Thursday, March 28, 2024

ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಗೆಲುವು: ಮಿಥಾಲಿ ರಾಜ್ ವಿಶ್ವದಾಖಲೆ

ಬೆಂಗಳೂರು: ಮಹಿಳಾ ಕ್ರಿಕೆಟ್‌ನ ಸಚಿನ್ ತೆಂಡೂಲ್ಕರ್ ಖ್ಯಾತಿಯ ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಮಹಿಳಾ ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಗೆಲುವುಗಳಿಗೆ ಸಾಕ್ಷಿಯಾದ ವಿಶ್ವದಾಖಲೆ ನಿರ್ಮಿಸಿದ್ದಾರೆ.

PC: Twitter/Mithali Raj

ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ 2ನೇ ಪಂದ್ಯವನ್ನು ಗೆಲ್ಲುವ ಮೂಲಕ ಮಿಥಾಲಿ ರಾಜ್ ಅತಿ ಹೆಚ್ಚು ಗೆಲುವುಗಳ ವಿಶ್ವದಾಖಲೆ ನಿರ್ಮಿಸಿದರು. ಈ ಮೂಲಕ ಆಸ್ಟ್ರೇಲಿಯಾದ ಕ್ಯಾರೆನ್ ರಾಲ್ಟನ್ ಅವರ 108 ಗೆಲುವುಗಳ ವಿಶ್ವದಾಖಲೆಯನ್ನು ಮಿಥಾಲಿ ಪುಡಿಗಟ್ಟಿದರು. 35 ವರ್ಷಗ ಹೈದರಾಬಾದ್ ಆಟಗಾರ್ತಿ ಮಿಥಾಲಿ ರಾಜ್ ಇದುವರೆಗೆ 189 ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನಾಡಿದ್ದಾರೆ. ಅಲ್ಲದೆ ಏಕದಿನ ಕ್ರಿಕೆಟ್‌ನಲ್ಲಿ 6 ಸಾವಿರ ರನ್ ಗಳಿಸಿ ವಿಶ್ವದ ಮೊಟ್ಟ ಮೊದಲ ಆಟಗಾರ್ತಿ ಎಂಬ ವಿಶ್ವದಾಖಲೆಯನ್ನೂ ಹೊಂದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಮೊದಲೆರಡು ಪಂದ್ಯಗಳನನ್ನು ಗೆದ್ದಿದ್ದ ಭಾರತ, ಶನಿವಾರ ನಡೆದ 3ನೇ ಪಂದ್ಯವನ್ನು ಸೋತರೂ, ಸರಣಿಯನ್ನು 2-1ರ ಅಂತರದಲ್ಲಿ ಗೆದ್ದುಕೊಂಡಿತು.

ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಗೆಲುವುಗಳು
ಮಿಥಾಲಿ ರಾಜ್(ಭಾರತ): 109
ಕ್ಯಾರೆನ್ ರಾಲ್ಟನ್(ಆಸ್ಟ್ರೇಲಿಯಾ) : 108
ಅಲೆಕ್ಸ್ ಬ್ಲಾಕ್‌ವೆಲ್(ಆಸ್ಟ್ರೇಲಿಯಾ) : 107
ಶಾರ್ಲೋಟ್ ಎಡ್ವರ್ಡ್ಸ್(ಇಂಗ್ಲೆಂಡ್) : 103

Related Articles