ಮುಂಬೈ: ಪುಣೆ ಮೂಲದ ಈಜುಗಾರ ರೋಹನ್ ಮೋರೆ, ಏಳು ಸಾಗರಗಳನ್ನು ಈಜಿದ ಭಾರತದ ಮತ್ತು ಏಷ್ಯಾದ ಮೊದಲ ಈಜು ತಾರೆ ಎಂಬ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.
ಏಳು ಸಾಗರಗಳನ್ನು ಈಜಿನ ವಿಶ್ವದ ಅತ್ಯಂತ ಕಿರಿಯ ಈಜುಪಟು ಎಂಬ ಹಿರಿಮೆಯನ್ನೂ ರೋಹನ್ ಮೋರೆ ತಮ್ಮದಾಗಿಸಿಕೊಂಡಿದ್ದಾರೆ. ಈ ಏಳು ಸಾಗರದ ಮ್ಯಾರಥಾನ್ ಈಜು ನಾರ್ಥ್ ಚಾನೆಲ್, ದಿ ಕುಕ್ ಸ್ಟ್ರೇಟ್, ದಿ ಮೊರಾಕ್ಕೊ ಚಾನೆಲ್, ದಿ ಇಂಗ್ಲಿಷ್ ಚಾನೆಲ್, ದಿ ಕ್ಯಾಟಲಿನಾ ಚಾನೆಲ್, ದಿ ತ್ಸುಗಾರು ಸ್ಟ್ರೇಟ್ ಮತ್ತು ದಿ ಸ್ಟ್ರೇಟ್ ಆ್ ಗಿಬ್ರಾಲ್ಟರ್‌ಗಳನನ್ನು ಒಳಗೊಂಡಿತ್ತು.
ಈ ಸಾಧನೆ ಮಾಡಿದ ವಿಶ್ವದ 7ನೇ ಈಜುತಾರೆ ಎಂಬ ಹಿರಿಮೆಗೆ ರೋಹನ್ ಪಾತ್ರರಾಗಿದ್ದಾರೆ.
‘ಈ ಸವಾಲನ್ನು ಜಯಿಸಿದ ಭಾರತದ ಮೊದಲ ಮತ್ತು ವಿಶ್ವದ 7ನೇ ವ್ಯಕ್ತಿ ಎಂಬ ಗೌರವ ಸಿಕ್ಕಿರುವುದರಿಂದ ಹೆಮ್ಮೆಯಾಗುತ್ತಿದೆ’’ ಎಂದು ರೋಹನ್ ಮೋರೆ ತಮ್ಮ ಸಂಭ್ರಮ ಹಂಚಿಕೊಂಡಿದ್ದಾರೆ.