Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಭಾರತದ ಹಾಕಿಗೆ ನೂರು ವರುಷ, ನ. 7 ರಂದು ದೇಶದೆಲ್ಲೆಡೆ ಹರುಷ

ಬೆಂಗಳೂರು: ನವೆಂಬರ್‌ 7 ಭಾರತದ ಕ್ರೀಡಾ ಇತಿಹಾಸದಲ್ಲೇ ಅವಿಸ್ಮರಣೀಯ ದಿನ. ಭಾರತದ ಹಾಕಿ ಕ್ರೀಡೆಗೆ ಶತಮಾನ ತುಂಬಿದ ಸಂಭ್ರಮ.ದೇಶದ 500 ಜಿಲ್ಲೆಗಳಲ್ಲಿ 1000 ಹಾಕಿ ಪಂದ್ಯಗಳು ನಡೆಯಲಿವೆ. ಮಾಜಿ, ಹಾಲಿ ಹಾಗೂ ಯುವ ಆಟಗಾರರು ಸೇರಿದಂತೆ ಒಟ್ಟು 36,000 ಆಟಗಾರರು ವಿವಿಧ ಕ್ರೀಡಾಂಗಳಲ್ಲಿ ಹಾಕಿ ಆಡಲಿದ್ದಾರೆ. On 7 November 2025, India will pause to celebrate this remarkable century. The heart of the celebration will beat at the Major Dhyan Chand National Stadium in New Delhi.

1925 ನವೆಂಬರ್‌ 7 ರಂದು ಭಾರತಕ್ಕೆ ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್‌ ಸದಸ್ಯತ್ವ ನೀಡಿತು. ನಂತರದ ಮೂರು ವರ್ಷಗಳಲ್ಲೇ ಅಂದರೆ 1928ರಲ್ಲಿ ಭಾರತ ಹಾಕಿ ತಂಡ ಆಮ್‌ಸ್ಟರ್ಡ್ಯಾಮ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಭವಿಷ್ಯದಲ್ಲಿ ಜಗತ್ತಿನ ಶ್ರೇಷ್ಠ ಹಾಕಿ ತಂಡವಾಗಲಿರುವ ಸಂದೇಶ ನೀಡಿತು. ನಂತರದ ದಶಕಗಳಲ್ಲಿ ಭಾರತ ಎಂಟು ಒಲಿಂಪಿಕ್ಸ್‌ ಚಿನ್ನ, ಒಂದು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕ ಗೆದ್ದು ಪ್ರಭುತ್ವ ಸಾಧಿಸಿತು. ಹಾಕಿಯ ಇತಿಹಾಸದಲ್ಲೇ ಒಲಿಂಪಿಕ್ಸ್‌ನಲ್ಲಿ ಅತಿ ಹೆಚ್ಚು ಚಿನ್ನದ ಪದಕ ಗೆದ್ದ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

1928-59 ರ ವರೆಗೆ ಭಾರತ ಒಲಿಂಪಿಕ್ಸ್‌ನಲ್ಲಿ ಒಂದೂ ಪಂದ್ಯವನ್ನು ಸೋಲದೆ ಚಿನ್ನದ ಪದಕಗಳನ್ನು ಗೆದ್ದಿತ್ತು. 1960ರಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತು. ಈ ನಡುವೆ ಭಾರತ ಸತತ 30 ಪಂದ್ಯಗಳನ್ನು ಗೆದ್ದು ಸಾಧನೆ ಮಾಡಿತು. 1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲ ಚಿನ್ನ ಗೆದ್ದ ನಂತರ ಭಾರತ ಆ ನಂತರ ಯಶಸ್ಸು ಕಂಡಿರುವುದು ಟೋಕಿಯೋ ಹಾಗೂ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕದ ಮೂಲಕ. ಇದಕ್ಕೂ ಮುನ್ನ 1975ರಲ್ಲಿ ವಿಶ್ವಕಪ್‌ ಹಾಕಿ ಚಾಂಪಿಯನ್‌ ಪಟ್ಟ, ಏಷ್ಯನ್‌ ಗೇಮ್ಸ್‌‌ ಹಾಗೂ ಏಷ್ಯಾಕಪ್‌, ಕಾಮನ್ವೆಲ್ತ್‌ ಕ್ರೀಡಾಕೂಟಗಳಲ್ಲೂ ಭಾರತದ ಮಹಿಳಾ ಹಾಗೂ ಪುರುಷರ ತಂಡಗಳು ಯಶಸ್ಸಿನ ಹಾದಿ ತುಳಿದಿವೆ.

ಭಾರತದ ಹಾಕಿಯ ದಂತ ಕತೆ ಮೇಜರ್‌ ಧ್ಯಾನ್‌ಚಂದ್‌ ಕ್ರೀಡಾಂಗಣದಲ್ಲಿ ಹಾಕಿ ಇಂಡಿಯಾ ಇಲೆವೆನ್‌ ಹಾಗೂ ಕ್ರೀಡಾ ಸಚಿವರ ಇಲೆವೆನ್‌ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ. ಇದೇ ಸಂದರ್ಭದಲ್ಲಿ ““100 Years of Indian Hockey” ಬಿಡುಗಡೆಯಾಗಲಿದೆ.

ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ, ಹಾಕಿ ಕರ್ನಾಟಕವೂ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.


administrator