Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಒಡಿಶಾದಲ್ಲಿ ಪಿಸಿಐ ಚೇರ್ಮನ್‌ ಸತ್ಯನಾರಾಯಣಗೆ ಸನ್ಮಾನ

ಭುವನೇಶ್ವರ:  ಭಾರತೀಯ ಪ್ಯಾರಾಲಿಂಪಿಕ್ಸ್‌ ಸಮಿತಿ (The Paralympic Committee of India (PCI) ಯ ಚೇರ್ಮನ್‌ ಕನ್ನಡಗಿ ಕೆ. ಸತ್ಯನಾರಾಯಣ ಅವರನ್ನು ಒಡಿಶಾ ರಾಜ್ಯದ ಗವರ್ನರ್‌ ಹರಿ ಬಾಬು ಅವರು ಗೌರವಿಸಿದರು. Hon’ble Governor of Odisha Shri Hari Babu felicitated The Paralympic Committee of India (PCI) Chairperson Sathyanarayan Shivamogga

ಫೆಬ್ರವರಿ ತಿಂಗಳಲ್ಲಿ ಒಡಿಶಾದ ಆತಿಥ್ಯದಲ್ಲಿ ನಡೆಯಲಿರುವ ರಾಷ್ಟ್ರೀಯ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದ ಸಿದ್ಧತೆಯ ಕುರಿತು ಗವರ್ನರ್‌ ಕಚೇರಿಯಲ್ಲಿ ನಡೆದ ಸಭೆಯ ಸಂದರ್ಭದಲ್ಲಿ ಸತ್ಯನಾರಾಯಣವ ಅವರನ್ನು ಗೌರವಿಸಲಾಯಿತು. ಹೊಸ ದಿಲ್ಲಿಯಲ್ಲಿ ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ ಯಶಸ್ವಿಯಾಗುವಲ್ಲಿ ಸತ್ಯನಾರಾಯಣ ಅವರ ಪಾತ್ರ ಪ್ರಮುಖವಾಗಿತ್ತು.

ಕಳೆದ ಐದು ದಶಕಗಳಿಂದ ಕ್ರೀಡಾಕ್ಷೇತ್ರದಲ್ಲಿ ತಮ್ಮನ್ನು ತೊಡಗಸಿಕೊಂಡಿರುವ ಸತ್ಯನಾರಾಯಣ ಅವರು ಕರ್ನಾಟಕ ಅಥ್ಲೆಟಿಕ್ಸ್‌ ಸಂಸ್ಥೆಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿ, ನಂತರ ಭಾರತೀಯ ಪ್ಯಾರಾಲಿಂಪಿಕ್ಸ್‌ನ ಕೋಚ್‌ ಆಗಿ, ಈಗ ಪಿಸಿಐನ ಉನ್ನತ ಹುದ್ದೆಗೆ ಏರಿದರು. ದಕ್ಷಿಣ ಏಷ್ಯಾ ಪ್ಯಾರಾ ಸ್ಪೋರ್ಟ್ಸ್‌ ಫೆಡರೇಷನ್‌ನ ಸ್ಥಾಪಿಸಿರುವ ಸತ್ಯನಾರಾಯಣ ಅವರು ಈಗ ಅದರ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಕ್ರೀಡಾಪಟುವೊಬ್ಬರಿಗೆ ಕ್ರೀಡಾಸಂಸ್ಥೆಯ ಜವಾಬ್ದಾರಿ ನೀಡಿದರೆ ಯಾವ ರೀತಿಯಲ್ಲಿ ಯಶಸ್ಸು ಸಾಧಿಸಬಹುದು ಎಂಬುದಕ್ಕೆ ಕೆ. ಸತ್ಯನಾರಾಯಣ ಅವರು ಉತ್ತಮ ನಿದರ್ಶನ.


administrator