Tuesday, November 12, 2024

111 ಪದಕ,  6 ವಿಶ್ವ ದಾಖಲೆ. 13 ಏಷ್ಯನ್‌, 15 ಪ್ಯಾರಾ ಏಷ್ಯನ್‌ ದಾಖಲೆ

ಈ ಬಾರಿಯ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ 107 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು, ಸಾಮಾನ್ಯರಿಗಿಂತ ನಾವು ಅಸಮಾನ್ಯರು ಎಂದ ಪ್ಯಾರಾ ಅಥ್ಲೀಟ್‌ಗಳು ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ 111 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಭಾರತ ಗೆದ್ದಿರುವ 111 ಪದಕಗಳಲ್ಲಿ 6 ವಿಶ್ವದಾಖಲೆ, 13 ಏಷ್ಯನ್‌ ದಾಖಲೆ ಹಾಗೂ 15 ಪ್ಯಾರಾ ಏಷ್ಯನ್‌ ದಾಖಲೆಗಳು ಸೇರಿವೆ. India won 111 medals with 6 world records, 13 Asian records and 15 Para Asian records.

2018ರ ಜಕಾರ್ತ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಗೆದ್ದಿರುವುದು 72 ಪದಕಗಳು. ಆದರೆ ಹಾಂಗ್ಜೌನಲ್ಲಿ 111 ದಾಖಲೆಯ ಪದಕಗಳು. ಇದರಲ್ಲಿ 29 ಚಿನ್ನ, 31 ಬೆಳ್ಳಿ ಹಾಗೂ 51 ಕಂಚಿನ ಪದಕಗಳು ಸೇರಿವೆ. ಇದರೊಂದಿಗೆ ಪದಕಗಳ ಪಟ್ಟಿಯಲ್ಲಿಯೂ ಐತಿಹಾಸಿಕವೆಂಬಂತೆ 5ನೇ ಸ್ಥಾನ ಗಳಿಸಿದೆ.

ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಭಾರತ ಗೆದ್ದಿರುವ 29 ಪದಕಗಳು ಕೂಡ ಹೊಸ ದಾಖಲೆ. 2014ರಲ್ಲಿ ಭಾರತ 3 ಚಿನ್ನದ ಪದಕಗಳನ್ನು ಗೆದ್ದಿತ್ತು. ಕ್ಲಬ್‌ ಥ್ರೋ, ಜಾವೆಲಿನ್‌ ಥ್ರೋ, ರಾಪಿಡ್‌ ಚೆಸ್‌ ಮತ್ತು ಡಿಸ್ಕಸ್‌ ವಿಭಾಗದಲ್ಲಿ ಕ್ಲೀನ್‌ ಸ್ವೀಪ್‌ ಸಾಧನೆ ಮಾಡಿತ್ತು.  ಪ್ಯಾರಾ ರೋಹಿಂಗ್‌, ಪ್ಯಾರಾ ಟೆಕ್ವಾಂಡೋ ಮತ್ತು ಕೆನಾಯಿಂಗ್‌ ವಿಭಾಗದಲ್ಲಿ ಭಾರತ ಮೊದಲ ಬಾರಿಗೆ ಪದಕ ಗೆದ್ದಿದೆ.

111 ಪದಕಗಳಲ್ಲಿ ಭಾರತದ ವಿನಿತೆಯರು 40 ಪದಕಗಳನ್ನು ಗೆದ್ದಿರುವುದು ವಿಶೇಷ.

Related Articles