Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ರೋಹಿತ್‌ ಉತ್ತಮ ಗುಣಮಟ್ಟದ ನಾಯಕ: ರಾಹುಲ್‌ ದ್ರಾವಿಡ್‌

ಬೆಂಗಳೂರು: ಭಾರತದಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ರೋಹಿತ್‌ ಶರ್ಮಾ ಹೊಸ ಭಾಷ್ಯ ಬರೆದಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾವು ಸ್ವಲ್ಪ ಹಿಂದೆ ಬಿದ್ದೇವೆ. ರನ್‌ ಗಳಿಕೆಯಲ್ಲಿ ಹಿನ್ನಡೆ ಕಂಡಿದ್ದೇವೆ ಎಂದೆನಿಸುತ್ತಿತ್ತು. ಆ ಸಂದರ್ಭದಲ್ಲಿ ರೋಹಿತ್‌ ಶರ್ಮಾ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದರು. ಬೇರೆವರಿಗೆ ಅದೇಶ ಮಾಡುವ ಬದಲು ತಾವೇ ಮುಂದೆ ನಿಂತು ಟೆಸ್ಟ್‌ ಕ್ರಿಕೆಟ್‌ನಲ್ಲಿ ಯಶಸ್ಸಿಗೆ ಕಾರಣಾದರು ಎಂದು ಭಾರತ ಕ್ರಿಕೆಟ್‌ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ರಾಹುಲ್‌ ದ್ರಾವಿಡ್‌ ಅವರು ಅಭಿಪ್ರಾಯಪಟ್ಟರು. What was brilliant was that Rohit took the lead immediately. He took responsibility for setting the tempo himself, rather than asking others to do it.

ಅವರು ಮಾಜಿ ಹಿರಿಯ ಪತ್ರಕರ್ತ ಆರ್‌.ಕೌಶಿಕ್‌ ಅವರ ಬರೆದ “ದಿ ರೈಸ್‌ ಆಫ್‌ ದಿ ಹಿಟ್‌ ಮ್ಯಾನ್‌” ಕೃತಿಯ ಕುರಿತ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. “ವೈಟ್‌ಬಾಲ್‌ ಕ್ರಿಕೆಟ್‌ನಲ್ಲಿ ಭಾರತ ಸದ್ಯ ಪ್ರಭುತ್ವ ಸಾಧಿಸಿದ್ದು ಉತ್ತಮ ಪ್ರದರ್ಶನ ತೋರುತ್ತಿದೆ. ಟಿ20 ಕ್ರಿಕೆಟ್‌ನಲ್ಲೂ ಭಾರತ ಉತ್ತಮ ಪ್ರದರ್ಶನ ತೋರುತ್ತಿದೆ. ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಭಾರತ ಸೆಮಿಫೈನಲ್‌ ಹಂತದ ವರೆಗೆ ಸಲಭವಾಗಿ ಸಾಗಲಿದೆ,” ಎಂದು ದ್ರಾವಿಡ್‌ ಹೇಳಿದರು.

ದ್ರಾವಿಡ್‌ ಅವರ ಮಾಜಿ ಸಹ ಆಟಗಾರ, ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ವೆಂಕಟೇಶ್‌ ಪ್ರಸಾದ್‌ ಅವರು ವರ್ಚುವಲ್‌ ಮೂಲಕ ಕಾರ್ಯಕ್ರಮದಲ್ಲಿ ಸೇರಿಕೊಂಡು ರೋಹಿತ್‌ ಶರ್ಮಾ ಅವರ ಕ್ರಿಕೆಟ್‌ ಬದುಕಿನ ಸಾಧನೆಗಳ ಬಗ್ಗೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಭಾರತ ಹಾಕಿ ತಂಡದ ಮಾಜಿ ನಾಯಕ ಧನರಾಜ್‌ ಪಿಳ್ಳೈ, ಕ್ರಿಕೆಟ್‌ ದಿಗ್ಗಜ ಜಿ.ಆರ್‌, ವಿಶ್ವನಾಥ್‌, ಭಾರತ ಹಾಕಿ ತಂಡದ ಮಾಜಿ ನಾಯಕ ಪಿ.ಆರ್.‌ ಶ್ರೀಜೇಶ್‌ ಪಾಲ್ಗೊಂಡಿದ್ದರು.


administrator