Thursday, December 12, 2024

ಶ್ರೀಕಾಂತ್ ಗೆ ಶಾಕ್, ಸೈನಾ ಕ್ವಾರ್ಟರ್ ಗೆ

ನಾಂಜಿಂಗ್:ಇಲ್ಲಿ ನಡೆಯುತ್ತಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ನಲ್ಲಿ ಹಾಲಿ ಚಾಂಪಿಯನ್ ಕಿಡಂಬಿ ಶ್ರೀಕಾಂತ್ ಸೋಲನುಭಾವಿಸಿದರೆ ಭಾರತದ ಭರವಸೆಯ ಆಟಗಾರ್ತಿ ಸೈನಾ ನೆಹ್ವಾಲ್ ಜಯಗಳಿಸಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
೨೦೧೫ ಹಾಗೂ ೨೦೧೭ರಲ್ಲಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದಿದ್ದ ಸೈನಾ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ೨೦೧೩ ರ ಚಾಂಪಿಯನ್ ಥಾಯ್ಲೆಂಡ್ ನ ರಚನಾಕ್ ಇಂಥನಾನ್ ವಿರುದ್ಧ ೨೧-೧೬, ೨೧-೧೯ ಅಂತರದಲ್ಲಿ ಗೆದ್ದು ಮುನ್ನಡೆದರು. ಕ್ವಾರ್ಟರ್ ಫೈನಲ್ ನಲ್ಲಿ ಸೈನಾ ಒಲಿಂಪಿಕ್ ಚಾಂಪಿಯನ್ ಹಾಗು ಎರಡು ಬಾರಿ ವಿಶ್ವ ಚಾಂಪಿಯನ್ ಪಟ್ಟ ಗೆದ್ದಿರುವ ಸ್ಪೇನ್ ನ ಕರೋಲಿನ್ ಮರಿನ್ ವಿರುದ್ದ ಸೆಣಸಲಿದ್ದಾರೆ.
ಮಿಶ್ರ ಡಬಲ್ಸ್ ನಲ್ಲಿ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಹಾಗೂ ಸಾತ್ವಿಕ್ ರಾಜ್ ರಾಂಕಿ ರೆಡ್ಡಿ ಜೋಡಿ ೨೦-೨೨, ೨೧-೧೪, ೨೧-೬ ಅಂತರದಲ್ಲಿ ವಿಶ್ವದ ೭ನೇ ರಾಂಕ್ ಜೋಡಿ ಮಲೇಷ್ಯಾದ ಗೋ ಸೂನ್ ಹೌತ್ ಮತ್ತು ಶೆವೊನ್ ಜೇಮ್ ಲೈ ವಿರುದ್ಧ ಜಯ ಗಳಿಸಿದರು.
ಐದನೇ ಶ್ರೇಯಾಂಕಿತ ಶ್ರೀಕಾಂತ್  ಪದಕದ ಕನಸು ಪ್ರಿ ಕ್ವಾರ್ಟರ್ ಫೈನಲ್ ನಲ್ಲೇ ಅಂತ್ಯ ಗೊಂಡಿತು. ಮಲೇಷ್ಯಾದ ಡ್ಯಾರೆನ್ ಲೈವ್ ವಿರುದ್ಧ ೧೮-೨೧, ೧೮-೨೧ ಅಂತರದಲ್ಲಿ ಸೋಲನುಭವಿಸಿದರು.

Related Articles