ಕೆಎಸ್‌ಸಿಎ ಕ್ರಿಕೆಟ್: ಮೈಸೂರಿನ ಎನ್‌ಆರ್ ಸ್ಪೋರ್ಟ್ಸ್ ಗ್ರೂಪ್ ತಂಡ ಚಾಂಪಿಯನ್
ಬೆಂಗಳೂರು: ಮೈಸೂರಿನ ಎನ್‌ಆರ್ ಸ್ಪೋರ್ಟ್ಸ್ ಗ್ರೂಪ್ ತಂಡ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ)ಯ ಗ್ರೂಪ್ 2, ಡಿವಿಜನ್ 2 ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ.
ಫೈನಲ್ ಪಂದ್ಯದಲ್ಲಿ ಎನ್‌ಆರ್ ಸ್ಪೋರ್ಟ್ಸ್ ಗ್ರೂಪ್ ತಂಡ, ಮೈಸೂರಿನ ಸೌತ್ ವೆಸ್ಟರ್ನ್ ರೈಲ್ವೆ ಇನ್ಸ್‌ಟಿಟ್ಯೂಟ್ ತಂಡವನ್ನು 169 ರನ್‌ಗಳಿಂದ ಮಣಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಎನ್‌ಆರ್ ಸ್ಪೋರ್ಟ್ಸ್ ಗ್ರೂಪ್ ತಂಡ, 40 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 299 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತು. ತಂಡದ ಪರ ಯಶಸ್ವಿನ್ ಗೌಡ 67 ರನ್, ಸೈಯದ್ ಸಲ್ಮಾನ್ 30 ರನ್ ಹಾಗೂ ಕಿಶನ್ ಬೇಡಾರೆ ಅಜೇಯ 84 ರನ್ ಗಳಿಸಿದರು. ಸೌತ್ ವೆಸ್ಟರ್ನ್ ರೈಲ್ವೆ ಇನ್ಸ್‌ಟಿಟ್ಯೂಟ್ ತಂಡದ ಪರ ಅರುಣ್ 55 ರನ್‌ಗಳಿಗೆ 3 ವಿಕೆಟ್ ಉರುಳಿಸಿದರು.
ನಂತರ ಕಠಿಣ ಗುರಿ ಬೆನ್ನತ್ತಿದ ಸೌತ್ ವೆಸ್ಟರ್ನ್ ರೈಲ್ವೆ ಇನ್ಸ್‌ಟಿಟ್ಯೂಟ್ ತಂಡ 31.2 ಓವರ್‌ಗಳಲ್ಲಿ 130 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಸೋಲು ಅನುಭವಿಸಿತು. ಅರುಣ್ ಬಿ. 44 ರನ್, ಸುಹಾಸ್ 27 ರನ್ ಬಾರಿಸಿದರು. ಎನ್‌ಆರ್ ಸ್ಪೋರ್ಟ್ಸ್ ಗ್ರೂಪ್ ತಂಡದ ಪರ ಉತ್ತಮ್ ಅಯ್ಯಪ್ಪ 15 ರನ್ನಿಗೆ 2 ವಿಕೆಟ್, ಶಾಂತರಾಜ್ ಸಿ. 22 ರನ್ನಿಗೆ 2 ವಿಕೆಟ್ ಮತ್ತು ಬೌಲಿಂಗ್‌ನಲ್ಲೂ ಮಿಂಚಿದ ತನು ಬಿ. 28 ರನ್‌ಗಳಿಗೆ 5 ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್
ಎನ್‌ಆರ್ ಸ್ಪೋರ್ಟ್ಸ್ ಗ್ರೂಪ್: 40 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 299 ರನ್
ಯಶಸ್ವಿನ್ ಗೌಡ 67, ಸೈಯದ್ ಸಲ್ಮಾನ್ 30, ಕಿಶನ್ ಬೇಡಾರೆ ಅಜೇಯ 84; ಅರುಣ್ 3/55.
ಸೌತ್ ವೆಸ್ಟರ್ನ್ ರೈಲ್ವೆ ಇನ್ಸ್‌ಟಿಟ್ಯೂಟ್: 31.2 ಓವರ್‌ಗಳಲ್ಲಿ 130 ರನ್‌ಗಳಿಗೆ ಆಲೌಟ್
ಅರುಣ್ ಬಿ. 44, ಸುಹಾಸ್ 27; ಉತ್ತಮ್ ಅಯ್ಯಪ್ಪ 2/15, ಶಾಂತರಾಜ್ ಸಿ. 2/22, ತನು ಬಿ. 5/28.