ಡೆಲ್ಲಿಯಲ್ಲಿ ನಡೆದ ಡೆಲ್ಲಿ ಮ್ಯಾರಥಾನ್ ಚಾಂಪಿಯನ್ಷಿಪ್ನಲ್ಲಿ ಜಯ ಸಾಧಿಸುವುದರೊಂದಿಗೆ ರಾಷ್ಟ್ರೀಯ ಚಾಂಪಿಯನ್ ಪಟ್ಟ ಗೆದ್ದಿದ್ದಾರೆ ಮಾತ್ರವಲ್ಲ ಏಷ್ಯನ್ ಗೇಮ್ಸ್ಗೂ ಅರ್ಹತೆ ಪಡೆದಿದ್ದಾರೆ. Dr Kartik Jayaraj Karkera, orthopedic surgeon won the Delhi Marathon and qualify for Asian Games.
2 ಗಂಟೆ 13:10 ನಿಮಿಷಗಳಲ್ಲಿ ಗುರಿ ತಲುಪಿಸ ಡಾ. ಕಾರ್ತಿಕ್ ಎಲೈಟ್ ಗುಂಪಿನಲ್ಲಿ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡರು. ಡಾ. ಕಾರ್ತಿಕ್ ಇತ್ತೀಚೆಗೆ ಮುಂಬೈಯಲ್ಲಿ ನಡೆದ ಟಾಟಾ ಮ್ಯಾರಥಾನ್ನಲ್ಲೂ ಚಾಂಪಿಯನ್ ಪಟ್ಟ ಗೆದ್ದುಕೊಂಡಿದ್ದಾರೆ.

ವಿಜಯ ಸಾಧಿಸಿದ ನಂತರ ದೆಹಲಿಯಿಂದ www.sportsmail.met ಜೊತೆ ಮಾತನಾಡಿದ ಡಾ. ಕಾರ್ತಿಕ್, “ಕಠಿಣ ಶ್ರಮಕ್ಕೆ ಬೆಲೆ ಸಿಕ್ಕಿದೆ. ಏಷ್ಯನ್ ಗೇಮ್ಸ್ನಲ್ಲಿ ದೇಶವನ್ನು ಪ್ರತಿನಿಧಿಸುವ ಭಾಗ್ಯ ಸಿಕ್ಕಿದ್ದು ಕನಸು ನನಸಾದ ಕ್ಷಣ. ನನ್ನ ವೃತ್ತಿ ಬದುಕಿನ ಸಮಯವನ್ನು ಕ್ರೀಡೆಗೆ ಮುಡುಪಾಗಿಟ್ಟಿರುವುದಕ್ಕೆ ಫಕ ಸಿಕ್ಕಿದೆ,” ಎಂದರು.

